ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳಿಗೆ ಒಳ ಹರಿವು ಆರಂಭ, ಇವತ್ತು ಎಷ್ಟಿದೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ವಾಟ್ಸಪ್‌ ಮಾಡಲು ಕೆಳಗಿರುವ ನಂಬರ್‌ ಮೇಲೆ ಕ್ಲಿಕ್‌ ಮಾಡಿ.

NEWS HIGHLIGHTS

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಈ ಹಿನ್ನೆಲೆ ಜಿಲ್ಲೆಯ ಲಿಂಗನಮಕ್ಕಿ, ಭದ್ರಾ ಹಾಗೂ ತುಂಗಾ ಜಲಾಶಯಗಳಿಗೆ ಒಳ ಹರಿವು ನಿಧಾನಕ್ಕೆ ಹೆಚ್ಚಳವಾಗುತ್ತಿದೆ.

➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಇವತ್ತು ಎಷ್ಟಿದೆ ಒಳ ಹರಿವು?

ಲಿಂಗನಮಕ್ಕಿ ಜಲಾಶಯ

ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯದ ಒಳಹರಿವಿನ ಪ್ರಮಾಣ 2,513 ಕ್ಯೂಸೆಕ್‌ಗೆ ಏರಿಕೆ ಆಗಿದೆ. ಡ್ಯಾಂನ ಇಂದಿನ ನೀರಿನ ಮಟ್ಟ 1749.85 ಅಡಿ ದಾಖಲಾಗಿದೆ. ಪ್ರಸ್ತುತ 18.06 ಟಿಎಂಸಿ ನೀರು ಸಂಗ್ರಹವಿದೆ. ವಿದ್ಯುತ್ ಉತ್ಪಾದನೆಗಾಗಿ ಪೆನ್‌ಸ್ಟಾಕ್ ಮತ್ತು ಸ್ಲೂಯಿಸ್ ಗೇಟ್‌ಗಳ ಮೂಲಕ ಒಟ್ಟು 3,343 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 1763.80 ಅಡಿ ಇತ್ತು.

Bhadra-dam-General-Image

ಭದ್ರಾ ಜಲಾಶಯ

ಜಲಾಶಯದ ಇಂದಿನ ನೀರಿನ ಮಟ್ಟ 136 ಅಡಿ 10 ಇಂಚು ದಾಖಲಾಗಿದೆ. ಒಟ್ಟು 71.535 ಟಿಎಂಸಿ ಸಂಗ್ರಹ ಸಾಮರ್ಥ್ಯದ ಈ ಜಲಾಶಯದಲ್ಲಿ ಪ್ರಸ್ತುತ 24.808 ಟಿಎಂಸಿ ನೀರಿನ ಸಂಗ್ರಹವಿದೆ. ಜಲಾಶಯಕ್ಕೆ ಸದ್ಯ 140 ಕ್ಯೂಸೆಕ್ ಒಳಹರಿವು ಇದೆ. ಎಡ-ಬಲದಂಡೆ ನಾಲೆ, ನದಿ ಹಾಗೂ ಆವಿಯಾಗುವಿಕೆ ಸೇರಿ ಒಟ್ಟು 441 ಕ್ಯೂಸೆಕ್ ನೀರು ಹೊರಗೆ ಹೋಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ಮಟ್ಟ 143 ಅಡಿ 1 ಇಂಚು ಇತ್ತು ಹಾಗೂ 951 ಕ್ಯೂಸೆಕ್ ಒಳಹರಿವು ಇತ್ತು.

ತುಂಗಾ ಜಲಾಶಯ

ಜಲಾಶಯದ ಇಂದಿನ ನೀರಿನ ಮಟ್ಟ 586.94 ಮೀಟರ್ ತಲುಪಿದೆ. ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 3.24 ಟಿಎಂಸಿ. 2.411 ಟಿಎಂಸಿ ನೀರಿನ ಸಂಗ್ರಹವಿದೆ. ಜಲಾಶಯಕ್ಕೆ ಪ್ರಸ್ತುತ 381 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಇನ್ನು ಜಲಾಶಯದಿಂದ ನದಿ ಹಾಗೂ ಕುಡಿಯುವ ನೀರಿಗಾಗಿ ಒಟ್ಟು 450 ಕ್ಯೂಸೆಕ್ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ಮಟ್ಟ 587.66 ಮೀಟರ್ ಇತ್ತು.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!