ಜಲಾಶಯ ಸುದ್ದಿ: ಜಲಾನಯನ ಪ್ರದೇಶಗಳಲ್ಲಿ ಜೋರು ಮಳೆಯಾಗುತ್ತಿರುವುದರಿಂದ ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳ (Dam Level) ಒಳ ಹರಿವು ಮತ್ತು ನೀರಿನ ಮಟ್ಟ ಹೆಚ್ಚಳವಾಗಿದೆ.
ಯಾವ್ಯಾವ ಡ್ಯಾಂಗೆ ಎಷ್ಟಿದೆ ಒಳ ಹರಿವು?
ಲಿಂಗನಮಕ್ಕಿ ಜಲಾಶಯ: ಇಂದು 67,856 ಕ್ಯೂಸೆಕ್ ಒಳ ಹರಿವು ಇದೆ. ಹಾಗಾಗಿ ಒಂದೇ ದಿನದಲ್ಲಿ ಜಲಾಶಯದ ನೀರಿನ ಮಟ್ಟ 1.95 ಅಡಿ ಏರಿಕೆಯಾಗಿದೆ. ಪ್ರಸ್ತುತ 1808.35 ಅಡಿಯಷ್ಟು ನೀರಿನ ಸಂಗ್ರಹವಿದೆ. 3335 ಕ್ಯೂಸೆಕ್ ಹೊರ ಹರಿವು ಇದೆ. ಈ ಭಾಗದಲ್ಲಿ ಇವತ್ತೂ ಜೋರು ಮಳೆಯಾಗುವ ಸಾಧ್ಯತೆ ಇರುವುದರಿಂದ ಒಳ ಹರಿವು ಏರಿಕೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯೋ ಮಳೆ, ಇವತ್ತೂ ಹವಾಮಾನ ಇಲಾಖೆಯಿಂದ ಎಚ್ಚರಿಕೆ, ಎಲ್ಲೆಡೆ ರಜೆ
ಭದ್ರಾ ಜಲಾಶಯ: ಇವತ್ತು 21,568 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ನೀರಿನ ಮಟ್ಟ 180.6 ಅಡಿಯಷ್ಟಿದೆ. ಒಟ್ಟು 21,568 ಕ್ಯೂಸಕ್ ನೀರನ್ನು ಹೊರಬಿಡಲಾಗುತ್ತಿದೆ. ಈ ಪೈಕಿ 16,857 ಕ್ಯೂಸೆಕ್ ನೀರನ್ನು ಕ್ರಸ್ಟ್ ಗೇಟುಗಳ ಮೂಲಕ ಹೊಳೆಗೆ ಹರಿಸಲಾಗುತ್ತಿದೆ. ಬಲದಂಡೆ ನಾಲೆಗೆ 2000 ಕ್ಯೂಸೆಕ್ ಹರಿಸಾಗುತ್ತಿದೆ.

ತುಂಗಾ ಜಲಾಶಯ: 49,139 ಕ್ಯೂಸೆಕ್ ಒಳಹರಿವು ಇದೆ. ಈಗಾಗಲೇ ಜಲಾಶಯ ಭರ್ತಿ ಆಗಿರುವುದರಿಂದ ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. 50,667 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
