ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS
SHIMOGA | ವಿಧಾನಸಭೆ ಚುನಾವಣೆ ಸಮೀಪದಲ್ಲಿದೆ. ಆಕಾಂಕ್ಷಿಗಳು (ASPIRANTS) ಅಲರ್ಟ್ ಆಗಿದ್ದು, ಜನರ ಗಮನ ಸೆಳೆಯಲು ಸ್ಪರ್ಧೆಗೆ ಬಿದ್ದಿದ್ದಾರೆ. ಜನರೊಂದಿಗೆ ತಾವಿದ್ದೇವೆ ಎಂದು ಬಿಂಬಿಸಿಕೊಳ್ಳಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಹಬ್ಬಗಳು, ಹುಟ್ಟುಹಬ್ಬಗಳು, ದಿನಾಚರಣೆಗಳನ್ನೆ ವೇದಿಕೆ ಮಾಡಿಕೊಂಡು ಜನರ ಮನಸಲ್ಲಿ ತಮ್ಮ ಹೆಸರು ಅಚ್ಚು ಒತ್ತಲು ಪ್ರಯತ್ನಿಸುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಬಹುತೇಕ ಕ್ಷೇತ್ರದಲ್ಲಿ ಎಲ್ಲಾ ಪಕ್ಷಗಳಲ್ಲು ಒಬ್ಬರಿಗಿಂತ ಹೆಚ್ಚು ಆಕಾಂಕ್ಷಿಗಳಿದ್ದಾರೆ (ASPIRANTS) . ಟಿಕೆಟ್ ಸಿಗದಿದ್ದರೆ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇವೆ ಎಂಬ ವರ್ಗವು ಇದೆ. ಇದೆ ಕಾರಣಕ್ಕೆ ಜನರೊಂದಿಗೆ ತಾವಿದ್ದೇವೆ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಶುರುವಾಗಿದೆ.
ಹಬ್ಬಗಳು, ಹುಟ್ಟುಹಬ್ಬಗಳು, ದಿನಾಚರಣೆಗಳು
ಚುನಾವಣೆ ಹೊಸ್ತಿಲಲ್ಲಿ ಹೆಚ್ಚು ಜನರು ಸೇರುವೆಡೆ ಆಕಾಂಕ್ಷಿಗಳು ದೌಡಾಯಿಸುವುದು ಸಾಮಾನ್ಯ. ಈ ಭಾರಿಯು ಇದು ಚಾಲ್ತಿಯಲ್ಲಿದೆ. ಹಬ್ಬಗಳು, ಹುಟ್ಟುಹಬ್ಬಗಳು, ದಿನಾಚರಣೆಗಳು ಸೇರಿದಂತೆ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆಕಾಂಕ್ಷಿಗಳೆ ಹೆಚ್ಚಾಗಿ ಕಾಣಸಿಗುತ್ತಿದ್ದಾರೆ.
ಗಣೇಶೋತ್ಸವ ಸಂದರ್ಭ, ವಿವಿಧ ಗಣಪತಿ ಪೆಂಡಾಲ್’ಗಳಲ್ಲಿ ಆಕಾಂಕ್ಷಿಗಳು ಕಾಣಿಸಿಕೊಂಡು, ಜನರೊಂದಿಗೆ ಬೆರೆತಿದ್ದರು. ಈಗ ದಸರಾ, ದೀಪಾವಳಿ ವೇಳೆ ಯಾವೆಲ್ಲ ಬಗೆಯಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವುದು ಎಂಬುದರ ಯೋಜನೆ ಸಿದ್ಧವಾಗುತ್ತಿದೆ.
ಇನ್ನು, ಕ್ಷೇತ್ರ ವ್ಯಾಪ್ತಿಯ ಪ್ರಮುಖರು, ಗಣ್ಯರ ಹುಟ್ಟುಹಬ್ಬ, ಮದುವೆ ಸಮಾರಂಭಗಳಲ್ಲಿ ಆಕಾಂಕ್ಷಿಗಳ (ASPIRANTS) ಹಾಜರಾತಿ ಸಾಮಾನ್ಯವಾಗಿದೆ. ದಿನಾಚರಣೆಗಳ ಸಂದರ್ಭದಲ್ಲು ಆಕಾಂಕ್ಷಿಗಳು ಪ್ರತ್ಯಕ್ಷವಾಗುತ್ತಿದ್ದಾರೆ.
