ಇನ್ಮುಂದೆ ಫ್ಲಿಪ್‌ ಕಾರ್ಟ್‌ನಲ್ಲಿ ದೊರೆಯಲಿದೆ ಸಾಲ, ಗ್ರಾಹಕರು, ಮಾರಾಟಗಾರರಿಗೆ ಅನುಕೂಲ, ಹೇಗದು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
ಬೆಂಗಳೂರು: ದೇಶದ ಪ್ರಮುಖ ಇ-ಕಾಮರ್ಸ್ ವೇದಿಕೆಯಾದ ಫ್ಲಿಪ್‌ಕಾರ್ಟ್‌ಗೆ ‍(Flipkart) ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ಯಾಂಕೇತರ ಹಣಕಾಸು ಕಂಪನಿ (ಎನ್‌ಬಿಎಫ್‌ಸಿ) ಪರವಾನಗಿ ನೀಡಿದೆ. ಇದರೊಂದಿಗೆ ಫ್ಲಿಪ್‌ಕಾರ್ಟ್ ಈಗ ತನ್ನ ಪ್ಲಾಟ್‌ಫಾರ್ಮ್ ಮೂಲಕ ನೇರವಾಗಿ ಗ್ರಾಹಕರು ಮತ್ತು ಮಾರಾಟಗಾರರಿಗೆ ಸಾಲ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ.
➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಈ ಪರವಾನಗಿ ಇ-ಕಾಮರ್ಸ್ ವಲಯದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಸದ್ಯ ಹೆಚ್ಚಿನ ಇ-ಕಾಮರ್ಸ್ ಕಂಪನಿಗಳು ಬ್ಯಾಂಕ್ ಅಥವಾ ಇತರೆ ಎನ್‌ಬಿಎಫ್‌ಸಿಗಳ ಸಹಯೋಗದಲ್ಲಿ ಸಾಲ ನೀಡುತ್ತಿವೆ. ಆದರೆ ಫ್ಲಿಪ್‌ಕಾರ್ಟ್ ಆರ್‌ಬಿಐನಿಂದ ನೇರವಾಗಿ ಈ ಪರವಾನಗಿ ಪಡೆದ ಮೊದಲ ದೊಡ್ಡ ಇ-ಕಾಮರ್ಸ್ ಕಂಪನಿಯಾಗಿದೆ.

Flipkart

2022ರಲ್ಲಿ ಅರ್ಜಿ ಸಲ್ಲಿಸಿದ್ದ ಫ್ಲಿಪ್‌ಕಾರ್ಟ್‌ಗೆ ಈ ವರ್ಷದ ಮಾರ್ಚ್ 13ರಂದು ಆರ್‌ಬಿಐ ಅನುಮೋದನೆ ನೀಡಿದೆ. ಈಗ ಫ್ಲಿಪ್‌ ಕಾರ್ಟ್‌ ಕೇವಲ ಸಾಲ ನೀಡಬಹುದಾಗಿದೆ. ಆದರೆ ಠೇವಣಿ ಸ್ವೀಕರಿಸಲು ಅವಕಾಶ ಇರುವುದಿಲ್ಲ.

https://chat.whatsapp.com/JPJ0lTQsTKf365Fqu6Q7cd

ಫ್ಲಿಪ್‌ಕಾರ್ಟ್ ಕೆಲವೇ ತಿಂಗಳುಗಳಲ್ಲಿ ಸಾಲ ವಿತರಣೆ ಪ್ರಕ್ರಿಯೆ ಆರಂಭಿಸುವ ನಿರೀಕ್ಷೆಯಿದೆ. ಕಂಪನಿಯು ತನ್ನ ವೇದಿಕೆ ಮತ್ತು ‘ಸೂಪರ್.ಮನಿ’ ಯುಪಿಐ ಆ್ಯಪ್ ಮೂಲಕ ಸಾಲ ನೀಡಲು ಯೋಜಿಸಿದೆ. ಪ್ರಸ್ತುತ, ಆಕ್ಸಿಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಕ್ರೆಡಿಟ್ ಸೈಸನ್ ಮೂಲಕ ವೈಯಕ್ತಿಕ ಸಾಲಗಳನ್ನು ಫ್ಲಿಪ್‌ಕಾರ್ಟ್ ಒದಗಿಸುತ್ತಿದೆ. ಈ ಹೊಸ ಪರವಾನಗಿಯಿಂದ ಫ್ಲಿಪ್‌ಕಾರ್ಟ್ ಆರ್ಥಿಕ ಸೇವೆಗಳ ಕ್ಷೇತ್ರದಲ್ಲಿ ತನ್ನ ಹೆಜ್ಜೆ ಗುರುತನ್ನು ಮತ್ತಷ್ಟು ವಿಸ್ತರಿಸಲಿದೆ.

ಇದನ್ನೂ ಓದಿ » ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ, ಶಿವಮೊಗ್ಗದಲ್ಲಿ ಅಣ್ಣ, ತಮ್ಮನ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು

Leave a Comment