ಶಿವಮೊಗ್ಗ ನಗರದ ವಿವಿಧೆಡೆ ಎರಡು ದಿನ ನೀರು ಬರಲ್ಲ, ಎಲ್ಲೆಲ್ಲಿ? ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-Number-1-Website

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಜೂನ್ 2020

ಅಮೃತ್ ಯೋಜನೆಯಡಿ ಶಿವಮೊಗ್ಗ ನಗರದ  ಖಾಸಗಿ ಬಸ್ ನಿಲ್ದಾಣದ ಹತ್ತಿರ ಮಿಳ್ಳಘಟ್ಟಕ್ಕೆ ಹೋಗುವ ರಸ್ತೆಯಲ್ಲಿ ಎಂಎಸ್.ಕೊಳವೆ ಮಾರ್ಗ ಅಳವಡಿಸಿದೆ. ಈಗಿರುವ ಆರ್.ಎಂ.7 ಕೊಳವೆ ಮಾರ್ಗಕ್ಕೆ ಲಿಂಕ್ ಮಾಡಿ ಚಾಲನೆಗೊಳಿಸಬೇಕಾಗಿದೆ. ಆದ್ದರಿಂದ ಜೂನ್ 10 ಮತ್ತು 11 ರಂದು ನಗರದ ವಿವಿಧೆಡೆ ನೀರು ಸರಬರಾಜು ಇರುವುದಿಲ್ಲ.

ಎಲ್ಲೆಲ್ಲಿ ನೀರು ಬರಲ್ಲ?

ಪೊಲೀಸ್ ಕ್ವಾರ್ಟಸ್, ಟಿಪ್ಪುನಗರ, ತುಂಗಾನಗರ, ಜಿಲ್ಲಾ ಪಂಚಾಯತ್ ಕಚೇರಿ ಎದುರು, ಶಿವಮೂರ್ತಿ ಸರ್ಕಲ್, ಬಸವನಗುಡಿ, ರವೀಂದ್ರನಗರ, ಡಿ.ಸಿ.ಕಾಂಪೌಂಡ್, ಶೇಷಾದ್ರಿಪುರಂ ಟ್ಯಾಂಕ್‍ಗಳಿಂದ ದೈನಂದಿನ ನೀರು ಪೂರೈಕೆಯಾಗುವ ಪ್ರದೇಶಗಳಿಗೆ ನೀರು ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ KUWS ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : June 10, 2020

Leave a Comment