SHIVAMOGGA LIVE NEWS | 6 AUGUST 2023
SHIMOGA : ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಆಡಿಕೃತ್ತಿಗೆ ಜಾತ್ರೆ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ವಾಹನಗಳ ಸಂಚಾರದ ಮಾರ್ಗ ಬದಲಾವಣೆ (ROUTE CHANGE) ಮಾಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ.
ಆಡಿಕೃತ್ತಿಗೆ ಜಾತ್ರೆ ಹಿನ್ನೆಲೆ ದೊಡ್ಡ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಸಂಚಾರ ದಟ್ಟಣೆ ಉಂಟಾಗಬಾರದು ಎಂಬ ಕಾರಣಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ. ಆಗಸ್ಟ್ 9ರಂದು ಇಡೀ ದಿನ ವಾಹನಗಳ ಸಂಚಾರದ ಮಾರ್ಗ (ROUTE CHANGE) ಬದಲಾಯಿಸಲಾಗಿದೆ.
ಯಾವೆಲ್ಲ ಮಾರ್ಗ ಬದಲಾವಣೆಯಾಗಿದೆ?
• ಬೆಂಗಳೂರು, ಭದ್ರಾವತಿ, ಎನ್.ಆರ್.ಪುರ ಕಡೆಯಿಂದ ಬರುವ ಸಿಟಿ ಬಸ್, ಖಾಸಗಿ ಬಸ್, ಇತರೆ ಭಾರಿ ವಾಹನಗಳು, ಕಾರುಗಳು ಬೈಪಾಸ್ ರಸ್ತೆ ಮೂಲಕ ಶಿವಮೊಗ್ಗ ನಗರದ ಕಡೆಗೆ ಹೋಗಬೇಕು.
• ಶಿವಮೊಗ್ಗ ನಗರದ ಕಡೆಯಿಂದ ಬೆಂಗಳೂರು, ಭದ್ರಾವತಿ, ಚಿತ್ರದುರ್ಗ, ಹೊಳೆಹೊನ್ನೂರು ಕಡೆಗೆ ಹೋಗುವ ಎಲ್ಲಾ ಸಿಟಿ ಬಸ್ಸುಗಳು, ಖಾಸಗಿ ಬಸ್ಸುಗಳು, ಭಾರಿ ವಾಹನಗಳು ಮತ್ತು ಕಾರುಗಳು ಬೈಪಾಸ್ ರಸ್ತೆ ಮೂಲಕ ಹೋಗಬೇಕು.
• ಚಿತ್ರದುರ್ಗ ಹೊಳೆಹೊನ್ನೂರಿನಿಂದ ಬರುವ ಬಸ್ಸುಗಳು ಮತ್ತು ಭಾರಿ ವಾಹನಗಳು ಭದ್ರಾವತಿ ಮಾರ್ಗವಾಗಿ ಬೈಪಾಸ್ ಮೂಲಕ ಶಿವಮೊಗ್ಗ ನಗರ ಒಳ ಬರಬಹುದು ಮತ್ತು ಹೊರ ಹೋಗಬಹುದು.
ಇದನ್ನೂ ಓದಿ – ಶಿವಮೊಗ್ಗದ ‘ಹರೋಹರ ಜಾತ್ರೆ’ ದಿನಾಂಕ ಘೋಷಣೆ, ಜುಲೈ ಬದಲು ಆಗಸ್ಟ್ ತಿಂಗಳಲ್ಲಿ ನಡೆಯುತ್ತಿರುವುದೇಕೆ?
• ಹೊಳೆಹೊನ್ನೂರು ಸರ್ಕಲ್’ನಿಂದ ಗುರುಪುರದ ಯಲವಟ್ಟಿ ಕ್ರಾಸ್ ವರೆಗೆ ಸಾರ್ವಜನಿಕ ವಾಹನಗಳು ಓಡಾಡದಂತೆ ನಿಷೇಧಿಸಲಾಗಿದೆ.
• ಚಿತ್ರದುರ್ಗ ಹೊಳೆಹೊನ್ನೂರಿನಿಂದ ಬರುವ ಮತ್ತು ಆ ಕಡೆಗೆ ಹೋಗುವ ಎಲ್ಲಾ ಲಘು ವಾಹನಗಳು ಪಿಳ್ಳಂಗಿರಿ ಕ್ರಾಸ್ನಿಂದ ಯಲವಟ್ಟಿ ಮಾರ್ಗವಾಗಿ ಮತ್ತು ಹೊಳೆಬೆನವಳ್ಳಿ ತಾಂಡ ಕ್ರಾಸ್ನಿಂದ ಯಲವಟ್ಟಿ ಮಾರ್ಗವಾಗಿ ಮಲವಗೊಪ್ಪದ ಮೂಲಕ ಬಿ.ಹೆಚ್.ರಸ್ತೆಗೆ ಸೇರಿಕೊಂಡು ಬೈಪಾಸ್ ರಸ್ತೆಯ ಮಾರ್ಗವಾಗಿ ಶಿವಮೊಗ್ಗ ನಗರಕ್ಕೆ ಹೋಗಬೇಕು.
• ಶಿವಮೊಗ್ಗ ನಗರದಿಂದ ಹೊಳೆಹೊನ್ನೂರು ಚಿತ್ರದುರ್ಗಕ್ಕೆ ಹೋಗುವ ಲಘು ವಾಹನಗಳು (ದ್ವಿಚಕ್ರ ವಾಹನಗಳು ಮತ್ತು ಕಾರುಗಳು) ಬೈಪಾಸ್ ರಸ್ತೆ ಮೂಲಕ ಮಲವಗೊಪ್ಪದ ಯಲವಟ್ಟಿ ಕ್ರಾಸ್ ನಿಂದ ಯಲವಟ್ಟಿ ಮಾರ್ಗವಾಗಿ ಪಿಳ್ಳಂಗಿರಿ ಕ್ರಾಸ್ ಮೂಲಕ ಹೊಳೆಹೊನ್ನೂರು ಚಿತ್ರದುರ್ಗಕ್ಕೆ ಹೋಗಬೇಕು.
• ಹರಿಹರ ಹೊನ್ನಾಳಿಯಿಂದ ಬರುವ ಎಲ್ಲಾ ಭಾರಿ ವಾಹನಗಳು ಮತ್ತು ಬಸ್ಸುಗಳು ಸಂಗೊಳ್ಳಿ ರಾಯಣ್ಣ ಸರ್ಕಲ್, ಕೆ.ಇ.ಬಿ ಸರ್ಕಲ್, ಉಷಾ ನರ್ಸಿಂಗ್ ಹೋಂ ಸರ್ಕಲ್ 100 ಅಡಿ ರಸ್ತೆ, ವಿನೋಬನಗರ ಮಾರ್ಗವಾಗಿ ತೆರಳಬೇಕು.