ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ: ತ್ಯಾವರೆಕೊಪ್ಪದ ಪ್ರಾಣಿ ಸಂಗ್ರಹಾಲಯ ಹಾಗೂ ಹುಲಿ ಮತ್ತು ಸಿಂಹಧಾಮ, ಶಿವಮೊಗ್ಗದ ಪೇಸ್ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ 8, 9 ಮತ್ತು 10ನೇ ತರಗತಿಗಳಿಗೆ ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅ.25ರಂದು ಬೆಳಗ್ಗೆ 9 ಗಂಟೆಗೆ ತೇವರಚಟ್ನಹಳ್ಳಿಯ ಪೇಸ್ ಪದವಿ ಪೂರ್ವ ಕಾಲೇಜಿನಲ್ಲಿ ಸ್ಪರ್ಧೆಗಳು (Competition) ನಡೆಯಲಿವೆ.
ಯಾವೆಲ್ಲ ಸ್ಪರ್ಧಗಳು ನಡೆಯಲಿವೆ?
ರಸಪ್ರಶ್ನೆ: ವನ್ಯಜೀವಿಗಳು ಮತ್ತು ಸಾಮಾನ್ಯ ಜ್ಞಾನ ಕುರಿತು
ಕೃತಕ ಬುದ್ಧಿಮತ್ತೆ (AI) ಪೇಂಟಿಂಗ್: ಶಿವಮೊಗ್ಗ ಜಿಲ್ಲಾ ವನ್ಯಜೀವಿಗಳನ್ನು ಕುರಿತ ಚಿತ್ರಕಲೆ
ಪವರ್ ಪಾಯಿಂಟ್ ಪ್ರೆಸೆಂಟೇಶನ್: ಪರಿಸರದ ಬದಲಾವಣೆಗೆ ಕಾರಣಗಳು ಮತ್ತು ಪರಿಹಾರೋಪಾಯಗಳು
ಪೋಸ್ಟರ್ ಮೇಕಿಂಗ್ & ಪ್ರೆಸೆಂಟೇಶನ್: ಇತ್ತೀಚೆಗೆ ನಾಶವಾದ ಸಸ್ಯ ಮತ್ತು ಪ್ರಾಣಿ ಪ್ರಭೇದಗಳು
ವಿಜ್ಞಾನದ ಮಾದರಿಗಳ ಪ್ರದರ್ಶನ: ಪ್ರದರ್ಶನ ಮಾತ್ರ
ಬೆಸ್ಟ್ ಔಟ್ ಆಫ್ ವೇಸ್ಟ್: ಪ್ಲಾಸ್ಟಿಕ್, ಬಾಟಲ್, ಕಾರ್ಡ್‌ಬೋರ್ಡ್, ನ್ಯೂಸ್ ಪೇಪರ್, ನಾಣ್ಯ, ಸಿ.ಡಿ, ಬಟ್ಟೆ ಇತ್ಯಾದಿಗಳನ್ನು ಬಳಸಿ
ಈ ಸ್ಪರ್ಧೆಗಳಲ್ಲಿ ಪ್ರತಿ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳನ್ನು ಒಳಗೊಂಡ ತಂಡಕ್ಕೆ ಅವಕಾಶ ಇರಲಿದೆ.
ಸಂಗೀತ, ಆಶುಭಾಷಣ, ಪ್ರಬಂಧ ಸ್ಪರ್ಧೆಗಳು
ಇನ್ನು, ಸುಗಮ ಸಂಗೀತ, ಆಶುಭಾಷಣ, ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಪ್ರತಿ ಶಾಲೆಯಿಂದ ಒಬ್ಬ ವಿದ್ಯಾರ್ಥಿಗೆ ಮಾತ್ರ ಅವಕಾಶ ಇರಲಿದೆ.
ಸುಗಮ ಸಂಗೀತ ಸ್ಪರ್ಧೆ: ಕನ್ನಡ ಪರಿಸರ ಗೀತೆ
ಆಶುಭಾಷಣ ಸ್ಪರ್ಧೆ: ವಿಷಯವನ್ನು ಸ್ಥಳದಲ್ಲೇ ನೀಡಲಾಗುವುದು.
ಪ್ರಬಂಧ ಸ್ಪರ್ಧೆ: ಕೃತಕ ಬುದ್ಧಿಮತ್ತೆ v/s ಮಾನವ ಬುದ್ಧಿಮತ್ತೆ (ಕನ್ನಡದಲ್ಲಿ 2 ಪುಟದಿಂದ 4 ಪುಟಕ್ಕೆ ಮೀರದಂತೆ)
ಹೆಚ್ಚಿನ ಮಾಹಿತಿಗೆ ಸಜಯ್: 8088991234, ಸುನಿಲ್ ದತ್ ಜೋಶಿ: 9900631508 ಸಂಪರ್ಕಿಸಬಹುದು.
ಇದನ್ನೂ ಓದಿ » ಶಿವಮೊಗ್ಗ ಹಾಪ್‌ಕಾಮ್ಸ್‌ಗೆ 15 ನಿರ್ದೇಶಕರು ಅವಿರೋಧ ಆಯ್ಕೆ, ವಿಜಯ್‌ಕುಮಾರ್ ಹ್ಯಾಟ್ರಿಕ್ ಸಾಧನೆ
Competition


