SHIVAMOGGA LIVE | 10 JULY 2023
ತರಗತಿಯಲ್ಲಿ ಛತ್ರಿ ಹಿಡಿದು ಕೂರಬೇಕಾದ ವಿದ್ಯಾರ್ಥಿಗಳು
RIPPONPETE : ಮಳೆ ಸುರಿದಾಗಲೆಲ್ಲ ತರಗತಿಯಲ್ಲಿ (School) ಛತ್ರಿ ಹಿಡಿದು ಪಾಠ ಕೇಳಬೇಕಾದ ಪರಿಸ್ಥಿತಿ ಹೊಸನಗರದ ರಿಪ್ಪನ್‌ಪೇಟೆ ಸಮೀಪದ ಕೋಡುರು ಸರ್ಕಾರಿ ಪ್ರೌಢಶಾಲೆಯಲ್ಲಿದೆ. ಕಳೆದ ವಾರ ಮಳೆ ಸುರಿಯುವಾಗ ಮಕ್ಕಳು ಛತ್ರಿ ಹಿಡಿದು ತರಗತಿಯಲ್ಲಿ ಕುಳಿತಿದ್ದರು. ಈ ವಿಡಿಯೋ ವೈರಲ್ ಆಗಿದೆ. ಶಾಲೆಯ ಮೇಲ್ಛಾವಣಿ ದುರಸ್ಥಿ ಮಾಡದಿರುವುದೆ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶಾಲೆಯಲ್ಲಿ ಸುಮಾರು 125 ವಿದ್ಯಾರ್ಥಿಗಳು ದಾಖಲಾಗಿದ್ದು, ಆರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಸುರಿದ ಭಾರಿ ಮಳೆಗೆ ಶಾಲೆಯ ಮೇಲ್ಛಾವಣಿ ಹಾನಿಯಾಗಿತ್ತು. ಈತನಕ ದುರಸ್ಥಿ ಮಾಡದಿರುವುದರಿಂದ ಮಕ್ಕಳು ಛತ್ರಿ ಹಿಡಿದು ತರಗತಿಯಲ್ಲಿ ಕುಳಿತು ಪಾಠ ಕೇಳುವಂತಾಗಿದೆ.
ಮೊದಲ ವಾರಾಂತ್ಯದಲ್ಲೆ ಅಂದಾಜು ಹತ್ತು ಸಾವಿರ ಜನ
SAGARA : ಮಳೆ ಆರಂಭವಾದ ಮೊದಲ ವಾರಾಂತ್ಯದಲ್ಲಿ ಜೋಗ ಜಲಪಾತ ವೀಕ್ಷಣೆಗೆ ಅಂದಾಜು ಹತ್ತು ಸಾವಿರ ಪ್ರವಾಸಿಗರು ಆಗಮಿಸಿದ್ದರು. ಶನಿವಾರ ಮೂರು ಸಾವಿರ ಪ್ರವಾಸಿಗರು ಭೇಟಿ ನೀಡದ್ದರೆ, ಭಾನುವಾರ ಆರು ಸಾವಿರಕ್ಕೂ ಹೆಚ್ಚು ಜನರು ಜಲಪಾತವನ್ನು ಕಣ್ತುಂಬಿಕೊಂಡರು. ಜಲಪಾತ ವೀಕ್ಷಣೆ ಸ್ಥಳದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಪ್ರವಾಸಿಗರ ಓಡಾಟಕ್ಕೆ ಮತ್ತು ವಾಹನಗಳ ಪಾರ್ಕಿಂಗ್‌ಗೆ ಸಮಸ್ಯೆಯಾಯಿತು. ಮಯೂರ ಹೊಟೇಲ್ ಮುಂಭಾಗ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ – ಜೋಗ ಜಲಪಾತದ ವೈಭವ, ಕಣ್ತುಂಬಿಕೊಳ್ಳಲು ಜನವೋ ಜನ
JOBS – ಖಾಸಗಿ ಶಾಲೆಯಲ್ಲಿ ಶಿಕ್ಷಕರ ಹುದ್ದೆ
SHIMOGA : ಗೋಪಿಶೆಟ್ಟಿಕೊಪ್ಪದ ವಿದ್ಯಾವರ್ಧಕ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರು ಬೇಕಾಗಿದ್ದಾರೆ. ಹುದ್ದೆ 1 – ಸೈನ್ಸ್ ಮತ್ತು ಮ್ಯಾಥ್ಸ್ ಶಿಕ್ಷಕರು – ಎಂಎಸ್ಸಿ, ಬಿ.ಎಸ್ಸಿ, ಡಿ.ಎಡ್ / ಬಿ.ಎಡ್ ಆಗಿರಬೇಕು. ಹುದ್ದೆ 2 – ಸ್ಪೋಕನ್ ಇಂಗ್ಲೀಷ್ – ಯಾವುದೆ ಪದವಿ (ಇಂಗ್ಲೀಷ್ ಸಂಹವನ ಕಡ್ಡಾಯ). ಆಸಕ್ತರು 8088389393 ಅಥವಾ 8431181141 ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
ಮೊಬೈಲ್ ಫೋನ್ ಹಿಂತಿರುಗಿಸಲು ನಿರ್ಧಾರ
SAGARA : ಅಂಗನವಾಡಿ ಕಾರ್ಯಕರ್ತೆಯರಿಗೆ ಕಳಪೆ ಗುಣಮಟ್ಟದ ಮೊಬೈಲ್ ಫೋನ್ ವಿತರಿಸಲಾಗಿದೆ. ಇದರಲ್ಲಿ ಅಂಕಿ ಅಂಶಗಳನ್ನು ದಾಖಲು ಮಾಡಲು ಕಷ್ಟವಾಗುತ್ತಿದೆ. ಅದ್ದರಿಂದ ಮೊಬೈಲ್ ಫೋನ್‌ಗಳನ್ನು ಸರ್ಕಾರಕ್ಕೆ ಹಿಂತಿರುಗಿಸಲಾಗುತ್ತಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆಯ ಅಧ್ಯಕ್ಷೆ ತ್ರಿವೇಣಿ ತಿಳಿಸಿದ್ದಾರೆ. ಸಾಗರದ ಸಿಡಿಪಿಒ ಕಚೇರಿಗೆ ಇವತ್ತು ಮೊಬೈಲ್ ಹಿಂತಿರುಗಿಸಲು ನಿರ್ಧರಿಸಲಾಗಿದೆ.
ಶಿವಮೊಗ್ಗದಲ್ಲಿ ಇವತ್ತಿನಿಂದ ರಾಜ್ಯಮಟ್ಟದ ಪಂದ್ಯಾವಳಿ
SHIMOGA : ನಗರದ ಗುಂಡಪ್ಪಶೆಡ್‌ನ ರಾವ್ ಸ್ಪೋರ್ಟ್ಸ್ ಅರೇನಾದ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಇಂದಿನಿಂದ ಜು.15ರವರೆಗೆ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಲಿದೆ. 414 ಕ್ರೀಡಾಪಟುಗಳ ಮತ್ತು ಶ್ರೇಯಾಂಕಿತ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಒಟ್ಟು 613 ಪಂದ್ಯಾವಳಿಗಳು ನಡೆಯಲಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200