ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ : ಕಾಶ್ಮೀರದ ಪಹಾಲ್ಗಾಮ್‌ನಲ್ಲಿ ಉಗ್ರರ ದಾಳಿಗೆ (Terrorist Attack) ಸಾವನ್ನಪ್ಪಿದವರ ಮೃತದೇಹಗಳ ರವಾನೆಗೆ ಅಂತಿಮ ಸಿದ್ಧತೆ ಮಾಡಲಾಗಿದೆ. ಶಿವಮೊಗ್ಗದ ಉದ್ಯಮಿ ಮಂಜುನಾಥ ರಾವ್ ಅವರ ಪಾರ್ಥೀವ ಶರೀರದ ಮುಂದೆ ಅವರ ಪತ್ನಿ ಪಲ್ಲವಿ ಕಣ್ಣಿರಾದರು. ಕಾಶ್ಮೀರಕ್ಕೆ ತೆರಳಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪಲ್ಲವಿ ಅವರನ್ನು ಸಂತೈಸಿದರು.
ಅನಂತನಾಗ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹಗಳನ್ನು ಇರಿಸಲಾಗಿದೆ. ಬೆಂಗಳೂರಿನ ಭರತ್ ಭೂಷಣ್, ಮಧುಸೂದನ್ ಸೋಮಿಶೆಟ್ಟಿ ಮತ್ತು ಶಿವಮೊಗ್ಗದ ಮಂಜುನಾಥ ರಾವ್ ಅವರ ಮೃತದೇಹಗಳು ಇಲ್ಲಿಯೇ ಇರಿಸಲಾಗಿದೆ.
ಪ್ರತ್ಯೇಕ ಬಾಕ್ಸ್‌ನಲ್ಲಿ ಮೃತದೇಹಗಳು
ಮೃತದೇಹಗಳನ್ನು ಪ್ರತ್ಯೇಕ ಬಾಕ್ಸ್‌ನಲ್ಲಿ ಇರಿಸಲಾಗಿದೆ. ಅವುಗಳ ಮೇಲೆ ಮೃತರ ಹೆಸರು, ವಿಳಾಸ, ಸಂಬಂಧಿಕರ ದೂರವಾಣಿ ಸಂಖ್ಯೆ ಸೇರಿದಂತೆ ವಿವಿಧ ಮಾಹಿತಿ ಬರೆಯಲಾಗಿದೆ. ಕರ್ನಾಟಕಕ್ಕೆ ರವಾನಿಸಬೇಕಿರುವ ಮೂವರ ಮೃತದೇಹಗಳನ್ನು ಒಂದೆಡೆ ಇರಿಸಲಾಗಿದೆ. ಸಚಿವ ಸಂತೋಷ್ ಲಾಡ್ ಅವರು ಮೃತದೇಹಗಳ ಇರಿಸಿದ್ದ ಬಾಕ್ಸ್‌ಗಳನ್ನು ಪರಿಶೀಲಿಸಿದ ಸಂಬಂಧಿಕರಿಗೆ ಸಾಂತ್ವನ ಹೇಳಿದರು.

ಬೆಂಗಳೂರಿಗೆ ರವಾನಿಸಲು ಸಿದ್ಧವಾಗಿರುವ ಮೃತದೇಹಗಳ ಬಾಕ್ಸ್‌ಗಳನ್ನು ಪರಿಶೀಲಿಸಿದ ಸಚಿವ ಸಂತೋಷ್ ಲಾಡ್.
ಇದನ್ನೂ ಓದಿ » ಕಾಶ್ಮೀರದಲ್ಲಿ ಉಗ್ರರ ದಾಳಿ, ಶಿವಮೊಗ್ಗದ ಉದ್ಯಮಿ ಸಾವು, ಈವರೆಗೂ ಏನೆಲ್ಲ ಬೆಳವಣಿಗೆ ಆಗಿದೆ?
ಕಣೀರಾದ ಪಲ್ಲವಿ, ಸಚಿವರ ಅಭಯ
ಇನ್ನು, ಮಂಜುನಾಥ್ ರಾವ್ ಅವರ ಮೃತದೇಹವನ್ನು ಪರಿಶೀಲಿಸಿದ ಅವರ ಪತ್ನಿ ಪಲ್ಲವಿ ಕಣ್ಣೀರಾದರು. ಸಚಿವ ಸಂತೋಷ್ ಲಾಡ್ ಅವರು ಪಲ್ಲವಿಯವಿಗೆ ಸಮಾಧಾನ ಹೇಳಿ, ಧೈರ್ಯ ತುಂಬಿದರು.

ಪತಿ ಮಂಜುನಾಥ ರಾವ್ ಮೃತದೇಹದ ಮುಂದೆ ಪಲ್ಲವಿ ಕಣ್ಣೀರು.

ಪಲ್ಲವಿ ಅವರಿಗೆ ಸಾಂತ್ವನ ಹೇಳಿದ ಸಚಿವ ಸಂತೋಷ್ ಲಾಡ್






