ಶಿವಮೊಗ್ಗ ಲೈವ್.ಕಾಂ | SHIMOGA | 29 ಅಕ್ಟೋಬರ್ 2019
ಶಿವಮೊಗ್ಗದ ಜಿಲ್ಲೆಯ ವಿವಿಧ ಗ್ರಾಪಂಗಳಲ್ಲಿ ಖಾಲಿ ಇರುವ ಸ್ಥಾನಗಳನ್ನು ತುಂಬಲು ಚುನಾವಣಾ ವೇಳಾಪಟ್ಟಿ ಬಿಡುಗಡೆ ಮಾಡಿ ಜಿಲ್ಲಾಧಿಕಾರಿ ಡಿಸಿ ಕೆ.ಬಿ.ಶಿವಕುಮಾರ್ ಅಧಿಸೂಚನೆ ಹೊರಡಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಅ.31ರಂದು ನಾಮಪತ್ರ ಸಲ್ಲಿಸಲು ಕೊನೆ ದಿನ. ನವೆಂಬರ್ 2ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನ.4 ಕೊನೆಯ ದಿನ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮತದಾನದ ಅವಶ್ಯಕತೆ ಇದ್ದಲ್ಲಿ ನ.12ರ ಬೆಳಗ್ಗೆ 7 ರಿಂದ ಸಂಜೆ 5ರ ವರೆಗೆ ಚುನಾವಣೆ ನಡೆಸಲಾಗುತ್ತದೆ. ಮರು ಮತದಾನದ ಅವಶ್ಯಕತೆ ಇದ್ದಲ್ಲಿ ನ.13ರಂದು ನಡೆಸಲಾಗುತ್ತದೆ. ನ.14ರ ಬೆಳಗ್ಗೆ 8 ಗಂಟೆಯಿಂದ ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಶಿವಮೊಗ್ಗ ತಾಲೂಕು
ಮೇಳಿನಹನವಾಡಿ – ಹಿಂದುಳಿದ ಅ ವರ್ಗ ಮಹಿಳೆ, ಸಾಮಾನ್ಯ ಮಹಿಳೆ
ಸಿರಿಗೆರೆ – ಹಿಂದುಳಿದ ಅ ವರ್ಗ ಮಹಿಳೆ
ಭದ್ರಾವತಿ ತಾಲೂಕು
ಅರಬಿಳಚಿ – ಅನುಸೂಚಿತ ಜಾತಿ ಮಹಿಳೆ
ಅಂತರಗಂಗೆ-ದೇವನರಸೀಪುರ – ಸಾಮಾನ್ಯ
ಕಂಬದಾಳು ಹೊಸೂರು-ಕಾಳನಕಟ್ಟೆ – ಹಿಂದುಳಿದ ಬ ವರ್ಗ
ಸಿಂಗನಮನೆ – ಶಾಂತಿನಗರ – ಹಿಂದುಳಿದ ಅ ವರ್ಗ ಮಹಿಳೆ
ತಾವರಘಟ್ಟ – ಗೋಣಿಬೀಡು – ಅನುಸೂಚಿತ ಜಾತಿ ಮಹಿಳೆ
ತೀರ್ಥಹಳ್ಳಿ ತಾಲೂಕು
ಕನ್ನಂಗಿ – ಜೋಗಿಕೊಪ್ಪ – ಹಿಂದುಳಿದ ಅ ವರ್ಗ ಮಹಿಳೆ
ಗುಡ್ಡೆಕೊಪ್ಪ- ತ್ಯಾರಂದೂರು – ಹಿಂದುಳಿದ ಅ ವರ್ಗ ಮಹಿಳೆ
ನಾಲೂರು ಕೊಳಗಿ – ಹಿಂದುಳಿದ ಅ ವರ್ಗ ಮಹಿಳೆ
ಬಿದರಗೋಡು-ಬಾಳೆಹಳ್ಳಿ – ಅನುಸೂಚಿತ ಪಂಗಡ ಮಹಿಳೆ
ಮಂಡಗದ್ದೆ-ಲಿಂಗಾಪುರ – ಅನುಸೂಚಿತ ಪಂಗಡ ಮಹಿಳೆ
ಶಿಕಾರಿಪುರ ತಾಲೂಕು
ಚುರ್ಚಿಗುಂಡಿ – ಅನುಸೂಚಿತ ಜಾತಿ
ಗುಡ್ಡದ ತುಮ್ಮಿನಕಟ್ಟಿ – ಸುರಗಿಹಳ್ಳಿ – ಹಿಂದುಳಿದ ಬ ವರ್ಗ
ಹಿರೇಜಂಬೂರು – ಕುಸ್ಕೂರು – ಸಾಮಾನ್ಯ
ಸೊರಬ ತಾಲೂಕು
ತೆಲಗುಂದ – ಕಚವಿ – ಹಿಂದುಳಿದ ಅ ವರ್ಗ ಮಹಿಳೆ
ಕಾತುವಳ್ಳಿ-ಕೆರೆಹಳ್ಳಿ – ಸಾಮಾನ್ಯ ಮಹಿಳೆ
ಹರೀಶಿ – ಅನುಸೂಚಿತ ಪಂಗಡ ಮಹಿಳೆ / ಸಾಮಾನ್ಯ ಮಹಿಳೆ
ಮಂಗಳೂರು – ಹಿಂದುಳಿದ ವರ್ಗ ಅ
ಹೊರಬೈಲು – ಸಾಮಾನ್ಯ
ಕೋಡಂಬಿ – ಹಿಂದುಳಿದ ವರ್ಗ ಅನುಸೂಚಿತ ಮಹಿಳೆ
ಚಂದ್ರಗುತ್ತಿ – ಅಂದವಳ್ಳಿ – ಅನುಸೂಚಿತ ಪಂಗಡ ಮಹಿಳೆ
ಉದ್ರಿ – ಅನುಸೂಚಿತ ಪಂಗಡ ಮಹಿಳೆ / ಸಾಮಾನ್ಯ
ಸಾಗರ ತಾಲೂಕು
ಮರತೂರು-ಶಿರೂರು – ಹಿಂದುಳಿದ ವರ್ಗ ಅ ಮಹಿಳೆ
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]