SHIVAMOGGA LIVE | 18 JULY 2023
ಶಿವಮೊಗ್ಗಕ್ಕೆ ನೂತನ ಉಪ ವಿಭಾಗಾಧಿಕಾರಿ
SHIMOGA : ಕೆಎಎಸ್ ಅಧಿಕಾರಿ ಜಿ.ಹೆಚ್.ಸತ್ಯನಾರಾಯಣ ಅವರು ಶಿವಮೊಗ್ಗ ಉಪ ವಿಭಾಗಾಧಿಕಾರಿಯಾಗಿ ಇವತ್ತು ಅಧಿಕಾರ ಸ್ವೀಕರಿಸಿದರು. ತಾಲೂಕು ಕಚೇರಿಯಲ್ಲಿರುವ ಉಪ ವಿಭಾಗಾಧಿಕಾರಿ (Assistant Commissioner) ಕಚೇರಿಯಲ್ಲಿ ಅವರು ಅಧಿಕಾರ ವಹಿಸಿಕೊಂಡರು. ತಹಶೀಲ್ದಾರ್ ನಾಗರಾಜ್ ಸೇರಿದಂತೆ ತಾಲೂಕು ಕಚೇರಿ ಸಿಬ್ಬಂದಿ ನೂತನ ಉಪ ವಿಭಾಗಾಧಿಕಾರಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಜಿ.ಹೆಚ್.ಸತ್ಯನಾರಾಯಣ ಅವರು ಈ ಹಿಂದೆ ಶಿವಮೊಗ್ಗದ ತಹಶೀಲ್ದಾರ್ ಆಗಿದ್ದರು. ಚುನಾವಣಾ ವಿಭಾಗದಲ್ಲಿಯು ಕರ್ತವ್ಯ ನಿರ್ವಹಿಸಿದ್ದರು.
ಇದನ್ನೂ ಓದಿ – ಗುಟ್ಕಾ ಜಗಿದು ಕಂಡಲ್ಲೆಲ್ಲ ಉಗುಳುವವರೆ ಹುಷಾರ್, ಕೋರ್ಟಲ್ಲಿ ಗೋಡೆಗೆ ಉಗಿದವನಿಗೆ ತಕ್ಕ ಪಾಠ ಕಲಿಸಿದ ಜಡ್ಜ್
‘ಬೇಡಿಕೆ ಈಡೇರದಿದ್ದರೆ ವಿಷ ಕುಡಿಯುತ್ತೇವೆʼ
SHIMOGA : ಹಾರನಹಳ್ಳಿ ಗ್ರಾಮ ಪಂಚಾಯಿತಿ ನಾಗರಬಾವಿ ಗ್ರಾಮದಲ್ಲಿ ಹಲವು ವರ್ಷದಿಂದ ವಾಸವಾಗಿರುವ ಗ್ರಾಮಸ್ಥರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ತಾವು ವಾಸವಾಗಿರುವ ಜಾಗ ಖಾಸಗಿಯವರದ್ದು ಎಂದು ಹೇಳಲಾಗುತ್ತಿದೆ. ತಾವು ವಾಸವಾಗಿರುವ ಜಾಗವನ್ನು ಸರ್ಕಾರಿ ಪಡೆ ಎಂದು ನಮೂದಿಸಬೇಕು. ಇಲ್ಲವಾದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ವ್ಯಕ್ತಿಯೊಬ್ಬ ಕ್ರಿಮಿನಾಶಕ ಸೇವಿಸಲು ಯತ್ನಿಸಿದಾಗ ಪೊಲೀಸರು ಕ್ರಿಮಿನಾಶಕ ಬಾಟಲಿಯನ್ನು ವಶಕ್ಕೆ ಪಡೆದರು. ರಿಯಾಜ್ ಅಹಮದ್, ಉಬೇದುಲ್ಲಾ, ಹ್ಯಾಪಿಜಾಬಿ, ಶಬ್ಬೀರ್, ಸಿರಿಜಾನ್ ಸೇರಿಂತೆ ಹಲವರು ಪ್ರತಿಭಟನೆಯಲ್ಲಿದ್ದರು.
ಇದನ್ನೂ ಓದಿ – ಡೇಂಜರ್ ರೋಡ್ ಆಗುತ್ತಿದೆ ಶಿವಮೊಗ್ಗದ ಕಾಂಕ್ರಿಟ್ ರಸ್ತೆ, ಯಾಕೆ? ಇಲ್ಲಿದೆ 4 ಪ್ರಮುಖ ಪಾಯಿಂಟ್
ದೀಪಕ್ ಪೆಟ್ರೋಲ್ ಬಂಕ್‌ನಲ್ಲಿ ರಕ್ತದಾನ ಶಿಬಿರ
SHIMOGA : ಹಿಂದೂಸ್ಥಾನ್ ಪೆಟ್ರೋಲಿಯಿಂ ಕಾರ್ಪೊರೇಷನ್ ವತಿಯಿಂದ ಬಿ.ಹೆಚ್.ರಸ್ತೆಯ ದೀಪಕ್ ಸರ್ವಿಸ್ ಸ್ಟೇಷನ್‌ನಲ್ಲಿ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು. ಈ ವೇಳೆ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಟೆಕ್ನೋರಿಂಗ್ಸ್ ಸಂಸ್ಥೆಯ ಮಾಲೀಕ ಭೂಪಾಳಂ ಶಶಿಧರ್ ಅವರು ಉದ್ಘಾಟಿಸಿದರು. ರಾಮಿ ಅಂಡ್ ಕೋ ಮಾಲೀಕ ಅಮರ್ ಬೇಳಗೂರು, ಬಿ.ಎಂ.ಜಗನ್ನಾಥ್, ಸೇಲ್ಸ್ ಆಫೀಸರ್ ಸುಧೀರ್ ಟೇಕುಮಲ್ಲ, ದೀಪಕ್ ಸರ್ವೀಸ್ ಸ್ಟೇಷನ್ ಮಾಲೀಕಿ ಪ್ರತಿಭಾ ಅರುಣ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200