ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 28 NOVEMBER 2024
ನವದೆಹಲಿ : ಕೇಂದ್ರದ ಕೃಷಿ, ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿದ ಮಲೆನಾಡು, ಕರಾವಳಿ ಭಾಗದ ಸಂಸದರ ಹಾಗೂ ಬೆಳೆಗಾರರ ನಿಯೋಗ ಅಡಿಕೆ (Adike) ಬೆಳೆಯುವವರು ಎದುರಿಸುತ್ತಿರುವ ಸಮಸ್ಯೆಗಳ ವಿಷಯವಾಗಿ ಚರ್ಚಿಸಿತು. ಬೆಳೆಗಾರರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಸಚಿವರಿಗೆ ನಿಯೋಗ ಮನವಿ ಮಾಡಿತು.
ಶಿವಮೊಗ್ಗದಲ್ಲಿ ಮೆಕ್ಕೆಜೋಳ ಸಂಶೋಧನಾ ಕೇಂದ್ರವನ್ನು ಶೀಘ್ರ ಸ್ಥಾಪಿಸಲು ಮನವಿ ಮಾಡಲಾಯಿತು. ಡಿ. 6ರಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆಯಲಿರುವ ಅಡಿಕೆ ಬೆಳೆಗಾರರ ಸಭೆಗೆ ಸಚಿವರನ್ನು ಆಹ್ವಾನಿಸಲಾಯಿತು.
ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ದಕ್ಷಿಣ ಕನ್ನಡದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟಾ, ಬೆಳೆಗಾರರಾದ ಹೆಚ್.ಎಸ್.ಮಂಜಪ್ಪ, ಯು.ಹೆಚ್.ರಾಮಪ್ಪ, ಅನಿಲ್ ವೋಡೆಯಾರ್, ಮಲ್ಲಿಕಾರ್ಜುನ ಗೋಪಾಲಕೃಷ್ಣ ವೈದ್ಯ, ಪ್ರಕಾಶ ಹೆಗಡೆ, ಗಿರೀಶ್ ಹೆಗಡೆ ಮತ್ತು ನರಸಿಂಹ ಹೆಗಡೆ ಈ ಸಂದರ್ಭದಲ್ಲಿ ಇದ್ದರು.
ಇದನ್ನೂ ಓದಿ » ಶಿವಮೊಗ್ಗ – ಭದ್ರಾವತಿ ಹೆದ್ದಾರಿ, ಅಪಾಯಕಾರಿ ಸ್ಥಿತಿಯಲ್ಲಿದ್ದ ಕಂಬಗಳು ಸುಸ್ಥಿತಿಗೆ
Adike Growers
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422