ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 16 AUGUST 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಮೊಬೈಲ್ (Mobile) ಗೀಳಿಗೆ ಸಿಲುಕಿರುವ ಯುವ ಸಮೂಹದಿಂದ ಭಾವನಾತ್ಮಕ ಸಂಬಂಧ ಕಣ್ಮರೆಯಾಗುತ್ತಿದೆ ಎಂದು ವಿಧಾನಪರಿಷತ್ತಿನ ಸದಸ್ಯರಾದ ಡಿ.ಎಸ್.ಅರುಣ್ (DS Arun) ಆತಂಕ ವ್ಯಕ್ತಪಡಿಸಿದರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ (ATNCC College) ವತಿಯಿಂದ ಏರ್ಪಡಿಸಿದ್ದ ಅಂತಿಮ ವರ್ಷದ ಬಿಕಾಂ ಮತ್ತು ಬಿಬಿಎ ವಿದ್ಯಾರ್ಥಿಗಳ ‘ಗ್ರಾಜುಯಂಡ್ಸ್ ಡೇ – 2023’ (Graduands Day-2023) ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.
ಪದವಿ ಸೇರಿದಂತೆ ಉನ್ನತ ಶಿಕ್ಷಣ (Higher Education) ಪಡೆಯುವಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಪಾಲು ಪಡೆಯುತ್ತಿರುವುದು ಸಂತೋಷದ ಸಂಗತಿ. ಅಧ್ಯಯನದ ಜೊತೆಗೆ ಕೌಶಲ್ಯಾಧಾರಿತ ಬುದ್ದಿಮತ್ತೆಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವತ್ತ ಗಮನವಹಿಸಿ. ಭಾವನಾತ್ಮಕ ಸಂಬಂಧಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ- ಸಹ್ಯಾದ್ರಿ ಕಾಲೇಜು ಬಳಿ ತಪ್ಪಿದ ಅನಾಹುತ, ಕಾರಿನಲ್ಲಿದ್ದವರು ತಕ್ಷಣ ಎಸ್ಕೇಪ್
ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಮಾತನಾಡಿ, ಸಮಾಜ ನಮಗೆ ಬಹಳಷ್ಟು ನೀಡಿದ್ದು, ಸಮಾಜಕ್ಕೆ ನಾವು ಉತ್ತಮ ಕೊಡುಗೆ ನೀಡೋಣ. ಸಮಾಜಕ್ಕೆ ಅನೇಕ ದೊಡ್ಡ ಸಾಧಕರನ್ನ, ಪ್ರಜೆಗಳನ್ನು ನೀಡಿದ ಖ್ಯಾತಿ ಆಚಾರ್ಯ ತುಳಸಿ ವಾಣಿಜ್ಯ ಕಾಲೇಜಿನದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮಮತಾ.ಆರ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲರಾದ ಹೆಚ್.ಎಂ.ಸುರೇಶ್, ಖಾಜೀಂ ಷರೀಫ್, ಪ್ರಾಧ್ಯಾಪಕರಾದ ಜಗದೀಶ್, ನಾಗರಾಜ್, ಮಂಜುನಾಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಬಿಕಾಂ ಮತ್ತು ಬಿಬಿಎ ವಿಭಾಗಗಳ ಸುಮಾರು 400 ಕ್ಕು ಹೆಚ್ಚು ವಿದ್ಯಾರ್ಥಿಗಳಿಗೆ (Students) ಪದವಿ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು.