BREAKING NEWS – ಪರೀಕ್ಷೆ ಮುಗಿದು 48 ಗಂಟೆಯಲ್ಲಿ ಎರಡು ಸೆಮಿಸ್ಟರ್‌ ರಿಸೆಲ್ಟ್‌ ಪ್ರಕಟಿಸಿದ ಕುವೆಂಪು ವಿವಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 14 SEPTEMBER 2023

SHANKARAGHATTA : ಕುವೆಂಪು ವಿಶ್ವವಿದ್ಯಾಲಯದ ಬಿ.ಸಿ.ಎ. (ಬ್ಯಾಚಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್) ಪದವಿಯ 5 ಮತ್ತು 6ನೇ ಸೆಮಿಸ್ಟರ್‌ಗಳ ಪರೀಕ್ಷೆ ಮುಗಿದು 48 ಗಂಟೆಯಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ. ಈ ಮೂಲಕ ಶೈಕ್ಷಣಿಕ ದಾಖಲೆ ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಸ್ತುತ ನಾನ್-ಎನ್.ಇ.ಪಿ ಬ್ಯಾಚ್‌ನ ಬಿ.ಸಿ.ಎ. ಪದವಿಯ 5 ಮತ್ತು 6ನೇ ಸೆಮಿಸ್ಟರ್‌ಗಳ ಪರೀಕ್ಷೆ ಸೆ.12ರಂದು ನಡೆದಿತ್ತು. ಇವೆರಡು ಸೆಮಿಸ್ಟರ್‌ಗಳ ಫಲಿತಾಂಶ ಇವತ್ತು ಪ್ರಕಟವಾಗಿದೆ. ಫಲಿತಾಂಶವು ವಿದ್ಯಾರ್ಥಿಗಳ ಪೋರ್ಟಲ್‌ನಲ್ಲಿ ಲಭ್ಯವಿದೆ. ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೂ ಸಂದೇಶದ ಮೂಲಕವು ತಲುಪಿಸಲಾಗಿದೆ.

ವಿವಿ ವ್ಯಾಪ್ತಿಯ ಬಿ.ಸಿ.ಎ. ಪದವಿಯ ಅಂತಿಮ ವರ್ಷದ ಪರೀಕ್ಷಾ ಫಲಿತಾಂಶವನ್ನು ಶೀಘ್ರವಾಗಿ ಪ್ರಕಟಿಸಲು ವಿವಿಯ ಪರೀಕ್ಷಾಂಗ ಸಿಬ್ಬಂದಿ, ಬೋಧಕ ವರ್ಗ ಸಾಕಷ್ಟು ಶ್ರಮಿಸಿದೆ. ಅವರ ಸಹಕಾರದಿಂದ ತ್ವರಿತವಾಗಿ ಫಲಿತಾಂಶ ನೀಡಿ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗ, ಉದ್ಯೋಗಕ್ಕೆ ಅಗತ್ಯ ನೆರವು ನೀಡಲಾಗಿದೆ.ಪ್ರೊ. ಎಸ್.ಎಂ.ಗೋಪಿನಾಥ್, ಪರೀಕ್ಷಾಂಗ ಕುಲಸಚಿವ

ಇದನ್ನೂ ಓದಿ – ಶಿವಮೊಗ್ಗದಲ್ಲಿ ಒಕ್ಕಲಿಗ ಯುವ ಸಮಾವೇಶ, 102 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಯಾರೆಲ್ಲ ಏನೇನು ಹೇಳಿದರು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment