ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಜೂನ್ 2020
ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಪುನಃ ನಾಲ್ಕು ಮಂದಿಯಲ್ಲಿ ಕರೋನ ಸೋಂಕು ಪತ್ತೆಯಾಗಿದೆ. ಈ ಪೈಕಿ ಮೂವರಿಗೆ ಸೋಂಕು ತಗುಲಿದ್ದು ಹೇಗೆ ಅನ್ನೋದೆ ಗೊತ್ತಾಗಿಲ್ಲ. ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾರಿಗೆಲ್ಲ ಸೋಂಕು ತಗುಲಿದೆ?
ಪಿ5824 – 58 ವರ್ಷದ ಪುರುಷ
ಪಿ5825 – 48 ವರ್ಷದ ಪುರುಷ
ಪಿ5826 – 27 ವರ್ಷದ ಪುರುಷ
ಪಿ5827 – 25 ವರ್ಷದ ಪುರುಷ
ಒಬ್ಬರಿಗಷ್ಟೆ ಮಹಾರಾಷ್ಟ್ರ ಸಂಪರ್ಕ
ನಾಲ್ಕು ಮಂದಿ ಪೈಕಿ ಒಬ್ಬರಿಗಷ್ಟೆ ಮಹಾರಾಷ್ಟ್ರ ಸಂಪರ್ಕವಿದೆ ಎಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‍ನಲ್ಲಿ ತಿಳಿಸಲಾಗಿದೆ. 25 ವರ್ಷದ ಪುರುಷ ಪಿ5827 ಅವರು ಮಹಾರಾಷ್ಟ್ರದಿಂದ ಹಿಂತಿರುಗಿದ್ದರು. ಇವರನ್ನು ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು.
ಮೂವರಿಗೆ ಸೋಂಕು ತಗುಲಿದ್ದು ಹೇಗೆ?
ಉಳಿದ ಮೂವರಿಗೆ ಕರೋನ ಸೋಂಕು ತಗುಲಿದ್ದು ಹೇಗೆ ಅನ್ನುವುದು ಈತನಕ ತಿಳಿದು ಬಂದಿಲ್ಲ. ಪಿ5824, ಪಿ5825 ಮತ್ತು ಪಿ5826 ಅವರಿಗೆ ಕರೋನ ಸೋಂಕು ಹೇಗೆ ತಗುಲಿದೆ ಅನ್ನುವುದು ಗೊತ್ತಾಗಿಲ್ಲ. ಇದು ಜಿಲ್ಲಾಡಳಿತಕ್ಕೆ ತೀವ್ರ ತಲೆ ನೋವು ತಂದಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]