ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳಿಗೆ ಎಷ್ಟಿದೆ ಒಳ ಹರಿವು? ಹೊರ ಹರಿವು ಪ್ರಮಾಣ ಎಷ್ಟಿದೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಜಲಾಶಯ ಸುದ್ದಿ: ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಒಳ, ಹೊರ ಹರಿವು ವಿವರ ಇಲ್ಲಿದೆ.

➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಲಿಂಗನಮಕ್ಕಿ ಜಲಾಶಯ

ಶರಾವತಿ ಹಿನ್ನೀರು ಭಾಗದಲ್ಲಿ ಮಳೆಯ ಹಿನ್ನೆಲೆ ಜಲಾಶಯಕ್ಕೆ 956 ಕ್ಯೂಸೆಕ್ ಒಳಹರಿವು ಹರಿದುಬರುತ್ತಿದೆ. ಡ್ಯಾಂನ ಇಂದಿನ ನೀರಿನ ಮಟ್ಟ 1750.50 ಅಡಿ ದಾಖಲಾಗಿದೆ. ಪ್ರಸ್ತುತ 18.63 ಟಿಎಂಸಿ ನೀರು ಸಂಗ್ರಹವಿದೆ. ವಿದ್ಯುತ್ ಉತ್ಪಾದನೆಗಾಗಿ ಪೆನ್‌ಸ್ಟಾಕ್ ಮತ್ತು ಸ್ಲೂಯಿಸ್ ಗೇಟ್‌ಗಳ ಮೂಲಕ ಒಟ್ಟು 4,929 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 1765.85 ಅಡಿ ಇತ್ತು.

tunga-dam-river.

ತುಂಗಾ ಜಲಾಶಯ

ತುಂಗಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ಪ್ರಸ್ತುತ 590 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಜಲಾಶಯದ ಇಂದಿನ ನೀರಿನ ಮಟ್ಟ 586.90 ಮೀಟರ್ ತಲುಪಿದೆ. ಒಟ್ಟು 2.501 ಟಿಎಂಸಿ ನೀರಿನ ಸಂಗ್ರಹವಿದೆ. ಇನ್ನು ಜಲಾಶಯದಿಂದ ನದಿ ಹಾಗೂ ಕುಡಿಯುವ ನೀರಿಗಾಗಿ ಒಟ್ಟು 90 ಕ್ಯೂಸೆಕ್ ನೀರನ್ನು ಹೊರಗೆ ಹರಿಸಲಾಗುತ್ತಿದೆ.  ಕಳೆದ ವರ್ಷ ಇದೇ ದಿನ ಜಲಾಶಯದ ಮಟ್ಟ 587.69 ಮೀಟರ್ ಇತ್ತು.

ಭದ್ರಾ ಜಲಾಶಯ

ಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ 137 ಅಡಿ ದಾಖಲಾಗಿದೆ. ಪ್ರಸ್ತುತ ಜಲಾಶಯದಲ್ಲಿ 24.915 ಟಿಎಂಸಿ ನೀರಿನ ಸಂಗ್ರಹವಿದೆ. ಜಲಾಶಯಕ್ಕೆ ಸದ್ಯ 117 ಕ್ಯೂಸೆಕ್ ಒಳಹರಿವು ಬರುತ್ತಿದ್ದು, ಎಡ-ಬಲದಂಡೆ ನಾಲೆ ಹಾಗೂ ನದಿಗೆ ಸೇರಿ ಒಟ್ಟು 441 ಕ್ಯೂಸೆಕ್ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ ನೀರಿನ ಮಟ್ಟ 142 ಅಡಿ 9 ಇಂಚು ಇತ್ತು ಹಾಗೂ 1,012 ಕ್ಯೂಸೆಕ್ ಒಳಹರಿವು ಇತ್ತು.