ಶಿವಮೊಗ್ಗದಲ್ಲಿ ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲೂ 300ಕ್ಕೂ ಹೆಚ್ಚು ಮಂದಿಗೆ ಕರೋನ, ಯಾವ್ಯಾವ ತಾಲೂಕಲ್ಲಿ ಎಷ್ಟೆಷ್ಟಿದೆ ಸೋಂಕಿನ ಪ್ರಮಾಣ?

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಜನವರಿ 2022

ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲೂ ಶಿವಮೊಗ್ಗ ಜಿಲ್ಲೆಯಲ್ಲಿ ಕರೋನ ಸೋಂಕಿತರ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದ ಹೆಚ್ಚಳವಾಗಿದೆ. ಇವತ್ತು ಜಿಲ್ಲೆಯಲ್ಲಿ 366  ಮಂದಿಗೆ ಸೋಂಕು ತಗುಲಿದೆ ಎಂದು ಶಿವಮೊಗ್ಗ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.

AVvXsEgvkqR5na6VBgyQ7GpgkZA0SK3TnlX05prWtKfmX8meEFOtOAl

ಇವತ್ತು ಪಾಸಿಟಿವ್ ಬಂದಿರುವವರ ಪೈಕಿ ಅತಿ ಹೆಚ್ಚು ಮಂದಿ ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕಿಗೆ ಸೇರಿದವರಾಗಿದ್ದಾರೆ. ಶಿವಮೊಗ್ಗ ತಾಲೂಕಿನ 161 ಮಂದಿಗೆ ಸೋಂಕು ತಗುಲಿದೆ. ಇನ್ನು, ಭದ್ರಾವತಿಯ 98, ತೀರ್ಥಹಳ್ಳಿಯ 16, ಶಿಕಾರಿಪುರದ 5, ಸಾಗರದ 49, ಹೊಸನಗರದ 23, ಸೊರಬದ 8, ಹೊರ ಜಿಲ್ಲೆಯ 6 ಮಂದಿಗೆ ಸೋಂಕು ತಗುಲಿದೆ.

ಮತ್ತೊಂದೆಡೆ ಕರೋನದಿಂದ ಗುಣವಾದವರ ಸಂಖ್ಯೆ ಕೂಡ ದೊಡ್ಡದಿದೆ. ಜಿಲ್ಲೆಯಲ್ಲಿ ಇವತ್ತು 199 ಮಂದಿ ಸೋಂಕಿನಿಂದ ಗುಣವಾಗಿದ್ದಾರೆ ಎಂದು ಜಿಲ್ಲಾಡಳಿತದ ವರದಿಯಲ್ಲಿ ತಿಳಿಸಲಾಗಿದೆ. ಇದು ಜಿಲ್ಲೆಯ ಜನರಲ್ಲಿ ನಿಟ್ಟುಸಿರು ಬಿಡುವ ಹಾಗೆ ಮಾಡಿದೆ.

ಈ ಮಧ್ಯೆ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1335ಗೆ ಏರಿಕೆಯಾಗಿದೆ. 49 ಮಂದಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 21 ಮಂದಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಿಸಿಹೆಚ್’ಸಿಯಲ್ಲಿ 36, ಟ್ರಯೇಜ್’ನಲ್ಲಿ 33 ಮಂದಿ, ಹೋಮ್ ಐಸೊಲೇಷನ್’ನಲ್ಲಿ 1196 ಮಂದಿ ಇದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ | ವಿಧಾನ ಪರಿಷತ್ ಸದಸ್ಯ ರುದ್ರೇಗೌಡ ಅವರಿಗೆ ಕರೋನ ಪಾಸಿಟಿವ್

ABOUT ME DECEMBER REPORT

ಹೆಚ್ಚಿನ Shimoga News, Shivamogga News ಮತ್ತು NEWS ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.
Kalleshwara-Enterprises.webp

© ಶಿವಮೊಗ್ಗ ಲೈವ್‌ : ಜನವರಿ 15, 2022

Leave a Comment