ಮಧು ಬಂಗಾರಪ್ಪಗೆ ಮತ್ತೆ ಶಿಕ್ಷಣ ಇಲಾಖೆಯೇ ಸಿಕ್ಕಿದ್ದು ಹೇಗೆ? ಸಚಿವರೆ ಬಾಯಿಬಿಟ್ಟ ಆ ಫೋನ್‌ ಕಾಲ್‌ ಸೀಕ್ರೆಟ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಡಿ.ಕೆ.ಶಿವಕುಮಾರ್‌ ಅವರು ಕರೆ ಮಾಡಿ ಸ್ಟ್ರಾಂಗ್‌ ಆಗಿರುವ ಖಾತೆ ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಆದರೆ ನಾನು ಮಕ್ಕಳ ಭವಿಷ್ಯ ರೂಪಿಸುವ ಖಾತೆಯೇ ಬೇಕು ಎಂದು ಶಿಕ್ಷಣ ಇಲಾಖೆಯನ್ನೇ ಆಯ್ದುಕೊಂಡೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

Minister-Madhu-Bangarappa-reads-Memorable-Trails-book-in-Shimoga

ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಸಂಜೆ ನಿವೃತ್ತ ನ್ಯಾ. ಹೆಚ್‌.ಎನ್‌.ನಾಗಮೋಹನದಾಸ್‌ ಅವರ ಮೆಮೊರಬಲ್‌ ಟ್ರಯಲ್ಸ್‌ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಮಧು ಬಂಗಾರಪ್ಪ, ತಮಗೆ ಸಚಿವ ಸ್ಥಾನ ದೊರತೆ ಹಿನ್ನೆಲೆ ವಿವರಿಸಿದರು.

ಮಿನಿಸ್ಟರ್‌ ಹೇಳಿದ್ದೇನು?

ಮಧು ಬಂಗಾರಪ್ಪ ಪುನಃ ಸಚಿವರಾಗುವುದಿಲ್ಲ ಎಂದು ಹಲವರಿಗೆ ಅನುಮಾನವಿತ್ತು. ಆದರೆ ಡಿ.ಕೆ.ಶಿವಕುಮಾರ್‌ ಅವರು ಅಜ್ಜಯ್ಯನ ಮಠದಲ್ಲಿ ಕುಳಿತು ಯಾರಿಗೆ ಯಾವ ಖಾತೆ ಎಂದು ಪಟ್ಟಿ ಸಿದ್ದಪಡಿಸಿದ್ದರು. ಈ ವೇಳೆ ನನಗೆ ಕರೆ ಮಾಡಿ, ಈಗಾಗಲೇ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿದ್ದೀಯ. ಯಾವುದಾದರು ಸ್ಟ್ರಾಂಗ್‌ ಖಾತೆ ಆಯ್ಕೆ ಮಾಡಿಕೊಳ್ಳುವಂತೆ ತಿಳಿಸಿದರು. ಆದರೆ ನಾನು ಶಿಕ್ಷಣ ಇಲಾಖೆಯೇ ಸ್ಟ್ರಾಂಗ್‌ʼ ಎಂದು ತಿಳಿಸಿದ್ದೆ.

ಶಿಕ್ಷಣ ಇಲಾಕೆ ಖಾತೆಯನ್ನು ನಿರ್ವಹಿಸಲು ಯಾರು ಒಪ್ಪುವುದಿಲ್ಲ. ಅದರೆ ಮಕ್ಕಳ ಭವಿಷ್ಯ ರೂಪಿಸುವ ಇಲಾಖೆ ಇದು. ಇಂತಹ ಇಲಾಖೆಯನ್ನು ನಿರ್ವಹಿಸಲು ಪುನಃ ಅವಕಾಶ ಸಿಕ್ಕಿದ್ದು ಸಮಾಧಾನʼ ಎಂದು ಮಧು ಬಂಗಾರಪ್ಪ ತಿಳಿಸಿದರು.