ಊರ ತುಂಬ ಫ್ಲೆಕ್ಸ್ ಹಾವಳಿ
ತಮ್ಮನ್ನು ತಾವು ಪರಿಚಯ ಮಾಡಿಕೊಳ್ಳಲು ಆಕಾಂಕ್ಷಿಗಳು ಕಂಡುಕೊಂಡ ಸುಲಭ ಮಾರ್ಗ ಫ್ಲೆಕ್ಸ್ ಅಳವಡಿಕೆ. ಕಾರ್ಯಕ್ರಮ ಯಾವುದೆ ಆಗಿರಲಿ, ಹುಟ್ಟುಹಬ್ಬ ಯಾರದ್ದೆ ಆಗಿರಲಿ ಆಕಾಂಕ್ಷಿಗಳ ಭಾವಚಿತ್ರ, ಹೆಸರು ಸಹಿತ ಫ್ಲೆಕ್ಸ್’ಗಳು ರಾರಾಜಿಸಲು ಆರಂಭಿಸುತ್ತವೆ. ಫ್ಲೆಕ್ಸ್’ಗಳಲ್ಲಿ ಆಕಾಂಕ್ಷಿಗಳ ಭಾವಚಿತ್ರ ಮತ್ತು ಹೆಸರು ದೊಡ್ಡದಾಗಿ ಕಾಣುವಂತೆ ಡಿಸೈನ್ ಮಾಡಿಸಲಾಗುತ್ತಿದೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಕುತೂಹಲ ಮೂಡಿಸಿದೆ ಡಾ.ಧನಂಜಯ ಸರ್ಜಿ ಹೇಳಿಕೆ, ಮುಂದಿನ ಚುನಾವಣೆಗೆ ನಿಲ್ಲೋದು ಗ್ಯಾರಂಟಿನಾ? ಏನಾಗಬಹುದು?
ಮುಖ್ಯ ರಸ್ತೆಗಳು, ಸರ್ಕಲ್’ಗಳು, ಹೆಚ್ಚು ಜನರು ಸೇರುವ ಸ್ಥಳಗಳಾದ ಬಸ್ ನಿಲ್ದಾಣ, ಆಸ್ಪತ್ರೆ, ದೇವಸ್ಥಾನಗಳ ಬಳಿ ಒಂದೊಂದು ಫ್ಲೆಕ್ಸ್ ಹಾಕಲಾಗುತ್ತಿದೆ. ಜನರ ಮನಸಲ್ಲಿ ಆಕಾಂಕ್ಷಿಗಳ ಮುಖ ಮತ್ತು ಹೆಸರನ್ನು ರಿಜಿಸ್ಟರ್ ಮಾಡಿಸಲು ಈ ತಂತ್ರ ನಡೆಯುತ್ತಿದೆ.
ಅದ್ಧೂರಿ ಹುಟ್ಟುಹಬ್ಬ ಆಚರಣೆ
ಹುಟ್ಟುಹಬ್ಬದ ಸಂದರ್ಭವನ್ನು ಆಕಾಂಕ್ಷಿಗಳು (ASPIRANTS) ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಹುಟ್ಟುಹಬ್ಬ ಅಥವಾ ಪ್ರಮುಖರ ಹುಟ್ಟುಹಬ್ಬದ ಸಂದರ್ಭ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಮತದಾರರಿಗೆ ಹತ್ತಿರವಾಗಲು ಯತ್ನಿಸುತ್ತಿದ್ದಾರೆ. ಬೈಕ್ ಜಾಥಾ, ರಕ್ತದಾನ, ಅನ್ನದಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಮಾಡಿ, ಜನರ ಗಮನ ಸೆಳೆಯಲಾಗುತ್ತಿದೆ.
ಈ ಹಿಂದೆ, ಚುನಾವಣೆ ದಿನಾಂಕ ಘೋಷಣೆ ಮುಂಚೆ ಹೈಕಮಾಂಡ್ ಅಂಗಳದಲ್ಲಿ ಆಕಾಂಕ್ಷಿಗಳು ಬಲ ಪ್ರದರ್ಶಿಸುತ್ತಿದ್ದರು. ಈಗ ಜನರ ಮನ ಸೆಳೆಯಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಇದರ ಮೂಲಕ ಹೈಕಮಾಂಡ್ ಸಮೀಕ್ಷೆಗಳಲ್ಲಿ ತಮ್ಮ ಹೆಸರು ಮುನ್ನೆಲೆಗೆ ಬರಲಿ ಎಂದು ಪ್ರಯತ್ನಿಸುತ್ತಿದ್ದಾರೆ.
ಕ್ಲಿಕ್ ಮಾಡಿ ಇದನ್ನೂ ಓದಿ | ಕುತೂಹಲ ಮೂಡಿಸಿದೆ ಡಾ.ಧನಂಜಯ ಸರ್ಜಿ ಹೇಳಿಕೆ, ಮುಂದಿನ ಚುನಾವಣೆಗೆ ನಿಲ್ಲೋದು ಗ್ಯಾರಂಟಿನಾ? ಏನಾಗಬಹುದು?
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422