ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ರಾಷ್ಟ್ರೀಯ ಭಾವೈಕ್ಯತಾ ಶಿಬಿರವು (Camp) ಮೇ 3ರಿಂದ 9ರ ವರೆಗೆ ಶಂಕರಘಟ್ಟದ ಜ್ಞಾನ ಸಹ್ಯಾದ್ರಿ ಆವರಣದಲ್ಲಿನಡೆಯಲಿದೆ.
ಇದನ್ನೂ ಓದಿ » ಜೋಗ ಜಲಪಾತ, ಮೊದಲ ದಿನವೇ ಜಲಾಧಾರೆ ಕಣ್ತುಂಬಿಕೊಂಡ ನೂರಾರು ಜನ
ವೈವಿಧ್ಯಮಯ ಸಂಸ್ಕೃತಿ ಕ್ರಿಯಾಶೀಲತೆಯನ್ನು ಬಿಂಬಿಸಲಿರುವ ಶಿಬಿರದಲ್ಲಿ ಕರ್ನಾಟಕ ಅಲ್ಲದೆ ಪಾಂಡಿಚೇರಿ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರ ಪ್ರದೇಶದ ವಿಶ್ವವಿದ್ಯಾಲಯಗಳ 150 ಎನ್.ಎಸ್.ಎಸ್ ಸ್ವಯಂ ಸೇವಕರು, ಘಟಕದ ಕಾರ್ಯಕ್ರಮಾಧಿಕಾರಿಗಳು ಭಾಗವಹಿಸುವರು. ‘ವಿಕಸಿತ ಭಾರತಕ್ಕಾಗಿ ಯುವ ಜನತೆ’ ಎನ್ನುವ ವಿಶೇಷ ಕಲ್ಪನೆಯಲ್ಲಿ ಶಿಬಿರ (Camp) ರೂಪಿಸಲಾಗಿದೆ.
ಶಿಬಿರವನ್ನು ಶಾಸಕ ಡಾ. ಧನಂಜಯ್ ಸರ್ಜಿ ಉದ್ಘಾಟಿಸುವರು. ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಧ್ಯಕ್ಷತೆ ವಹಿಸುವರು.

ಏಳು ದಿನಗಳ ಈ ಶಿಬಿರದಲ್ಲಿ ವಿವಿಧ ವಿಷಯಗಳ ಮೇಲೆ ವಿಶೇಷ ಉಪನ್ಯಾಸ ನಡೆಯಲಿದೆ. ರೆಡ್‌ಕ್ರಾಸ್‌ನ ಡಾ. ವಿ.ಎಲ್.ಎಸ್.ಕುಮಾರ್, ದೀಕ್ಷಾ ನಾಯಕ್, ಡಾ.ಶ್ರೀಪತಿ, ಶರ್ಮಿಳಾ ರಾಮಕುಮಾರ್, ಆಮ್ಮ ರಾಮಚಂದ್ರ ಮೈಸೂರು ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು. ಸಮಾರೋಪ ಭಾಷಣವನ್ನು ಗಾಂಧಿವಾದಿ ಪ್ರೊ. ಜಿ.ಬಿ.ಶಿವರಾಜು ನೆರವೇರಿಸುವರು ಎಂದು ಕುವೆಂಪು ವಿವಿ ಎನ್‌ಎಸ್ ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LATEST NEWS
- ಗುಡ್ಡೇಕಲ್ ಬಾಲಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ರಥೋತ್ಸವ, ಯಾವಾಗ?

- ಭದ್ರಾವತಿಯ ಭದ್ರಾ ನದಿಗೆ ರಾಶಿ ರಾಶಿ ತ್ಯಾಜ್ಯ, ವೈಜ್ಞಾನಿಕ ಕ್ರಮಕ್ಕೆ ಒತ್ತಾಯ

- ಯಶವಂತಪುರ – ತಾಳಗುಪ್ಪ ಮಧ್ಯೆ ವಿಶೇಷ ರೈಲು, ಎಷ್ಟು ಬೋಗಿ ಇರುತ್ತೆ? ಎಲ್ಲೆಲ್ಲಿದೆ ಸ್ಟಾಪ್?

- ಶಿವಮೊಗ್ಗ ಜಿಲ್ಲೆಯ ಮನೆ ಮನೆಗೂ ಭೇಟಿ ನೀಡ್ತಾರೆ ಗಣತಿದಾರರು, ಏನೇನು ಮಾಹಿತಿ ಕೊಡಬೇಕು?

- ಕೇಕ್, ಬಿಸ್ಕತ್ತು, ಕುಕೀಸ್ ತಯಾರಿಸೋದು ಹೇಗೆ? ಶಿವಮೊಗ್ಗದಲ್ಲಿ ಬೇಕರಿ ಉತ್ಪನ್ನಗಳ ತಯಾರಿ ತರಬೇತಿ

About The Editor
ನಿತಿನ್ ಆರ್.ಕೈದೊಟ್ಲು
















