ಶಿವಮೊಗ್ಗ: ದಸರಾ ಹಬ್ಬದ ಹಿನ್ನೆಲೆ ನಗರದ ಪ್ರಿಸ್ಟೀಜ್ ಎಕ್ಸ್ಕ್ಲೂಸಿವ್ ಮಳಿಗೆಗಳಲ್ಲಿ ಗ್ರಾಹಕರಿಗಾಗಿ ಶುಭ ಉತ್ಸವ್ 2026 ವಿಶೇಷ ಆಫರ್ಗಳನ್ನು ಘೋಷಿಸಲಾಗಿದೆ. ವಿವಿಧ ಗೃಹೋಪಕರಣಗಳ ಖರೀದಿಯ ಮೇಲೆ ಭಾರಿ ರಿಯಾಯಿತಿ ಹಾಗೂ ಉಚಿತ ಕೊಡುಗೆಗಳನ್ನು ನೀಡಲಾಗುತ್ತಿದೆ.
ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಪ್ರಿಸ್ಟೀಜ್ ಸಂಸ್ಥೆಯು ನೂತನ ತಂತ್ರಜ್ಞಾನದ ಆವಿಷ್ಕಾರಗಳನ್ನೊಳಗೊಂಡ ಉತ್ಪನ್ನಗಳ ಮೇಲೆ ಈ ಆಫರ್ ತಂದಿದೆ. ಹೆವಿ ಗೇಜ್ ಗ್ಯಾಸ್ ಸ್ಟೌವ್ ಖರೀದಿಗೆ ಶೇ.20 ರಿಯಾಯಿತಿ ಹಾಗೂ ₹2,695 ಮೌಲ್ಯದ ಒಮೆಗಾ ಡಿಲಕ್ಸ್ ಗ್ರಾನೈಟ್ 2-ಪೀಸ್ ಸೆಟ್ ಉಚಿತವಾಗಿ ನೀಡಲಾಗುತ್ತಿದೆ. ಫುಡ್ ಪ್ರೊಸೆಸರ್ ಖರೀದಿಗೆ ಶೇ. 25 ರಿಯಾಯಿತಿ ಜೊತೆಗೆ ₹3,100 ಮೌಲ್ಯದ ಮಲ್ಟಿ ಕುಕ್ಕರ್, ಏರ್ ಫ್ರೈಯರ್ ಹಾಗೂ ಇಂಡಕ್ಷನ್ ಕುಕ್ಟಾಪ್ಗಳ ಮೇಲೆ ಶೇ. 30 ರಿಯಾಯಿತಿ, ನ್ಯೂಟ್ರಿ-ಮೇಟ್ ಕೊಡುಗೆಯಾಗಿ ನೀಡಲಾಗುತ್ತಿದೆ. ಟ್ರೈ-ಪ್ಲೈ ಬೈಕ್ ಸೆಟ್ಗಳನ್ನು ಅತ್ಯಂತ ಕನಿಷ್ಠ ಬೆಲೆಯಲ್ಲಿ ಒದಗಿಸಲಾಗುತ್ತಿದೆ.

ಅಲ್ಲದೆ, ಚಿಮಣಿ ಖರೀದಿಸುವ ಗ್ರಾಹಕರಿಗೆ ಮೇಲೆ ಶೇ.15 ರಿಯಾಯಿತಿ ಹಾಗೂ ಗ್ಯಾಸ್ ಸ್ಟೌವ್ ಅಥವಾ ಹಾಬ್ ಉಚಿತವಾಗಿ ಸಿಗಲಿದೆ. ಉಚಿತ ಇನ್ಸ್ಟಾಲೇಶನ್ ಸೌಲಭ್ಯವೂ ಲಭ್ಯವಿದೆ. ಟ್ರೈ-ಪ್ಲೈ ಪ್ರೆಷರ್ ಕುಕ್ಕರ್, ಎಸ್ಎಸ್ ನಕ್ಷತ್ರ ಇನ್ನರ್ ಲಿಡ್ ಪ್ರೆಷರ್ ಕುಕ್ಕರ್, ಐರನ್ ಕಡಾಯಿ, ಸೇರಿದಂತೆ ವಿವಿಧ ಗೃಹೋಪಯೋಗಿ ವಸ್ತುಗಳ ಮೇಲೆ ರಿಯಾಯಿತಿ ಮತ್ತು ಉಚಿತ ಕೊಡುಗೆಗಳಿಗೆ ಎಂದು ತಿಳಿಸಲಾಗಿದೆ.
ಶಿವಮೊಗ್ಗ ನಗರದ ಶಿವಮೂರ್ತಿ ವೃತ್ತದ ಬಳಿ ದೋಸಾ ಕ್ಯಾಂಪ್ ಎದುರು ಇರುವ ಶ್ರೀ ಮಂಜುನಾಥ ಬಿಲ್ಡಿಂಗ್ ಹಾಗೂ ವಿನೋಬನಗರದ 100 ಅಡಿ ರಸ್ತೆಯ ಪೊಲೀಸ್ ಚೌಕಿ ವೃತ್ತದ ಬಳಿ ಇರುವ ರೈಮನ್ಸ್ ಆರ್ಕೇಡ್ನಲ್ಲಿರುವ ಪ್ರಿಸ್ಟೀಜ್ ಎಕ್ಸ್ಕ್ಲೂಸಿವ್ ಶಾಖೆಗಳಲ್ಲಿ ಈ ಆಫರ್ ಲಭ್ಯವಿದೆ. ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ಮಳಿಗೆಗಳು ತೆರೆದಿರಲಿದೆ. ಹೆಚ್ಚಿನ ಮಾಹಿತಿಗೆ 89711 68073, 97417 16418, 08182-356505 ಅಥವಾ 08182-476511 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯು ತಿಳಿಸಿದೆ.