ಶಿವಮೊಗ್ಗ ಲೈವ್.ಕಾಂ | ಜಲಾಶಯದ ಮಾಹಿತಿ
ಮಲೆನಾಡು ಭಾಗದಲ್ಲಿ ಸಾಧಾರಣ ಮಳೆ ಮುಂದುವರೆದಿದ್ದು ಜಲಾಶಯಗಳಿಗೆ ನೀರಿನ ಹರಿವು ಮುಂದುವರೆದಿದೆ. ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳಾದ ತುಂಗಾ, ಭದ್ರಾ ಮತ್ತು ಲಿಂಗನಮಕ್ಕಿ ಡ್ಯಾಮ್‌ಗಳ ನೀರಿನ ಮಟ್ಟ ಇವತ್ತು ಎಷ್ಟಿದೆ? ಇಲ್ಲಿದೆ ಡಿಟೇಲ್ಸ್. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಲಿಂಗನಮಕ್ಕಿ ಜಲಾಶಯ
- ಗರಿಷ್ಠ ಮಟ್ಟ: 1819.00 ಅಡಿ
- ಇಂದಿನ ನೀರಿನ ಮಟ್ಟ: 1796.80 ಅಡಿ
- ಒಟ್ಟು ಸಾಮರ್ಥ್ಯ: 151.64 ಟಿಎಂಸಿ
- ಲಭ್ಯವಿರುವ ನೀರು: 88.19 ಟಿಎಂಸಿ
- ಒಳಹರಿವು: 12,863 ಕ್ಯೂಸೆಕ್
- ಹೊರಹರಿವು: 4,619.22 ಕ್ಯೂಸೆಕ್
ಆಗಸ್ಟ್ 24ರಂದು ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1796.50 ಅಡಿ ಇತ್ತು. ಇವತ್ತು ಅದು 1796.80 ಅಡಿಗೆ ಏರಿಕೆಯಾಗಿದೆ (0.30 ಅಡಿ ಹೆಚ್ಚಳ). ನಿನ್ನೆ ಒಳಹರಿವು 13,606 ಕ್ಯೂಸೆಕ್ ಇದ್ದದ್ದು ಇವತ್ತು 12,863 ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಹೊರ ಹರಿವು 5,362.13 ಕ್ಯೂಸೆಕ್‌ನಿಂದ 4,619.22 ಕ್ಯೂಸೆಕ್‌ಗೆ ತಗ್ಗಿದೆ.

ಭದ್ರಾ ಜಲಾಶಯ
- ಗರಿಷ್ಠ ಮಟ್ಟ: 186 ಅಡಿ
- ಇಂದಿನ ನೀರಿನ ಮಟ್ಟ: 175 ಅಡಿ 11 ಇಂಚು
- ಒಟ್ಟು ಜಲಸಾಮರ್ಥ್ಯ: 71.535 ಟಿಎಂಸಿ
- ಲಭ್ಯವಿರುವ ನೀರು: 59.420 ಟಿಎಂಸಿ
- ಒಳಹರಿವು: 5,680 ಕ್ಯೂಸೆಕ್
- ಹೊರಹರಿವು: 206 ಕ್ಯೂಸೆಕ್
ನಿನ್ನೆ ಭದ್ರಾ ಜಲಾಶಯದ ನೀರಿನ ಮಟ್ಟ 175 ಅಡಿ 6 ಇಂಚು ಇತ್ತು. ಇಂದು 175 ಅಡಿ 11 ಇಂಚಿಗೆ ಹೆಚ್ಚಳವಾಗಿದೆ. 4,580 ಕ್ಯೂಸೆಕ್ ಇದ್ದ ಒಳಹರಿವು ಇಂದು 5,680 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಇನ್ನು ಹೊರ ಹರಿವು ನಿನ್ನೆ 205 ಕ್ಯೂಸೆಕ್ ಇದ್ದದ್ದು ಇಂದು 206 ಕ್ಯೂಸೆಕ್ಸ್‌ಗೆ ಏರಿದೆ.
ತುಂಗಾ ಜಲಾಶಯ
- ಗರಿಷ್ಠ ಮಟ್ಟ: 588.24 ಮೀಟರ್
- ಇಂದಿನ ನೀರಿನ ಮಟ್ಟ: 588.24 ಮೀಟರ್
- ಒಟ್ಟು ಸಾಮರ್ಥ್ಯ: 3.24 ಟಿಎಂಸಿ
- ಲಭ್ಯವಿರುವ ನೀರು: 2.411 ಟಿಎಂಸಿ
- ಒಳಹರಿವು: 16,607 ಕ್ಯೂಸೆಕ್
- ಹೊರಹರಿವು: 16,607 ಕ್ಯೂಸೆಕ್
ತುಂಗಾ ಜಲಾಶಯದ ನೀರಿನ ಮಟ್ಟ ಗರಿಷ್ಠ ಮಟ್ಟದಲ್ಲೇ ಮುಂದುವರೆದಿದೆ. ಆದರೆ ಒಳ ಹರಿವು ಮತ್ತು ಹೊರ ಹರಿವಿನಲ್ಲಿ ಏರಿಕೆಯಾಗಿದೆ. ನಿನ್ನೆ 14,922 ಕ್ಯೂಸೆಕ್ ಇದ್ದ ಒಳ ಹಾಗೂ ಹೊರಹರಿವು ಇಂದು 16,607 ಕ್ಯೂಸೆಕ್‌ಗೆ ತಲುಪಿದೆ.