ಜಲಾಶಯಗಳ ಮಾಹಿತಿ: ಜಿಲ್ಲೆಯ ಮೂರು ಪ್ರಮುಖ ಜಿಲಾಶಯಗಳ ನೀರಿನ ಮಟ್ಟ
ಲಿಂಗನಮಕ್ಕಿ ಜಲಾಶಯ
ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1819 ಅಡಿ. ಪ್ರಸ್ತುತ ನೀರಿನ ಮಟ್ಟ 1752.20 ಅಡಿಗೆ ತಲುಪಿದೆ. ಜಲಾಶಯಕ್ಕೆ ಸದ್ಯ ಯಾವುದೇ ಒಳಹರಿವು ದಾಖಲಾಗಿಲ್ಲ (ಶೂನ್ಯ). ಆದರೆ, ವಿದ್ಯುತ್ ಉತ್ಪಾದನೆಗಾಗಿ ಪೆನ್‌ಸ್ಟಾಕ್ ಹಾಗೂ ಸ್ಲೂಯಿಸ್ ಗೇಟ್‌ಗಳ ಮೂಲಕ ಒಟ್ಟು 6,020 ಕ್ಯೂಸೆಕ್ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಪ್ರಸ್ತುತ ಡ್ಯಾಂನಲ್ಲಿ 20.13 ಟಿಎಂಸಿ ಲೈವ್ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ಮಟ್ಟ 1766.35 ಅಡಿಗಳಷ್ಟಿತ್ತು. 34.62 ಟಿಎಂಸಿ ನೀರು ಸಂಗ್ರಹವಿತ್ತು.

ಭದ್ರಾ ಜಲಾಶಯ
ಒಟ್ಟು 71.535 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿ. ಇಂದು ಬೆಳಗಿನ ವರದಿಯ ಅನ್ವಯ 137 ಅಡಿ 2 ಇಂಚು ನೀರಿನ ಮಟ್ಟ ದಾಖಲಾಗಿದೆ. ಪ್ರಸ್ತುತ ಜಲಾಶಯದಲ್ಲಿ 24.997 ಟಿಎಂಸಿ ನೀರು ಲಭ್ಯವಿದೆ. ಡ್ಯಾಂಗೆ ಸದ್ಯ 129 ಕ್ಯೂಸೆಕ್ ಒಳಹರಿವು ಇದೆ. ಎಡ-ಬಲದಂಡೆ ನಾಲೆ ಹಾಗೂ ನದಿಗೆ ಸೇರಿ ಒಟ್ಟು 441 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ಮಟ್ಟ 142 ಅಡಿ 1 ಇಂಚು ಇತ್ತು. 28.336 ಟಿಎಂಸಿ ನೀರಿನ ಸಂಗ್ರಹವಿತ್ತು ಹಾಗೂ 3,055 ಕ್ಯೂಸೆಕ್ ಒಳಹರಿವು ಇತ್ತು.
ತುಂಗಾ ಜಲಾಶಯ
ಗಾಜನೂರಿನ ತುಂಗಾ ಜಲಾಶಯದ ಗರಿಷ್ಠ ಮಟ್ಟ 588.24 ಮೀಟರ್ ಆಗಿದ್ದು, ಇಂದಿನ ನೀರಿನ ಮಟ್ಟ 586.76 ಮೀಟರ್ ದಾಖಲಾಗಿದೆ. ಜಲಾಶಯದ ಒಟ್ಟು ಸಾಮರ್ಥ್ಯ 3.24 ಟಿಎಂಸಿ ಆಗಿದ್ದು, ಪ್ರಸ್ತುತ 2.424 ಟಿಎಂಸಿ ಸಂಗ್ರಹವಿದೆ. ಡ್ಯಾಂಗೆ ಸದ್ಯ 81 ಕ್ಯೂಸೆಕ್ ಒಳಹರಿವು ಇದ್ದು, 90 ಕ್ಯೂಸೆಕ್ ಹೊರ ಹರಿವಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 587.75 ಮೀಟರ್ ಇತ್ತು. 4,910 ಕ್ಯೂಸೆಕ್ ಒಳಹರಿವು ಇತ್ತು.

