ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 OCTOBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಬದುಕಿನಲ್ಲಿ ಎದುರಾಗುವ ಪ್ರತಿ ಅವಮಾನವನ್ನು ಮೀರಿ ನಿಲ್ಲುವ ಆತ್ಮವಿಶ್ವಾಸ ನಿಮ್ಮದಾಗಬೇಕಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ.ಎಸ್.ಎಂ.ಗೋಪಿನಾಥ ಅಭಿಪ್ರಾಯಪಟ್ಟರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಮಂಗಳವಾರ ನಗರದ ಎಸ್.ಆರ್.ನಾಗಪ್ಪಶೆಟ್ಟಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿನ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಪ್ರಥಮ ವರ್ಷದ ಬಿಸಿಎ ಹಾಗೂ ಬಿಎಸ್ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಅಭಿವಿನ್ಯಾಸ (ಓರಿಯಂಟೇಷನ್) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅನುಭವದಿಂದ ಮಾತ್ರ ಬದುಕಿನಲ್ಲಿ ನಿಜವಾದ ಪರಿಪಕ್ವತೆ ಸಾಧ್ಯ. ಅಂತಹ ಪರಿಪಕ್ವತೆಯನ್ನು ಯಾವುದೇ ಪುಸ್ತಕಗಳು ನೀಡಲಾರದು. ಅವಮಾನಕ್ಕೆ ಒಳಗಾದ ವ್ಯಕ್ತಿ ಮಾತ್ರ ಸನ್ಮಾನಕ್ಕೆ ನಿಜವಾಗಿಯೂ ಅರ್ಹ. ಅಂತಹ ಅವಮಾನಗಳನ್ನು ಸಮರ್ಥವಾಗಿ ಎದುರಿಸಿ. ಕಲಿಕೆಯಲ್ಲಿ ಯಾರು ದಡ್ಡರಲ್ಲ. ಕಲಿಕೆಯ ಸ್ಥಿತಿ ನಿಧಾನವಾಗಿರುತ್ತದೆ. ಅಂತಹ ಕಲಿಕಾ ಗುಣಮಟ್ಟವನ್ನು ಪೋಷಕರು ಮತ್ತು ಶಿಕ್ಷಕ ವರ್ಗ ಅವಲೋಕಿಸಿ ಕಲಿಕೆಯ ಪ್ರೇರಣಾ ವಿಧಾನಗಳನ್ನು ಬಳಸಿ. ಪದವಿ ಹಂತದಲ್ಲಿ ನಿಮ್ಮ ಗುರಿ ತಲುಪುವ ತವಕ ಇರಬೇಕು. ಪೋಷಕರ ಕಷ್ಟಗಳಿಗೆ ಹೆಗಲು ನೀಡುವ ಜವಾಬ್ದಾರಿ ಬರಬೇಕು. ಸಮಾಜಮುಖಿ ಚಿಂತನೆಗಳ ಮನೋಭೂಮಿಕೆ ನಿಮ್ಮದಾಗಲಿ ಎಂದರು.
ಇದನ್ನೂ ಓದಿ- 144 ಸೆಕ್ಷನ್, ಶಿವಮೊಗ್ಗ ಜಿಲ್ಲಾಧಿಕಾರಿಯಿಂದ ಪರಿಷ್ಕೃತ ಆದೇಶ, ಏನಿದೆ ಆದೇಶದಲ್ಲಿ?
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಮಾತನಾಡಿ, ದೀಪ ತಾನು ಬೆಳಗಿ ಇತರರಿಗೆ ಬೆಳಕು ನೀಡುವಂತೆ ಶಿಕ್ಷಕರು ತಾವು ಕಲಿತು ಇತರರಿಗೂ ಕಲಿಸುತ್ತಾರೆ. ಅಂತಹ ಶಿಕ್ಷಕರಿಗೆ ಸದಾ ಕೃತಜ್ಞರಾಗಿರಬೇಕು. ತಂದೆ ತಾಯಿಯ ಕೊಡುಗೆ ಎಂದಿಗೂ ಮರೆಯಲಾಗದು. ತಾಯಿ ತನ್ನ ಮಕ್ಕಳಿಗೆ ಆ ಹೊತ್ತಿನ ಅವಶ್ಯಕತೆ ಪೂರೈಸಿದರೆ, ತಂದೆ ನಾಳೆಯ ಅವಶ್ಯಕತೆಗಳನ್ನು ಪೂರೈಸುತ್ತಾರೆ. ಪೋಷಕರು ಹೆಮ್ಮೆ ಪಡುವ ಮಕ್ಕಳಾಗಿ ಬಾಳಿ. ಉತ್ತಮ ಸಂಸಾರ ಮತ್ತು ಸಂಸ್ಕಾರ ನಿಮ್ಮದಾಗಲಿ ಎಂದರು.
ಎಸ್.ಆರ್.ಎನ್.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎಲ್.ಅರವಿಂದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಸಂಗೀತ ಪ್ರಾರ್ಥಿಸಿ, ಉಪನ್ಯಾಸಕರಾದ ಲಕ್ಷ್ಮಣ್ ಸ್ವಾಗತಿಸಿ, ಡಾ.ಮುಕುಂದ ನಿರೂಪಿಸಿದರು.