ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE NEWS, 9 DECEMBER 2024
ಶಿವಮೊಗ್ಗ : ಅತಿಥಿ ಶಿಕ್ಷಕರ (Guest Teachers) ವೇತನ ಪರಿಷ್ಕರಣೆ ಅಗತ್ಯವಿದೆ. ಈ ಸಂಬಂಧ ಅರ್ಥಿಕ ಇಲಾಖೆ ಅನುಮತಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ವಿಧಾನ ಪರಿಷತ್ತಿನಲ್ಲಿ ಸದಸ್ಯ ಡಾ. ಧನಂಜಯ ಸರ್ಜಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು.
ಡಾ. ಧನಂಜಯ ಸರ್ಜಿ ಪ್ರಶ್ನೆ ಏನು?
ರಾಜ್ಯದಲ್ಲಿ 48,657 ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಗ್ರೂಪ್ ಡಿ, ಅಟೆಂಡರ್ ಹುದ್ದೆಗಳಿಗಿಂತಲು ಕಡಿಮೆ ವೇತನ ದೊರೆಯುತ್ತಿದೆ. ಅತಿಥಿ ಶಿಕ್ಷಕರ ವೇತನ ಹೆಚ್ಚಳ ಮಾಡಲಾಗುತ್ತದೆಯೇ ಎಂದು ಡಾ. ಧನಂಜಯ ಸರ್ಜಿ ಪ್ರಶ್ನಿಸಿದ್ದರು.

ಸಂವಿಧಾನದ ಪ್ರಸ್ತಾವನೆಯಲ್ಲಿ ಸಾಮಾಜಿಕ, ಆರ್ಥಿಕ ನ್ಯಾಯದ ವಿಚಾರವಿದೆ. ಆದರೆ ಅತಿಥಿ ಶಿಕ್ಷಕರಿಗೆ ಕನಿಷ್ಠ ವೇತನ ದೊರೆಯುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಹೇಗೆ ಪಾಠ ಮಾಡಲು ಸಾಧ್ಯ? ಇದರಿಂದ ಶಿಕ್ಷಣ ಕ್ಷೇತ್ರದ ಮೇಲೆ ಪರಿಣಾಮ ಬೀರಲಿದೆ. ಸದನದಲ್ಲಿ ಈ ವಿಷಯದ ಕುರಿತು ಚರ್ಚೆಗೆ ಅರ್ಧ ಗಂಟೆಯಷ್ಟು ಕಾಲವಕಾಶ ನೀಡಬೇಕು.
ಡಾ. ಧನಂಜಯ ಸರ್ಜಿ, ವಿಧಾನ ಪರಿಷತ್ ಸದಸ್ಯ
![]()
ಮಿನಿಸ್ಟರ್ ಉತ್ತರವೇನು?
ಅತಿಥಿ ಶಿಕ್ಷಕರಿಗೆ 2022ರಲ್ಲಿ ವೇತನ ಹೆಚ್ಚಳ ಮಾಡಲಾಗಿದೆ. ಪುನಃ ವೇತನ ಹೆಚ್ಚಳ ಮಾಡುವ ಅಗತ್ಯವಿದೆ. ಆರ್ಥಿಕ ಇಲಾಖೆಗೆ ಕಳುಹಿಸಿದ್ದ ಪ್ರಸ್ತಾವನೆ ವಾಪಸ್ ಬಂದಿದೆ. ಮತ್ತೆ ಆರ್ಥಿಕ ಇಲಾಖೆಯ ಅನುಮತಿ ಪಡೆಯಲಾಗುತ್ತದೆ.
ಮಧು ಬಂಗಾರಪ್ಪ, ಶಿಕ್ಷಣ ಸಚಿವ
![]()
ಇನ್ನು, ಅರ್ಧ ಗಂಟೆ ಚರ್ಚೆಗೆ ಅವಕಾಶ ಕೇಳಿದ್ದಕ್ಕೆ, ಪತ್ರ ರವಾನಿಸುವಂತೆ ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದರು.
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಗೆ ಮಳೆ ಅಲರ್ಟ್, ಮುಂದಿನ 7 ದಿನ ಹೇಗಿರುತ್ತೆ ವಾತಾವರಣ?






