ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE NEWS | 7 AUGUST 2023
ಮನೆ ಮುಂದೆ ನಿಲ್ಲಿಸಿದ್ದ ಬೈಕ್ ನಾಪತ್ತೆ
SHIMOGA : ರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಹೋಂಡಾ ಶೈನ್ ಬೈಕ್
ಬೆಳಗಾಗುವುದರಲ್ಲಿ ಕಳ್ಳತನವಾಗಿದೆ. ನಗರದ ಮಾರ್ನಮಿಬೈಲ್‌ನ ಪಾತ್ರೆ ವ್ಯಾಪಾರಿ ವೆಂಟಕೇಶ್ ಅವರಿಗೆ ಸೇರಿದ ಬೈಕ್ ಕಳುವಾಗಿದೆ. ವೆಂಕಟೇಶ್ ಅವರು ಪಾತ್ರೆ ವ್ಯಾಪಾರಕ್ಕೆಂದು ತಮಿಳುನಾಡಿಗೆ ತೆರಳಿದ್ದರು. ತಮ್ಮ ಬೈಕನ್ನು ಸಹೋದರ ರಾಜಕುಮಾರ್‌ಗೆ ಕೊಟ್ಟಿದ್ದರು. ರಾಜಕುಮಾರ್ ಅವರು ಆ.2ರ ರಾತ್ರಿ ಮನೆ ಮುಂದೆ ಬೈಕ್ ನಿಲ್ಲಿಸಿದ್ದರು. ಆ.3ರ ಬೆಳಗ್ಗೆ ಎದ್ದಾಗ ಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿ ತಡವಾಗಿ ದೊಡ್ಡಪೇಟೆ ಠಾಣೆ ದೂರು ನೀಡಿದ್ದಾರೆ.
ಇದನ್ನೂ ಓದಿ – ಗುಡ್ಡೇಕಲ್ ಜಾತ್ರೆ, ಶಿವಮೊಗ್ಗದಲ್ಲಿ ಒಂದು ದಿನ ಮಾರ್ಗ ಬದಲಾವಣೆ, ಯಾವ್ಯಾವ ವಾಹನ ಯಾವ ರೂಟ್‌ನಲ್ಲಿ ಓಡಾಡಬೇಕು?

ಮಾರ್ಕೆಟಿಂಗ್ ಎಗ್ಸಿಕ್ಯೂಟಿವ್ ತಲೆಗೆ ಹೆಂಚಿನಿಂದ ಹೊಡೆದು ಹಲ್ಲೆ
SHIMOGA : ಹಣಕಾಸು ವಿಚಾರವಾಗಿ ಮಾರ್ಕೆಟಿಂಗ್ ಎಗ್ಸಿಕ್ಯೂಟಿವ್
ಮೇಲೆ ಸಂಬಂಧಿಯೇ ಹಲ್ಲೆ ನಡೆಸಿದ್ದಾನೆ. ಶಿವಮೊಗ್ಗದ ಬುದ್ಧಾನಗರದ ಬಾಲು ಕ್ಯಾಂಟೀನ್ ಮುಂದೆ ಘಟನೆ ಸಂಭವಿಸಿದೆ. ರಾಗಿಗುಡ್ಡ ನಿವಾಸಿ ಶ್ರೇಯಸ್ ಗಾಯಗೊಂಡಿದ್ದಾನೆ. ಸೇಹಿತನೊಂದಿಗೆ ಶ್ರೇಯಸ್ ಬುದ್ಧಾನಗರದ ಬಳಿ ಬೈಕಿನಲ್ಲಿ ತೆರಳುತ್ತಿದ್ದಾಗ ಸಂಬಂಧಿಯೊಬ್ಬ ಅಡ್ಡಗಟ್ಟಿದ್ದಾನೆ. ಹಣ ವಾಪಸ್ ಕೊಡುವಂತೆ ಅವಾಚ್ಯವಾಗಿ ನಿಂದಿಸಿದ್ದಾನೆ. ಅಲ್ಲಿಯೆ ಬಿದ್ದಿದ್ದ ಹೆಂಚಿನಿಂದ ತಲೆಗೆ, ಕೈಯಿಂದ ಪಕ್ಕೆಲುಬಿಗೆ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಕೂಡಲೆ ಶ್ರೇಯಸ್‌ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ಹಿಂತಿರುಗಿದ ಎರಡು ಮನೆಗಳ ಮಾಲೀಕರಿಗೆ ಕಾದಿತ್ತು ಶಾಕ್

ಲಕ್ಷ್ಮೀ ಟಾಕೀಸ್ ಬಳಿ ಯುವಕ ಅರಸ್ಟ್
SHIMOGA : ಲಕ್ಷ್ಮೀ ಟಾಕೀಸ್ ಬಳಿ ಗಾಂಜಾ ಸೇವನೆ ಮಾಡಿದ್ದ
ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಸಚಿನ್ ಬಂಧಿತ. ವಿನೋಬನಗರ ಠಾಣೆ ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭ ಲಕ್ಷ್ಮೀ ಟಾಕೀಸ್ ಬಳಿ ಸಚಿನ್ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ವಿಚಾರಣೆ ಮಾಡಿದಾಗ ಈತ ಮಾದಕ ವಸ್ತು ಸೇವನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢವಾಗಿದೆ. ಕೂಡಲೆ ಆತನನ್ನು ಬಂಧಿಸಲಾಗಿದೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.jpeg)


