ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHMOGA NEWS | 22 ನವೆಂಬರ್ 2021
ರೈಲ್ವೆ ಇಲಾಖೆಯ ನೈಋತ್ಯ ವಿಭಾಗದ ವ್ಯಾಪ್ತಿಯಲ್ಲಿ ಸಂಚರಿಸುವ ವಿವಿಧ ರೈಲುಗಳಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಶಿವಮೊಗ್ಗ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಎರಡು ರೈಲುಗಳ ವಿಚಾರದಲ್ಲಿಯೂ ಕೆಲವು ಮಾರ್ಪಾಡು ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಏನೆಲ್ಲ ಮಾರ್ಪಾಡು ಮಾಡಲಾಗಿದೆ
ಮೈಸೂರು ತಾಳಗುಪ್ಪ (ರೈಲು ಸಂಖ್ಯೆ 16227) ರೈಲಿನಲ್ಲಿ ಇನ್ಮುಂದೆ ಹೆಚ್ಚುವರಿಯಾಗಿ ಒಂದು ಸಕೆಂಡ್ ಕ್ಲಾಸ್ ಸ್ಲೀಪರ್ ಕೋಚ್ ಅಳವಡಿಸಲಾಗುತ್ತಿದೆ. ನವೆಂಬರ್ 21ರಿಂದಲೇ ಈ ಕೋಚ್ ಅಳವಡಿಸಲಾಗಿದೆ. ಇನ್ಮುಂದೆ ಈ ರೈಲಿನಲ್ಲಿ 19 ಕೋಚ್’ಗಳು ಇರಲಿವೆ.
ಅದೇ ರೀತಿ ತಾಳುಗುಪ್ಪ – ಮೈಸೂರು (ರೈಲು ಸಂಖ್ಯೆ 16228) ರೈಲಿನಲ್ಲೂ ಹೆಚ್ಚುವರಿಯಾಗಿ ಒಂದು ಸಕೆಂಡ್ ಕ್ಲಾಸ್ ಸ್ಲೀಪರ್ ಕೋಚ್ ಅಳವಡಿಸಲಾಗಿದೆ. ನವೆಂಬರ್ 22ರಿಂದ ಈ ಕೋಚ್ ಅಳವಡಿಸಲಾಗುತ್ತದೆ. ಇನ್ಮುಂದೆ ಈ ರೈಲಿನಲ್ಲಿ 19 ಕೋಚ್’ಗಳು ಇರಲಿವೆ.
ಭಾಗಶಃ ಮಾರ್ಗ ಕಡಿತ
ಶಿವಮೊಗ್ಗ ಟೌನ್ – ಚಿಕ್ಕಮಗಳೂರು (ರೈಲು ಸಂಖ್ಯೆ 07365) ರೈಲನ್ನು ತಾತ್ಕಾಲಿಕವಾಗಿ ಬೀರೂರಿನವರೆಗೆ ಮಾತ್ರ ಚಲಿಸಲಿದೆ. ನವೆಂಬರ್ 23ರಿಂದ ಮುಂದಿನ ಆದೇಶದವರೆಗೂ ಈ ರೈಲು ಬೀರೂರಿನವರೆಗೆ ಚಲಿಸಲಿದೆ.
ಅದೆ ರೀತಿ ಚಿಕ್ಕಮಗಳೂರಿನಿಂದ ಶಿವಮೊಗ್ಗ ಟೌನ್’ಗೆ (ರೈಲು ಸಂಖ್ಯೆ 07366) ಸಂಚರಿಸುವ ರೈಲು ತಾತ್ಕಾಲಿಕವಾಗಿ ಬೀರೂರಿನಿಂದ ಶಿವಮೊಗ್ಗಕ್ಕೆ ಬರಲಿದೆ. ನವೆಂಬರ್ 25ರಿಂದ ಮುಂದಿನ ಆದೇಶದವರೆಗೆ ಈ ರೈಲು ಬೀರೂರಿನಿಂದ ಚಲಿಸಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422