ಆರತಿ ಬೆಳಗಿ, ಹೂವು ನೀಡಿ ಮಕ್ಕಳನ್ನು ಸ್ವಾಗತಿಸಿದ ಶಿಕ್ಷಕರು, ಶಿವಮೊಗ್ಗ ಜಿಲ್ಲೆಯಲ್ಲಿ ಹೇಗಿತ್ತು ಶಾಲೆ ಆರಂಭೋತ್ಸವ?

ಶಿವಮೊಗ್ಗ: ಬೇಸಿಗೆ ರಜೆಯ ಮಜಾ ಮುಗಿಸಿ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಸುಮಾರು 2.49 ಲಕ್ಷ ವಿದ್ಯಾರ್ಥಿಗಳು ಇಂದು ಸಂಭ್ರಮದಿಂದ ಶಾಲೆಗೆ ಮರಳಿದ್ದಾರೆ. ಜೂನ್ 1ರ ಸಂಪ್ರದಾಯದಂತೆ ಜಿಲ್ಲೆಯಾದ್ಯಂತ ‘ಶಾಲಾ ಪ್ರಾರಂಭೋತ್ಸವ’ ಅದ್ಧೂರಿಯಾಗಿ ನಡೆದಿದೆ. ದುರ್ಗಿಗುಡಿಯ ಸರ್ಕಾರಿ ಶಾಲೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಮೊದಲ ದಿನವೇ ಮಕ್ಕಳ ಹಾಜರಾತಿ ಗಣನೀಯವಾಗಿ ಹೆಚ್ಚಿರುವುದು ಕಂಡುಬಂದಿದೆ.

ದುರ್ಗಿಗುಡಿ ಶಾಲೆಯಲ್ಲಿ ಮಕ್ಕಳಿ ಅದ್ಧೂರಿ ಸ್ವಾಗತ

ನಗರದ ದುರ್ಗಿಗುಡಿಯಲ್ಲಿರುವ ಸರ್ಕಾರಿ ಶಾಲೆಗೆ ಮುಂಜಾನೆಯೇ ಉತ್ಸಾಹದಿಂದ ಆಗಮಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರು ಹೂವು ಕೊಟ್ಟು, ಆರತಿ ಬೆಳಗಿ ಹಾಗೂ ಚಾಕ್ಲೇಟ್ ನೀಡಿ ಸ್ವಾಗತಿಸಿದರು.

Schools-Re-Opened-in-Shivamogga-Durgigudi-School.

ಮೊದಲ ದಿನವೇ ತರಗತಿ ಆರಂಭಕ್ಕೂ ಮುನ್ನ ಮಕ್ಕಳಿಗೆ ಸಂವಿಧಾನದ ಪೀಠಿಕೆ ಹಾಗೂ ಪ್ರಮುಖ ವಿಧಿಗಳ ಬೋಧನೆ ಮಾಡಿದ್ದು ಈ ಬಾರಿಯ ಪ್ರಾರಂಭೋತ್ಸವದ ವಿಶೇಷವಾಗಿತ್ತು. ವಿದ್ಯಾರ್ಥಿಗಳ ಸ್ವಾಗತಕ್ಕಾಗಿ ಜಿಲ್ಲೆಯ 2,800 ಶಾಲೆಗಳಲ್ಲಿ ಮೇ 29ರಿಂದಲೇ ಸಿದ್ಧತೆ ನಡೆದಿತ್ತು. ಶಾಲೆಗಳನ್ನು ಸುಣ್ಣ-ಬಣ್ಣದ ಅಲಂಕಾರ ಹಾಗೂ ತೋರಣಗಳಿಂದ ಸಜ್ಜುಗೊಳಿಸಲಾಗಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp