ಶಿವಮೊಗ್ಗ ಸಂತೆ ಕಡೂರಿನಲ್ಲಿ ಗುಂಡಿ ತೆಗೆದು ನಾಲ್ಕು ಸಾವಿರ ಕೋಳಿಗಳ ಜೀವಂತ ಸಮಾಧಿ, ಕಾರಣವೇನು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | SHIMOGA | 11 ಮಾರ್ಚ್ 2020

ಚಿಕನ್ ಸೇವಿಸಿದರೆ ಕರೋನ ಬರಲಿದೆ ಎಂಬ ವದಂತಿ ಹಿನ್ನೆಲೆ ಕುಕ್ಕುಟೋದ್ಯಮ ಭಾರಿ ನಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಸಂತೆ ಕಡೂರಿನಲ್ಲಿ ಸುಮಾರು ನಾಲ್ಕು ಸಾವಿರ ಕೋಳಿಗಳನ್ನ ಜೀವಂತ ಸಮಾಧಿ ಮಾಡಲಾಗಿದೆ.

https://www.facebook.com/liveshivamogga/videos/2448529132032749/?t=0

ಕೋಳಿ ಫಾರಂ ಮಾಲೀಕ ಶ್ರೀನಿವಾಸ್ ಅವರು ತಮ್ಮ ಫಾರಂ ಸಮೀಪ ಗುಂಡಿ ತೆಗೆಸಿ, ಕೋಳಿಗಳ ಜೀವಂತ ಸಮಾಧಿ ಮಾಡಿಸಿದ್ದಾರೆ.  ಕೋಳಿ ಮಾಂಸಕ್ಕೆ ಡಿಮಾಂಡ್ ಕಡಿಮೆಯಾದ ಹಿನ್ನೆಲೆ, ಅಂಗಡಿಗಳು ಕೋಳಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಫಾರಂ ಮಾಲೀಕ ಕೋಳಿಗಳನ್ನು ಜೀವಂತ ಸಮಾಧಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಚಿಕನ್ ಸೇವಿಸಿದರೆ ಕರೋನ ಬರಲಿದೆ ಎಂದು ವದಂತಿ ಹಬ್ಬಿದೆ. ಚಿಕನ್ ಸೇವನೆ ಪ್ರಮಾಣ ಕುಸಿತ ಕಂಡಿದೆ. ಇದರಿಂದಾಗಿ ಕುಕ್ಕುಟೋದ್ಯಮ ಸಂಪೂರ್ಣ ಕುಸಿತ ಕಂಡಿದೆ.

Kalleshwara-Enterprises.webp

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment