SHIVAMOGGA LIVE | 9 JUNE 2023
SHIMOGA : ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಜಾನ್ವಿ 2023 ಕಾರ್ಯಕ್ರಮಕ್ಕೆ ನಟಿ (Actress) ಆಶಾ ಭಟ್ ಚಾಲನೆ ನೀಡಿದರು. ಇದೆ ವೇಳೆ ಎಂಜಿನಿಯರಿಂಗ್, ಎಂಬಿಎ, ಎಂಸಿಎ ವಿಭಾಗಗಳ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ವಿದ್ಯಾರ್ಥಿಗಳಿಗೆ ನಟಿಯ 3 ಸೂತ್ರ
ವಿದ್ಯಾರ್ಥಿ ಜೀವನದಲ್ಲಿ ನಮಗೆ ಸಿಗುವ ವೇದಿಕೆಗಳನ್ನು ಪರಿಪೂರ್ಣವಾಗಿ ಬಳಸಿಕೊಳ್ಳಬೇಕು. ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಿಂತನೆಗಳು ನಮ್ಮ ಶಕ್ತಿಯಾಗಿ ಪರಿವರ್ತನೆಗೊಳ್ಳಲಿದೆ.
ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗೆ ಸೀಮಿತಗೊಳ್ಳಬಾರದು. ಓದುವುದರ ಹೊರತಾಗಿ ಆಸಕ್ತಿಯಿರುವ ಕ್ಷೇತ್ರಗಳತ್ತಲು ಪ್ರಾಮುಖ್ಯತೆ ನೀಡಬೇಕು.
ಎಂಜಿನಿಯರಿಂಗ್ ಓದಿದ ಮಾತ್ರಕ್ಕೆ ಅಷ್ಟಕ್ಕೆ ಸೀಮಿತವಾಗಬೇಕು ಎಂದೇನಿಲ್ಲ. ಹೊಸ ಕನಸು ಕಾಣಲು ಪ್ರಯತ್ನಿಸಬೇಕು. ಕೌಶಲ್ಯತೆ ಮೂಲಕ ನಮ್ಮ ಊರು, ರಾಜ್ಯವನ್ನು ವಿಶ್ವಮಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡೋಣ. ಕಷ್ಟ ಬಂದಾಗ ನಾವು ಎದುರಿಸುವ ರೀತಿಯ ಆಧಾರದಲ್ಲಿ ಬದುಕಿನ ಯಶಸ್ಸಿನ ಸಾಮರ್ಥ್ಯ ನಿರ್ಧಾರವಾಗುತ್ತೆ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, ಇಂಡಿಗೋ ಸಂಸ್ಥೆಗೆ ವಾರ್ನಿಂಗ್ ನೀಡಿದ ಎಂಪಿ, ವಿಳಂಬಕ್ಕೆ ಕಾರಣ ಬಯಲು, ಏನದು?
ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ನಾಗೇಂದ್ರಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷ ಸಿ.ಆರ್.ನಾಗರಾಜ, ಕಾರ್ಯದರ್ಶಿ ಎಸ್.ಎನ್.ನಾಗರಾಜ, ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸಾಂಸ್ಕೃತಿಕ ಸಮಿತಿ ಸಂಯೋಜಕ ಮಧುಸೂದನ್ ಗೊಲ್ಲಾ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಚೇತನ್ ಸೇರಿದಂತೆ ಮತ್ತಿತರರು ವೇದಿಕೆಯಲ್ಲಿದ್ದರು.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