| No.1 News Website |
| ಶಿವಮೊಗ್ಗ ಲೈವ್ ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್ ಹೊಂದಿರುವ ವೆಬ್‌ಸೈಟ್. ನೀವು ನಮ್ಮ ವಾಟ್ಸಪ್ ಗ್ರೂಪ್ ಸೇರಲು » ಇಲ್ಲಿ ಕ್ಲಿಕ್ ಮಾಡಿ. |
![]()
ಶಿವಮೊಗ್ಗ: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಶಿವಮೊಗ್ಗ ಜಿಲ್ಲೆ ಶೇ.82.30ರಷ್ಟು ಫಲಿತಾಂಶದೊಂದಿಗೆ (Result) ರಾಜ್ಯದಲ್ಲಿ ಟಾಪ್ 4ನೇ ಸ್ಥಾನದಲ್ಲಿದೆ.
ಇದನ್ನೂ ಓದಿ » ಎಸ್ಸೆಸ್ಸೆಲ್ಸಿ ಫಲಿತಾಂಶ, ಶಿವಮೊಗ್ಗದ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ
ಜಿಲ್ಲೆಯಲ್ಲಿ 21,876 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು 18,003 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಫಲಿತಾಂಶದ ಹೈಲೈಟ್ ಪಾಯಿಂಟ್ಸ್
ಶಿವಮೊಗ್ಗ ಜಿಲ್ಲೆಯ 84 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ. ಶೂನ್ಯ ಫಲಿತಾಂಶ ಪಡೆದ ಒಂದೂ ಶಾಲೆ ಇಲ್ಲ.
ಮೂವರು ವಿದ್ಯಾರ್ಥಿಗಳು 625, ನಾಲ್ವರು ವಿದ್ಯಾರ್ಥಿಗಳು 624, 73 ವಿದ್ಯಾರ್ಥಿಗಳು 620ಕ್ಕಿಂತಲು ಹೆಚ್ಚು ಅಂಕ, 780 ವಿದ್ಯಾರ್ಥಿಗಳು 600ಕ್ಕಿಂತಲು ಹೆಚ್ಚು ಅಂಕ ಗಳಿಸಿದ್ದಾರೆ.

» ತಾಲೂಕುವಾರು ವಿವರ
ಜಿಲ್ಲೆಯಲ್ಲಿ ತೀರ್ಥಹಳ್ಳಿ ತಾಲೂಕು ಪ್ರಥಮ ಸ್ಥಾನ ಪಡೆದಿದೆ. ಶೇ.94.43ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಸಾಗರದಲ್ಲಿ ಶೇ.90.21, ಹೊಸನಗರ ಶೇ.89.60, ಸೊರಬ ಶೇ.85, ಶಿವಮೊಗ್ಗ ಶೇ.80.52, ಭದ್ರಾವತಿ ಶೇ.77.02, ಶಿಕಾರಿಪುರದಲ್ಲಿ ಶೇ.73.50ರಷ್ಟು ಫಲಿತಾಂಶ ಲಭಿಸಿದೆ.
ನಗರ ಪ್ರದೇಶದಲ್ಲಿ ಹೆಚ್ಚು ಫಲಿತಾಂಶ ಲಭಿಸಿದೆ. ಶೇ.82.35ರಷ್ಟು ನಗರ ಪ್ರದೇಶದ ವಿದ್ಯಾರ್ಥಿಗಳು, ಶೇ.82.25ರಷ್ಟು ಗ್ರಾಮೀಣ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಜಿಲ್ಲಾಮಟ್ಟದಲ್ಲಿ ಬಾಲಕಿಯರೆ ಮೇಲುಗೈ ಸಾಧಿಸಿದ್ದಾರೆ. 11,187 ವಿದ್ಯಾರ್ಥಿನಿಯರ ಪೈಕಿ 9740 ವಿದ್ಯಾರ್ಥಿನಿಯರು ಪಾಸಾಗಿದ್ದಾರೆ. ವಿದ್ಯಾರ್ಥಿನಿಯರ ತೇರ್ಗಡೆ ಪ್ರಮಾಣ ಶೇ.87.07ರಷ್ಟಿದೆ.
10,689 ಬಾಲಕರ ಪೈಕಿ 8263 ಬಾಲಕರು ಪಾಸಾಗಿದ್ದಾರೆ. ಬಾಲಕರಲ್ಲಿ ಉತ್ತೀರ್ಣರಾದವರ ಪ್ರಮಾಣ ಶೇ.77.30ರಷ್ಟಿದೆ.
![]()
ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲು ಉತ್ತಮ ಫಲಿತಾಂಶ ಲಭಿಸಿದೆ. ಸರ್ಕಾರಿ ಶಾಲೆಗಳಲ್ಲಿ ಓದಿದ ಶೇ.81.10ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಅನುದಾನಿತ ಶಾಲೆಗಳಲ್ಲಿ ಶೇ.75.15, ಅನುದಾನಿತ ಶಾಲೆಗಳಲ್ಲಿ ಶೇ.89.29ರಷ್ಟು ಫಲಿತಾಂಶ ಲಭಿಸಿದೆ.

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್ ಮೇಲೆ ಕ್ಲಿಕ್ ಮಾಡಿ, ಸುದ್ದಿ ಓದಿ.
- ಶಿವಮೊಗ್ಗದಲ್ಲಿ 300 ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ, ಇಲ್ಲಿವೆ ಸಾಲು ಸಾಲು ಫೋಟೊಗಳು
- ಇವತ್ತು ಉತ್ತರಾಷಾಢ ನಕ್ಷತ್ರ, ದ್ವಾದಶಿ, ರಾಶಿ ಫಲ ಹೇಗಿದೆ? – ಓದಲು ಇಲ್ಲಿ ಕ್ಲಿಕ್ ಮಾಡಿ
- ಶಿವಮೊಗ್ಗದ ಜೊತೆಗೆ ಶಾಮನೂರು ನಂಟು, ಇಲ್ಲಿತ್ತು ವ್ಯಾವಹಾರಿಕ ಸಂಬಂಧ, ಶಿಷ್ಯರ ಬಳಗ, ಚಿಕ್ಕಮ್ಮನ ಮನೆ
- ಸಿಗಂದೂರು ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ ಮೈಸೂರಿನ ವ್ಯಕ್ತಿ
- ಯಡೇಹಳ್ಳಿ ಕ್ರಾಸ್ ಬಳಿ ಅರಣ್ಯ ಸಂಚಾರಿ ದಳದ ದಾಳಿ, ಕಾರಾವಾರದ ವ್ಯಕ್ತಿ ಅರೆಸ್ಟ್
- ಅಡಿಕೆ ಎಲೆಚುಕ್ಕಿ ರೋಗ, ಬಾಕಿ ಹಣ ಬಿಡುಗಡೆಗೆ ಸಿಎಂ ಸೂಚನೆ
- ಕಿತ್ತೂರು ರಾಣಿ ಚನ್ನಮ್ಮ, ವೀರ ಮಹಿಳೆ ಪ್ರಶಸ್ತಿಗೆ ಅರ್ಜಿ
- ಸಾಗರ ನಗರಸಭೆ ಎಚ್ಚರಿಕೆ, ಬೀದಿ ನಾಯಿಗಳ ನಿಯಂತ್ರಣ ಕುರಿತು ಪ್ರಮುಖ ಪ್ರಕಟಣೆ
![]()