ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ನ್ಯಾನೋ, ಬಯೋ ಮತ್ತು ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನಗಳು ಒಟ್ಟಾಗಿ ಕೂಡಿ ಬರುವ ಮೂಲಕ, ಜಗತ್ತಿನಲ್ಲಿ ರಭಸದ ಬದಲಾವಣೆ ಸಾಧ್ಯವಾಗುತ್ತಿದೆ ಎಂದು ವಿಜ್ಞಾನಿ ಡಾ.ಎಸ್.ಎಂ.ಶಿವಪ್ರಸಾದ್ ಹೇಳಿದರು. (Graduation Day)
ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಅಂತಿಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ಫಾರ್ಮಸಿ ವಿದ್ಯಾರ್ಥಿಗಳ ಗ್ರಾಜುಯೇಷನ್ ಡೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಶಕಗಳ ಹಿಂದೆ ವಿಜ್ಞಾನವಾಗಿದ್ದ ನ್ಯಾನೋ, ಬಯೋ ವಿಷಯಗಳು, ತಂತ್ರಜ್ಞಾನದ ರೂಪ ಪಡೆದು, ಕೃತಕ ಬುದ್ಧಿಮತ್ತೆಯ ಮೂಲಕ ಅಮೂಲಾಗ್ರ ಬದಲಾವಣೆ ತರುತ್ತಿವೆ. ಅಂತಹ ಬದಲಾವಣೆಗಳಿಗೆ ಯುವ ಸಮೂಹ ಸಾಕ್ಷಿಯಾಗುತ್ತಿದ್ದಾರೆ ಎಂದರು.

ಒಂದು ದೊಡ್ಡ ಜವಾಬ್ದಾರಿಯ ಜೊತೆಗೆ ಪದವಿಯ ಸಂಭ್ರಮವನ್ನು ಆಚರಿಸಿ. ಪದವಿಯು ಸ್ವಾತಂತ್ರವಾಗಿ ಸಧೃಡ ಬದುಕು ನಡೆಸಲು ಪೂರಕವಾಗಿದೆ. ಬದಲಾಗುತ್ತಿರುವ ಜಗತ್ತಿಗೆ ಅನುಗುಣವಾಗಿ, ನಿಭಾಯಿಸಬಲ್ಲ ಶಕ್ತಿ ಪದವೀಧರರು ಹೊಂದಬೇಕು. ಯಶಸ್ಸಿನ ವ್ಯಕ್ತಿತ್ವಗಳಿಂದ ಪ್ರೇರಣೆ ಪಡೆಯಿರಿ. ಜ್ಞಾನದ ಮೂಲಕ ಪ್ರೀತಿ, ಸೌಹಾರ್ದತೆ, ಮಾನವೀಯತೆ ತುಂಬಿದ ಸಮಾಜ ನಿರ್ಮಾಣ ಮಾಡುವತ್ತ ಶ್ರಮಿಸಿ ಎಂದು ಸಲಹೆ ನೀಡಿದರು.
ಬದುಕಿನಲ್ಲಿ ನಿಮ್ಮ ಆಸಕ್ತ ಕ್ಷೇತ್ರವನ್ನು ಉದ್ಯೋಗವಾಗಿ ಬದಲಾಯಿಸಿಕೊಳ್ಳಿ. ಜ್ಞಾನದ ಜೊತೆಗೆ ಉತ್ಸಾಹ ಮತ್ತು ಕೌಶಲ್ಯತೆಗೆ ಆದ್ಯತೆ ನೀಡಿ. ನಿಮ್ಮಲ್ಲಿರುವ ಶಕ್ತಿ ಮತ್ತು ದೌರ್ಬಲ್ಯಗಳನ್ನು ವಿಮರ್ಶಿಸಿಕೊಳ್ಳಿ. ಇತರ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನಗಳಿಗಿಂತ, ನಿಮ್ಮ ಪ್ರಶ್ನೆಗಳನ್ನು ಬಗೆಹರಿಸಿಕೊಳ್ಳುವ ಕಲೆ ಅಳವಡಿಸಿಕೊಳ್ಳಿ. ಆಂತರ್ಯದ ಸೌಂದರ್ಯಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುವ ಸಹಾನುಭೂತಿ ಬೆಳೆಸಿಕೊಳ್ಳಿ ಎಂದು ಹೇಳಿದರು.
ಇದನ್ನೂ ಓದಿ » ಶಿವಮೊಗ್ಗ ಜನಶತಾಬ್ದಿ ಸೇರಿ ಹಲವು ರೈಲುಗಳ ಪ್ರಯಾಣ ಅವಧಿ ಕಡಿತ, ಯಶವಂತಪುರ ರೈಲಿನ ವೇಳಾಪಟ್ಟಿ ಬದಲು
ಎನ್ಇಎಸ್ ಸಹಕಾರ್ಯದರ್ಶಿ ಡಾ.ಪಿ.ನಾರಾಯಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲರಾದ ಡಾ.ಜಿ.ನಾರಾಯಣ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಕೀರ್ತನ ಪ್ರಾರ್ಥಿಸಿ, ಪ್ರಾಧ್ಯಾಪಕ ಡಾ.ಪ್ರಸನ್ನ ಸ್ವಾಗತಿಸಿ, ಉಪನ್ಯಾಸಕಿ ಲಿಖಿತಾ ಸ್ವಾಗತಿಸಿದರು. ಬಿಫಾರ್ಮ್ ಮತ್ತು ಎಂಫಾರ್ಮ್ ವಿವಿಧ ವಿಭಾಗಗಳ 120 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪತ್ರ ಪಡೆದರು.
LATEST NEWS
- ₹1,00,000 ಲಂಚದ ಹಣದೊಂದಿಗೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿ, ಮಧ್ಯವರ್ತಿ

- ಸರಕು ರೇಟ್ ಕುಸಿತ, ಉಳಿದ ಮಾದರಿ ಅಡಿಕೆ ರೇಟ್ ಎಷ್ಟಿದೆ? | 2 ಮಾರ್ಚ್ 2026

- ಮಾರಿಕಾಂಬ ಜಾತ್ರೆಯಲ್ಲಿ ಕಳೆದು ಹೋದ ವೃದ್ಧೆ, ಪತ್ತೆ ಮಾಡಿ ಮನೆಗೆ ಬಿಟ್ಟು ಬಂದ ಪೊಲೀಸ್, ಆಗಿದ್ದೇನು?

- ನಂದಿನಿ ಗ್ರಾಹಕರಿಗೆ ಗುಡ್ ನ್ಯೂಸ್, 1 ಕೆ.ಜಿ ಬಕೆಟ್ ಮೊಸರು ಮಾರುಕಟ್ಟೆಗೆ ಎಂಟ್ರಿ, ಎಷ್ಟಿರುತ್ತೆ ರೇಟ್?

- ‘ಒಂದು ಕೋಟಿ ರುಪಾಯಿ ನೆರವು, ಸರ್ಕಾರಿ ನೌಕರಿ ಕೊಡಬೇಕು’, ಕುರುಬರ ವೇದಿಕೆ ಪಟ್ಟು

About The Editor
ನಿತಿನ್ ಆರ್.ಕೈದೊಟ್ಲು





