ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 22 DECEMBER 2023
EDUCATION NEWS : ಕುವೆಂಪು ವಿಶ್ವವಿದ್ಯಾಲಯದ ವೆಬ್ಸೈಟ್ ಪುನಃ ಹ್ಯಾಕ್ ಆಗಿದೆ. ಹ್ಯಾಕ್ ಮಾಡಿರುವ ದುಷ್ಕರ್ಮಿಗಳು ವಿವರಣೆಯಲ್ಲಿ ಸೇವ್ ಪ್ಯಾಲಸ್ಟೇನ್ ಎಂದು ಬರೆದಿದ್ದಾರೆ. ಬುಧವಾರ ರಾತ್ರಿ ವೆಬ್ಸೈಟ್ ಹ್ಯಾಕ್ ಆಗಿರುವುದು ಗೊತ್ತಾಗಿದೆ.
ಹ್ಯಾಕ್ ಮಾಡಿರುವುದು ಯಾರು?
ಕುವೆಂಪು ವಿವಿಯ ಅಧಿಕೃತ ವೆಬ್ಸೈಟ್ ಅನ್ನು ಕಲಿಮಲಂಗ್ ಬ್ಲ್ಯಾಕ್ ಹ್ಯಾಟ್ ಟೀಮ್ ಹ್ಯಾಕ್ ಮಾಡಿದೆ ಎಂದು ಬರೆಯಲಾಗಿದೆ. ಅಲ್ಲದೆ ಹ್ಯಾಷ್ ಟ್ಯಾಗ್ ಮಾಡಿ ಸೇವೆ ಪ್ಯಾಲಸ್ಟೇನ್, ಇಸ್ರೇಲ್ ಡಾಗ್, ಫ್ರಮ್ ಲ್ಯಾಮ್ಮರ್ ಟೂ ಮಾಷ್ಥಾ, ಜಕಾರ್ತಾ ಬ್ಲ್ಯಾಕ್ ಹ್ಯಾಟ್ ಎಂದು ಪ್ರಕಟಿಸಲಾಗಿದೆ. ಘಟನೆ ಕುರಿತು ಕುವೆಂಪು ವಿವಿ ಆಡಳಿತ ಸೈಬರ್ ಕ್ರೈಮ್ಗೆ ದೂರು ನೀಡುವ ಸಾಧ್ಯತೆ ಇದೆ.
ಹ್ಯಾಕ್ ಆಗಿರುವುದು ಇದೆ ಮೊದಲಲ್ಲ
ಕುವೆಂಪು ವಿಶ್ವವಿದ್ಯಾಲಯದ ವೆಬ್ಸೈಟ್ ಹ್ಯಾಕ್ ಆಗಿರುವುದು ಇದೆ ಮೊದಲಲ್ಲ. 2018 ಮೇ ತಿಂಗಳಲ್ಲಿ ವಿವಿಯ ವೆಬ್ಸೈಟ್ ಹ್ಯಾಕ್ ಮಾಡಲಾಗಿತ್ತು. ಅಲ್ಲದೆ ವೆಬ್ಸೈಟ್ನ ಹೋಮ್ ಪೇಜ್ನಲ್ಲಿ ಪಾಕಿಸ್ತಾನ ಪರವಾಗಿ ಘೋಷಣೆಗಳನ್ನು ಪ್ರಕಟಿಸಲಾಗಿತ್ತು. ಈಗ ಪುನಃ ಹ್ಯಾಕ್ ಮಾಡಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದ ಮಹಿಳೆಗೆ ದೆಹಲಿ ವಿಮಾನ ನಿಲ್ದಾಣದಿಂದ ಬಂತು ಫೋನ್, ಆಮೇಲೆ ಕಾದಿತ್ತು ಬಿಗ್ ಶಾಕ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422