ಶಿವಮೊಗ್ಗ, ತೀರ್ಥಹಳ್ಳಿ, ಸಾಗರ ಮಾರುಕಟ್ಟೆಗಳಲ್ಲಿ ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ, ತೀರ್ಥಹಳ್ಳಿ, ಸಾಗರ ಮತ್ತು ಭದ್ರಾವತಿ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಶಿವಮೊಗ್ಗ ಮಾರುಕಟ್ಟೆ

ಶಿವಮೊಗ್ಗ ಮಾರುಕಟ್ಟೆಯಲ್ಲಿ ಇಂದು ಸರಕು ವಿಧದ ಅಡಿಕೆ ಪ್ರತಿ ಕ್ವಿಂಟಾಲ್‌ಗೆ ಕನಿಷ್ಠ ₹55,509, ಗರಿಷ್ಠ ₹96,059 ಹಾಗೂ ಮಾದರಿ ಬೆಲೆ ₹78,299 ರಂತೆ ಮಾರಾಟವಾಗಿದೆ. ಇನ್ನು ಬೆಟ್ಟೆ ಅಡಿಕೆ ಕನಿಷ್ಠ ₹53,039 ರಿಂದ ಗರಿಷ್ಠ ₹63,599 (ಮಾದರಿ ಬೆಲೆ ₹62,539) ದರ ಪಡೆದಿದೆ. ರಾಶಿ ಇಡಿ ಅಡಿಕೆ ಕನಿಷ್ಠ ₹48,069, ಗರಿಷ್ಠ ₹54,689 ಹಾಗೂ ಮಾದರಿ ಬೆಲೆ ₹53,089 ರಂತೆ ವಹಿವಾಟು ನಡೆಸಿದೆ. ಗೊರಬಲು ಅಡಿಕೆ ಕನಿಷ್ಠ ₹21,800 ರಿಂದ ಗರಿಷ್ಠ ₹44,069 (ಮಾದರಿ ಬೆಲೆ ₹40,299) ವರೆಗೆ ಮಾರಾಟವಾಗಿದೆ.

Adike-Rate-Areca-Nut-Price-in-Shimoga-Market- ಅಡಿಕೆ ರೇಟ್‌ - ಅಡಿಕೆ ಧಾರಣೆ

ಸಾಗರ ಮಾರುಕಟ್ಟೆ

ಸಾಗರ ಮಾರುಕಟ್ಟೆಯಲ್ಲಿ ಇಂದು ರಾಶಿ ಅಡಿಕೆಯು ಪ್ರತಿ ಕ್ವಿಂಟಾಲ್‌ಗೆ ಕನಿಷ್ಠ ₹44,089, ಗರಿಷ್ಠ ₹51,929 ರಂತೆ ಮಾರಾಟವಾಗಿದೆ. ಚಾಲಿ ಅಡಿಕೆ ಕನಿಷ್ಠ ₹40,300 ರಿಂದ ಗರಿಷ್ಠ ₹41,299 ರವರೆಗೆ ದರ ಪಡೆದುಕೊಂಡಿದೆ. ಕೆಂಪುಗೋಟು ಅಡಿಕೆ ₹36,009 ರ ಸ್ಥಿರ ದರದಲ್ಲಿ ಮಾರಾಟವಾಗಿದೆ. ಬಿಳಿ ಗೋಟು ಕನಿಷ್ಠ ₹15,111 ರಿಂದ ಗರಿಷ್ಠ ₹32,399, ಕೋಕ ಅಡಿಕೆ ಕನಿಷ್ಠ ₹16,709 ರಿಂದ ಗರಿಷ್ಠ ₹29,399 ಹಾಗೂ ಸಿಪ್ಪೆಗೋಟು ಕನಿಷ್ಠ ₹8,599 ರಿಂದ ಗರಿಷ್ಠ ₹21,889 ವಹಿವಾಟು ಆಗಿದೆ.

Shivamogga Live Promotion

ತೀರ್ಥಹಳ್ಳಿ ಮಾರುಕಟ್ಟೆ

ತೀರ್ಥಹಳ್ಳಿಯ ಮಾರುಕಟ್ಟೆಯಲ್ಲಿ ಇಂದು ರಾಶಿ ಅಡಿಕೆಯು ಪ್ರತಿ ಕ್ವಿಂಟಾಲ್‌ಗೆ ಕನಿಷ್ಠ ₹43,700 ಹಾಗೂ ಗರಿಷ್ಠ ಬೆಲೆ ₹47,243 ರಂತೆ ಮಾರಾಟವಾಗಿದೆ. ಇನ್ನು ಗೊರಬಲು ಅಡಿಕೆ ಪ್ರತಿ ಕ್ವಿಂಟಾಲ್‌ಗೆ ₹30,000ರ ಸ್ಥಿರ ದರದಲ್ಲಿ ಹಾಗೂ ಸಿಪ್ಪೆಗೋಟು ಅಡಿಕೆಯು ಪ್ರತಿ ಕ್ವಿಂಟಾಲ್‌ಗೆ ₹14,000ರ ನಿಗದಿತ ದರದಲ್ಲಿ ಮಾರಾಟವಾಗಿದೆ.

ಭದ್ರಾವತಿ ಮಾರುಕಟ್ಟೆ

ಭದ್ರಾವತಿ ಮಾರುಕಟ್ಟೆಯಲ್ಲಿ ಇಂದು ಇತರೆ ವಿಧದ ಅಡಿಕೆಗೆ ಕನಿಷ್ಠ ₹26,300, ಗರಿಷ್ಠ ₹50,710 ರವರೆಗಿನ ದರದಲ್ಲಿ ಮಾರಾಟವಾಗಿದೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.