ಪೆಟ್ರೋಲ್, ಡಿಸೇಲ್ ದರ ಮತ್ತೆ ಹೆಚ್ಚಳ, ಶಿವಮೊಗ್ಗ ಜಿಲ್ಲೆಯಲ್ಲಿ ಈ ತಿಂಗಳಲ್ಲಿ ನಾಲ್ಕನೆ ಬಾರಿಗೆ ಏರಿಕೆ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಜುಲೈ 2021
➤ ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಪೆಟ್ರೋಲ್ ದರ ಹೆಚ್ಚಳವಾಗಿದೆ. ಜುಲೈ ತಿಂಗಳು ಇದು ನಾಲ್ಕನೆ ಬಾರಿಗೆ ಏರಿಕೆಯಾಗುತ್ತಿದೆ. ಇನ್ನು ಐದು ಪೈಸೆ ಏರಿಕೆಯಾದರೆ ಪೆಟ್ರೋಲ್ ದರ ಪ್ರತಿ ಲೀಟರ್‍ಗೆ 105 ರೂ. ಆಗಲಿದೆ.

ಇವತ್ತು ಪೆಟ್ರೋಲ್ ದರ 36 ಪೈಸೆ ಹೆಚ್ಚಳವಾಗಿದೆ. ಹಾಗಾಗಿ ಪ್ರತಿ ಲೀಟರ್‍ ಈಗ 104.95 ರೂ.ಗೆ ಏರಿಕೆಯಾಗಿದೆ.

ಜುಲೈ ತಿಂಗಳಲ್ಲಿ ಇದು ನಾಲ್ಕೆನೆ ಬಾರಿಗೆ ಏರಿಕೆಯಾಗಿದೆ. ಜುಲೈ 2ರಂದು 37 ಪೈಸೆ, ಜುಲೈ 4ರಂದು 36 ಪೈಸೆ, ಜುಲೈ 5ರಂದು 36 ಪೈಸೆ ಏರಿಕೆಯಾಗಿತ್ತು. ಈಗ ಪುನಃ ಹೆಚ್ಚಳವಾಗಿದೆ.

ಇನ್ನು, ಡಿಸೇಲ್‍ ದರವು ಏರಿಕೆಯಾಗಿದೆ. ಇವತ್ತು 18 ಪೈಸೆ ಹೆಚ್ಚಾಗಿದೆ. ಪ್ರತಿ ಲೀಟರ್ ಡಿಸೇಲ್‍ಗೆ 96.09 ರೂ. ಆಗಿದೆ. ಜುಲೈ 4ರಂದು ಡಿಸೇಲ್‍ ದರದಲ್ಲಿ 17 ಪೈಸೆ ಏರಿಕೆಯಾಗಿತ್ತು.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

Leave a Comment