ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 30 ಮಾರ್ಚ್ 2020
ಕರೋನ ಲಾಕ್’ಡೌನ್ ಸಂಬಂಧ ವಾಟ್ಸಪ್’ನಲ್ಲಿ ಹರಿದಾಡುತ್ತಿರುವ ಆಡಿಯೋ ಮೆಸೇಜ್ ಒಂದು, ಶಿವಮೊಗ್ಗ ಜಿಲ್ಲೆಯಲ್ಲಿ ಗೊಂದಲ ಸೃಷ್ಟಿಸಿದೆ. ಆತಂಕಕ್ಕೀಡಾದ ಜನರು ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ. ಇದೇ ಕಾರಣಕ್ಕೆ, ಇಂತಹ ಮೆಸೇಜು ಫಾರ್ವರ್ಡ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.
ವಾಟ್ಸಪ್ ಆಡಿಯೋದಲ್ಲಿ ಏನಿದೆ?
ನಾಳೆಯಿಂದ ಸಂಪೂರ್ಣ ಲಾಕ್’ಡೌನ್ ಆಗಲಿದೆ. ಯಾವುದೇ ಅಂಗಡಿಗಳನ್ನು ತೆರೆಯಬಾರದು ಎಂದು ವ್ಯಕ್ತಿಯೊಬ್ಬರು ಹೇಳುತ್ತಾರೆ. ಹಿಂಬದಿಯಲ್ಲಿ ಪೊಲೀಸ್ ವಾಕಿಟಾಕಿಯ ಶಬ್ದ ಕೇಳುತ್ತದೆ. ಕಳೆದ ಎರಡ್ಮೂರು ದಿನದಿಂದ 53 ಸೆಕೆಂಡ್’ನ ಆಡಿಯೋ ವಾಟ್ಸಪ್’ನಲ್ಲಿ ವೈರಲ್ ಆಗಿದೆ.
ಹಾಗಾದರೆ ವಾಸ್ತವ ಏನು?
ವಾಸ್ತವದಲ್ಲಿ ಜಿಲ್ಲಾಡಳಿತವಾಗಲಿ, ಪೊಲೀಸ್ ಇಲಾಖೆಯಾಗಲಿ ಇಂತಹ ಯಾವುದೇ ಸಂದೇಶವನ್ನು ಹೊರಡಿಸಿಲ್ಲ. ಆದರೂ ಆಡಿಯೋ ವೈರಲ್ ಮಾಡುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಸಲಾಗುತ್ತಿದೆ. ಇದೇ ಕಾರಣಕ್ಕೆ ಶಿವಮೊಗ್ಗದ ಪೊಲೀಸ್ ಇಲಾಖೆ ಈಗ ಕ್ರಮಕ್ಕೆ ಮುಂದಾಗಿದೆ.
ಎನು ಕ್ರಮ ಕೈಗೊಳ್ಳಲಾಗುತ್ತದೆ?
ಈ ಆಡಿಯೋವನ್ನು ಇನ್ಮುಂದೆ ಷೇರ್ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಇದನ್ನು ಫಾರ್ವರ್ಡ್ ಮಾಡುವವರು ಮತ್ತು ವಾಟ್ಸಪ್ ಗ್ರೂಪ್ ಅಡ್ಮಿನ್’ಗಳ ವಿರುದ್ಧ ಕ್ರಮಕ್ಕೆ ನಿರ್ಧರಿಸಲಾಗಿದೆ.
ಕರೋನ ಲಾಕ್’ಡೌನ್ ಸಂಬಂಧ ವಾಟ್ಸಪ್, ಫೇಸ್’ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಲವು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಇದು ಜನರಲ್ಲಿ ಆತಂಕ ಮತ್ತು ಗೊಂದಲ ನಿರ್ಮಿಸುತ್ತಿದೆ. ಇದೇ ಕಾರಣಕ್ಕೆ ಪೊಲೀಸ್ ಇಲಾಖೆ ಈಗ ಕ್ರಮಕ್ಕೆ ಮುಂದಾಗಿದೆ.
- ತುಂಗಾ ನದಿ, ಹಸು ಮೈ ತೊಳೆಯಲು ಹೋದ ವ್ಯಕ್ತಿ ನಾಪತ್ತೆ
- ಶಿವಮೊಗ್ಗದಲ್ಲಿ 15ಕ್ಕೂ ಹೆಚ್ಚು ಬಸ್ಗಳ ಮೇಲೆ ದಾಳಿ
- ಹತ್ತು ಪಟ್ಟು ಲಾಭಾಂಶ, ನಂಬಿದ ಇಂಜಿನಿಯರ್ಗೆ ಕಾದಿತ್ತು ಆಘಾತ
- ಲಕ್ಷ ಲಕ್ಷ ಮೌಲ್ಯದ ಅಡಿಕೆ ಕದ್ದ ಐವರು ಅರೆಸ್ಟ್, ಏನೇನೆಲ್ಲ ಸಿಕ್ಕಿದೆ?
- ಶಿವಮೊಗ್ಗ ಜಿಲ್ಲೆಗೆ ಮತ್ತೆ ಮಳೆ ಮುನ್ಸೂಚನೆ, ಇವತ್ತು ಎಷ್ಟಿರುತ್ತೆ ತಾಪಮಾನ?
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422