ನಾರಾಯಣ ರಾವ್ ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್
ನಮಗೆ ನಾವೇ ನಿಜವಾದ ನಾಯಕರು. ರಾಜಕೀಯ ರಂಗದಲ್ಲಿ ಪ್ರವೇಶ ಮಾಡಿ ಜನಪ್ರತಿನಿಧಿ ಆದವರು ಮಾತ್ರ ನಾಯಕರಲ್ಲ, ಕ್ರೀಡೆ, ಚಲನಚಿತ್ರ, ಕುಟುಂಬ ಎಲ್ಲಾ ಕಡೆಗಳಲ್ಲಿ ನಾಯಕರಿದ್ದಾರೆ.
ಸಮಾಜದ ನಾಯಕನಾಗಲು ಉತ್ತಮ ಕೌಶಲ್ಯತೆ ಹಾಗೂ ಪ್ರಬುದ್ಧತೆ ಬೇಕು. ಸಂಸ್ಕಾರ ಅತಿ ಮುಖ್ಯ. ಎಲ್ಲಿ ಒಳ್ಳೆಯ ಸಂಸಾರವಿದೆ, ಅಲ್ಲಿ ಒಳ್ಳೆಯ ಸಂಸ್ಕಾರವಿರುತ್ತದೆ. ಸಂಸ್ಕಾರದ ತಳಹದಿ ಇರುವುದು ಕುಟುಂಬದಲ್ಲಿ, ನಂತರ ಸಿಗುವುದು ಶಿಕ್ಷಣ ಮತ್ತು ಅನುಭವ ಆಧಾರಿತ ಸಂಸ್ಕಾರ.
ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ, ಪಾರದರ್ಶಕತೆ, ಸಮಯ ಪಾಲನೆ, ಪ್ರಬುದ್ಧ ಮಾತುಗಾರಿಕೆಯ ಜೊತೆಯಲ್ಲಿ ಸಹನೆ ಮತ್ತು ಅಧ್ಯಯನಶೀಲತೆ ಉತ್ತಮ ನಾಯಕತ್ವಕ್ಕೆ ಅತಿ ಮುಖ್ಯ.
ನಾಯಕತ್ವ ಎಂದರೆ ಬದ್ಧತೆಯ ಸಂಕೇತ. ಅಹಂಕಾರ, ಹಣ ದಾಹ, ಸ್ವಹಿತಾಸಕ್ತಿ, ಸ್ವಾರ್ಥ ಪರವಾದ ನಡೆ ನಾಯಕತ್ವಕ್ಕೆ ಶೋಭೆ ತರುವುದಿಲ್ಲ. ವಿರೋಧಿಗಳನ್ನು ಅವಹೇಳನ ಮಾಡುವ ಗುಣ ನಾಯಕನಿಗೆ ಇರಬಾರದು. ಮನುಷ್ಯನಲ್ಲಿ ಅತಿ ಭಾರವಾದ ವಸ್ತುವೆಂದರೆ ಅದು ಅಹಂಕಾರ. ನಾಯಕ ಹಿಂಬಾಲಕರನ್ನು ಸೃಷ್ಟಿಸಿದೆ ನಾಯಕರನ್ನು ರೂಪಿಸುವ ಶಕ್ತಿ ಇರಬೇಕು.
ಇನ್ನೊಬ್ಬರ ಕೌಶಲ್ಯತೆ ಸಾಮರ್ಥ್ಯಗಳನ್ನು ಗುರುತಿಸುವವರು ನಿಜವಾದ ನಾಯಕ. ನಾಯಕ ಸುದ್ದಿಯಲ್ಲಿರಬೇಕು ವಿನಃ ಸುದ್ದಿಯಾಗಲು ನಾಯಕರಾಗಬಾರದು. ಸೋಲಿನ ಜವಾಬ್ದಾರಿಯನ್ನು ತಾನು ವಹಿಸಿಕೊಂಡು, ಗೆಲುವನ್ನು ಎಲ್ಲರಿಗೂ ಹಂಚುವ ಸಾಮರ್ಥ್ಯ ಬೇಕು.
ಸೇವೆ ಎನ್ನುವುದು ಒಂದು ದಿನಕ್ಕೆ ಸೀಮಿತವಾದ ಪರಿಕಲ್ಪನೆಯಲ್ಲ. ಗಾಂಧೀಜಿಯವರು ಹೇಳುವ ಹಾಗೆ, ನಮ್ಮ ಜೀವನದಲ್ಲಿ ಸಾಮಾಜಿಕ ಬದಲಾವಣೆಗೆ ನಿರಂತರ ಶ್ರಮಿಸಿದಾಗ ಮಾತ್ರ ನಿಜವಾದ ಸೇವಾ ಮನೋಭಾವ ಸಾಧ್ಯವಾಗುತ್ತದೆ.
- ಎಸ್.ಎನ್.ನಾಗರಾಜ, ಎನ್ಇಎಸ್ ಕಾರ್ಯದರ್ಶಿ
![]()
ಪ್ರಾಂಶುಪಾಲರಾದ ಪ್ರೊ.ಪಿ.ಆರ್.ಮಮತ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕಾರ್ಯಕ್ರಮಾಧಿಕಾರಿ ಮಂಜುನಾಥ. ಎನ್, ಸ್ವಯಂ ಸೇವಕರಾದ ಪ್ರಜ್ವಲ್, ಸಿಂಚನ, ಪ್ರಿಯಾಂಕಾ, ಇಂದ್ರಸೇನಾ, ಹೇಮಂತ್, ರಶ್ಮಿತ, ಅದಿತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

