ಶಿವಮೊಗ್ಗ ಲೈವ್
ಜಲಾಶಯಗಳ ವರದಿ: ಮಲೆನಾಡು ಭಾಗದಲ್ಲಿ ಮಳೆ ತುಸು ಕಡಿಮೆಯಾಗಿದ್ದು ಕಳೆದ ವಾರಕ್ಕೆ ಹೋಲಿಸಿದರೆ ಜಲಾಶಯಗಳ ಒಳ ಹರಿವು ಪ್ರಮಾಣ ಇಳಿಕೆಯಾಗಿದೆ. ಸದ್ಯ ತುಂಗಾ ಜಲಾಶಯ ಶೇ.100ರಷ್ಟು ಭರ್ತಿಯಾಗಿದ್ದು, ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಭದ್ರಾ, ಲಿಂಗನಮಕ್ಕಿ ಜಲಾಶಯಳಿಗು ಒಳ ಹರಿವು ಮುಂದುವರೆದಿದೆ.
ಲಿಂಗನಮಕ್ಕಿ ಜಲಾಶಯ
- ಗರಿಷ್ಠ ಮಟ್ಟ: 1819.00 ಅಡಿ
- ಇಂದಿನ ಜಲಮಟ್ಟ: 1790.85 ಅಡಿ
- ಒಟ್ಟು ಜಲಸಾಮರ್ಥ್ಯ: 151.64 ಟಿಎಂಸಿ
- ಲಭ್ಯವಿರುವ ನೀರು: 74.98 ಟಿಎಂಸಿ
- ಒಳಹರಿವು: 24,830 ಕ್ಯೂಸೆಕ್
- ಹೊರಹರಿವು: 1,240 ಕ್ಯೂಸೆಕ್
ತುಂಗಾ ಜಲಾಶಯ
- ಗರಿಷ್ಠ ಮಟ್ಟ: 588.24 ಮೀಟರ್
- ಇಂದಿನ ಜಲಮಟ್ಟ: 588.24 ಮೀಟರ್
- ಒಟ್ಟು ಜಲಸಾಮರ್ಥ್ಯ: 3.24 ಟಿಎಂಸಿ
- ಲಭ್ಯವಿರುವ ನೀರು: 2.411 ಟಿಎಂಸಿ
- ಒಳಹರಿವು: 32,304 ಕ್ಯೂಸೆಕ್
- ಹೊರಹರಿವು: 32,304 ಕ್ಯೂಸೆಕ್
ಭದ್ರಾ ಜಲಾಶಯ
- ಗರಿಷ್ಠ ಮಟ್ಟ: 186 ಅಡಿ
- ಇಂದಿನ ಜಲಮಟ್ಟ: 169 ಅಡಿ 10 ಇಂಚು
- ಒಟ್ಟು ಜಲಸಾಮರ್ಥ್ಯ: 71.535 ಟಿಎಂಸಿ
- ಲಭ್ಯವಿರುವ ನೀರು: 52.713 ಟಿಎಂಸಿ
- ಒಳಹರಿವು: 14,446 ಕ್ಯೂಸೆಕ್
- ಹೊರಹರಿವು: 198 ಕ್ಯೂಸೆಕ್
