ಆಯನೂರು ಸೇರಿದಂತೆ ಹಲವು ಗ್ರಾಮದಲ್ಲಿ ಎರಡು ದಿನ ಕರೆಂಟ್ ಇರಲ್ಲ

ಶಿವಮೊಗ್ಗ ಲೈವ್.ಕಾಂ |SHIMOGA NEWS | 18 NOVEMBER 2020 (ಈ ಸುದ್ದಿಯನ್ನು ಇನ್ನು 39 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಕುಂಸಿ ಗ್ರಾಮದಲ್ಲಿ ನಿರಂತರ ಜ್ಯೋತಿ ಕಾಮಗಾರಿ ನಡೆಸುತ್ತಿದೆ. ಹಾಗಾಗಿ ಕುಂಸಿ ವಿದ್ಯುತ್ ವಿವಿ ಕೇಂದ್ರ ಎಫ್-2, ಸಿರಿಗೆರೆ ಎಫ್-3 ಮಾರ್ಗಗಳಿಂದ ವಿದ್ಯುತ್ ಸರಬರಾಜಿನಲ್ಲಿ  ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಯಾವ್ಯಾವ ಹಳ್ಳಿಗಳಲ್ಲಿ ಕರೆಂಟ್ ಇರಲ್ಲ?

ಮೈಸವಳ್ಳಿ, ವೀರಣ್ಣನಬೆನವಳ್ಳಿ, ಸೇವಾಲಾಲ್‍ ನಗರ, ಯರೇಕೊಪ್ಪ, ನಾಗರಬಾವಿ, ಆಯನೂರು, ಚಾಮುಂಡಿಪುರ, ಚಿಕ್ಕದಾನವಂದಿ, ದೊಡ್ಡದಾನವಂದಿ, ಸಿರಿಗೆರೆ, ಹೊಸೂರು, ಮಲೆಶಂಕರ, ಕಲ್ಲುಕೊಪ್ಪ, ಮಂಜರಿಕೊಪ್ಪ, ತಮ್ಮಡಿಹಳ್ಳಿ  ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕರೆಂಟ್ ಇರಲ್ಲ.

ಎರಡು ದಿನ ಕರೆಂಟ್ ಇರಲ್ಲ

ನವೆಂಬರ್-19 ಮತ್ತು 20 ರಂದು ಬೆಳಗ್ಗೆ 10.00 ರಿಂದ ಸಂಜೆ 06 ಗಂಟೆಯವರೆಗೆ  ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕುಂಸಿ ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

power cut graphics

Leave a Comment