BREAKING NEWS – ಶಿವಮೊಗ್ಗದಲ್ಲಿ ಸಿನಿಮಾ ನಿರ್ದೇಶಕ ನಿಧನ, ಆಸ್ಪತ್ರೆಗೆ ದೌಡಾಯಿಸಿದ ನಟ ಸಂಜು ಬಸಯ್ಯ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ: ಚಿತ್ರೀಕರಣದ ಸಂದರ್ಭ ಹೃದಯಾಘಾತವಾಗಿ ನಿರ್ದೇಶಕ (Director) ಸಂಗೀತ್‌ ಸಾಗರ್‌ ಅವರು ಶಿವಮೊಗ್ಗದ ಮ್ಯಾಕ್ಸ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕೊಪ್ಪ ತಾಲೂಕು ಹರಿಹರಪುರದಲ್ಲಿ ‘ಪಾತ್ರಧಾರಿʼ ಸಿನಿಮಾದ (Movie) ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಸಂಗೀತ್‌ ಸಾಗರ್‌ ಕುಸಿದು ಬಿದ್ದಿದ್ದರು. ಕೂಡಲೆ ಅವರನ್ನು ಕೊಪ್ಪ ಆಸ್ಪತ್ರೆಗೆ ರವಾನಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ನಿರ್ದೇಶಕ ಸಂಗೀತ್‌ ಸಾಗರ್‌ ಅವರನ್ನು ಶಿವಮೊಗ್ಗಕ್ಕೆ ಕರೆತರಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ಕೊನೆಯ ಆ್ಯಕ್ಷನ್‌ ಕಟ್‌

ಪರಿಸರ ಸಂರಕ್ಷಣೆಯ ಕತೆಯುಳ್ಳ ಪಾತ್ರಧಾರಿ ಸಿನಿಮಾವನ್ನು ಸಂಗೀತ್‌ ಸಾಗರ್‌ ನಿರ್ದೇಶಿಸುತ್ತಿದ್ದರು. ಕಳೆದ ಎರಡು ತಿಂಗಳಿಂದ ತೀರ್ಥಹಳ್ಳಿ ಮತ್ತು ಕೊಪ್ಪ ತಾಲೂಕಿನ ವಿವಿಧೆಡೆ ಚಿತ್ರೀಕರಣ ಮಾಡುತ್ತಿದ್ದರು. ಗುರುವಾರ ಬೆಳಗ್ಗೆ ಸಿನಿಮಾದ ಕೊನೆಯ ಶಾಟ್‌ ಚಿತ್ರೀಕರಣಕ್ಕೆ ಯೋಜಿಸಲಾಗಿತ್ತು.

Film Director Sangeeth Sagar
ನಿರ್ದೇಶಕ ಸಂಗೀತ್‌ ಸಾಗರ್‌

ಇಂದು ಮಧ್ಯಾಹ್ನ ಹಾಸ್ಯ ಕಲಾವಿದ ಸಂಜು ಬಸಯ್ಯ ಅವರಿಗೆ ಆ್ಯಕ್ಷನ್‌ ಹೇಳಿದ್ದರು. ಆ ವೇಳಗಾಗಲೇ ಸುಸ್ತಾಗಿ ಸಂಗೀತ್‌ ಸಾಗರ್‌ ಕುಸಿದಿದ್ದಾರೆ. ಕೂಡಲೆ ಸಿನಿಮಾ ತಂಡ ಅವರ ಆರೈಕೆ ಮಾಡಿ ಕೊಪ್ಪ ತಾಲೂಕಿನ ಆಸ್ಪತ್ರೆಗೆ ಕರೆದೊಯ್ದಿದ್ದರು.

ಚಿತ್ರತಂಡದಿಂದ ಅಂತಿಮ ದರ್ಶನ

ನಿರ್ದೇಶಕ ಸಂಗೀತ್‌ ಸಾಗರ್‌ ನಿಧನರಾದ ವಿಷಯ ತಿಳಿದು ಪಾತ್ರಧಾರಿ ಚಿತ್ರತಂಡ ಶಿವಮೊಗ್ಗದ ಮ್ಯಾಕ್ಸ್‌ ಆಸ್ಪತ್ರೆಗೆ ಧಾವಿಸಿದೆ. ನಿರ್ಮಾಪಕ ಡೇವಿಡ್‌, ನಟ ಸಂಜು ಬಸಯ್ಯ ಸೇರಿದಂತೆ ನಟ, ನಟಿಯರು, ಸಿನಿಮಾ ತಂಡ ಅಂತಿಮ ದರ್ಶನ ಪಡೆಯಿತು.

film director sangeeth sagar
ಮ್ಯಾಕ್ಸ್‌ ಆಸ್ಪತ್ರೆ ಮುಂಭಾಗ ನಿರ್ಮಾಪಕ ಡೇವಿಡ್‌ ಮತ್ತು ಚಿತ್ರತಂಡ.

ಪಾತ್ರಧಾರಿ ಸಿನಿಮಾದ ನಿರ್ದೇಶನ ಮತ್ತು ಸಂಗೀತ ನಿರ್ದೇಶನವನ್ನು ಮಾಡಿದ್ದರು. ಇವತ್ತು ಮಧ್ಯಾಹ್ನ ಇದ್ದಕ್ಕಿದ್ದಂತೆ ಅವರಿಗೆ ಮೈಯಲ್ಲ ಬೆವರಿದಂತಾಯಿತು. ಕೂಡಲೆ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದರು.ಡೇವಿಡ್‌, ನಿರ್ಮಾಪಕ

ನಾವು ಮೂರ್ನಾಲ್ಕು ದಿನದಿಂದ ಚಿತ್ರೀಕರಣದಲ್ಲಿ ಭಾಗವಹಿಸಿದ್ದೆವು. ಇಂದು ಮಧ್ಯಾಹ್ನ ಆ್ಯಕ್ಷನ್‌ ಕಟ್‌ ಹೇಳಿದ್ದರು. ಮಧ್ಯಾಹ್ನ ಸುಸ್ತಾಗಿ ಒಳಗೆ ಹೋಗಿ ಮಲಗಿದ್ದರು. ಆದಾದ ಮೇಲೆ ಕುಸಿದಿದ್ದಾರೆ. ಕೂಡಲೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.ಸಂಜು ಬಸಯ್ಯ, ಹಾಸ್ಯ ಕಲಾವಿದ

Actor Sanju Basaiah
ಹಾಸ್ಯನಟ ಸಂಜು ಬಸಯ್ಯ ಮ್ಯಾಕ್ಸ್‌ ಆಸ್ಪತ್ರೆಗೆ ದೌಡಾಯಿಸಿದರು.

ಇದನ್ನೂ ಓದಿ » ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆ ವಿರುದ್ಧ ಜಿಲ್ಲಾಧಿಕಾರಿಗೆ ದೂರು, ಏನೇನಿದೆ ಕಂಪ್ಲೇಂಟ್‌ನಲ್ಲಿ?

ನಿರ್ದೇಶಕ ಸಂಗೀತ್‌ ಸಾಗರ್‌ ಅವರು ಸ್ನೇಹಿತ, ಕೋಟೆ ಹುಡುಗರು ಸೇರಿ ಎಂಟು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಮೂಲತಃ ಹಾಸನ ಜಿಲ್ಲೆ ಸಕಲೇಶಪುರದವರು. ಇವರಿಗೆ ಪತ್ನಿ ಮತ್ತು ಪುತ್ರಿ ಇದ್ದಾರೆ.

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment