ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 11 ಜನವರಿ 2022
ಶಿವಮೊಗ್ಗ ಜಿಲ್ಲೆಯಲ್ಲಿ ಸತತ ನಾಲ್ಕನೆ ದಿನವೂ ಕರೋನ ಸೋಂಕಿತರ ಸಂಖ್ಯೆ ನೂರಕ್ಕಿಂತಲೂ ಹೆಚ್ಚಳವಾಗಿದೆ. ಈ ಮಧ್ಯೆ ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವ ಪ್ರಕರಣಗಳು ಆತಂಕಕ್ಕೆ ಕಾರಣವಾಗಿದೆ. ಮತ್ತೊಂದೆಡೆ ದೊಡ್ಡ ಸಂಖ್ಯೆಯಲ್ಲಿ ಸೋಂಕಿತರು ಗುಣವಾಗಿರುವುದು ತುಸು ನೆಮ್ಮದಿ ಮೂಡಿಸಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು 133 ಮಂದಿಗೆ ಕರೋನ ಪಾಸಿಟಿವ್ ಬಂದಿದೆ. ಈ ಪೈಕಿ 84 ಮಂದಿಗೆ ಶಿವಮೊಗ್ಗ ತಾಲೂಕಿಗೆ ಸೇರಿದ್ದಾರೆ. ಭದ್ರಾವತಿಯ 20, ತೀರ್ಥಹಳ್ಳಿಯ 6, ಶಿಕಾರಿಪುರದ 5, ಸಾಗರದ 11, ಹೊಸನಗರದ 3, ಸೊರಬದ 4 ಮಂದಿಗೆ ಸೋಂಕು ತಗುಲಿದೆ.
ಐನೂರರ ಗಡಿ ದಾಟಿದ ಸಕ್ರಿಯ ಪ್ರಕರಣ
ಇವತ್ತು 133 ಮಂದಿಗೆ ಸೋಂಕು ತಗುಲಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಐನೂರರ ಗಡಿ ದಾಟಿದೆ. ಜಿಲ್ಲೆಯಲ್ಲಿ ಸದ್ಯ 548 ಸಕ್ರಿಯ ಪ್ರಕರಣಗಳಿವೆ. ಸೋಂಕಿತರ ಪೈಕಿ 78 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 42 ಸೋಂಕಿತರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಿಸಿಹೆಚ್’ಸಿಯಲ್ಲಿ 32, ಹೋಮ್ ಐಸೊಲೇಷನ್’ನಲ್ಲಿ 348, ಟ್ರಯೇಜ್’ನಲ್ಲಿ 12 ಮಂದಿ ಚಿಕಿತ್ಸೆಯಲ್ಲಿದ್ದಾರೆ.
ಶಿಕ್ಷಣ ಸಂಸ್ಥೆಗಳಲ್ಲಿ ಪ್ರಕರಣ ಹೆಚ್ಚಳ
ಇವೆಲ್ಲದರ ನಡುವೆ ಶಿಕ್ಷಣ ಸಂಸ್ಥೆಗಳಲ್ಲಿ ನಡೆಸಿದ ರಾಂಡಮ್ ಟೆಸ್ಟ್ ವೇಳೆ ಹಲವರಲ್ಲಿ ಸೋಂಕು ಕಾಣಿಸಿಕೊಂಡಿದೆ. 21 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.
ಇನ್ನು, ಇವತ್ತು ಜಿಲ್ಲೆಯಲ್ಲಿ 50 ಮಂದಿ ಕರೋನದಿಂದ ಗುಣವಾಗಿದ್ದಾರೆ. ಇದು ತುಸು ನೆಮ್ಮದಿ ಮೂಡಿಸಿದೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ರಾಜಕಾರಣಿಗಳೆ ಮಾಸ್ಕ್ ಮರೆತರು, ದಂಡ ಹಾಕಬೇಕಿದ್ದವರು ಮೂಕ ಪ್ರೇಕ್ಷಕರಾದರು
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422