ಶಿವಮೊಗ್ಗದಲ್ಲಿ ₹60 ಲಕ್ಷದ ಚಿನ್ನಾಭರಣ, ಬೆಳ್ಳಿ ವಸ್ತುಗಳು ದೋಚಿದ ಕಳ್ಳರು, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಶಿವಮೊಗ್ಗ: ಕುಟುಂಬದವರೆಲ್ಲ ಬೆಂಗಳೂರಿಗೆ ಹೋಗಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು ಸುಮಾರು ₹60.40 ಲಕ್ಷ ಮೌಲ್ಯದ ಚಿನ್ನಾಭರಣ (gold), ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದಾರೆ.

ಶಿವಮೊಗ್ಗದ ಚಾಲುಕ್ಯ ನಗರ 5ನೇ ಅಡ್ಡರಸ್ತೆಯ ರಾಜೇಂದ್ರ ಪ್ರಸಾದ್‌ ಜವಳಿ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ.

Shivamogga-Police-jeep-with-becons-flashing

ಹೇಗಾಯ್ತು ಘಟನೆ?

ರಾಜೇಂದ್ರ ಪ್ರಸಾದ್ ಎಂಬುವವರು ಏಪ್ರಿಲ್ 17ರಂದು ಕುಟುಂಬ ಸಮೇತ ಬೆಂಗಳೂರಿನಲ್ಲಿ ಕಾರ್ಯಕ್ರಮಕ್ಕೆ ತೆರಳಿದ್ದರು. ಏಪ್ರಿಲ್ 20ರ ರಾತ್ರಿ ರಾಜೇಂದ್ರ ಪ್ರಸಾದ್‌ ಅವರು ಒಬ್ಬರೆ ಮನೆಗೆ ಮರಳಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಒಂಟಿ ಮಹಿಳೆಯ ಮನೆಗೆ ನುಗ್ಗಿದ ಆಗಂತುಕರು, ಕೈ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ದುಷ್ಕೃತ್ಯ

ಹಿಂಬಾಗಿಲಿನ ಮೂಲಕ ಕಳ್ಳರ ಎಂಟ್ರಿ

ಕಳ್ಳರು ಮನೆಯ ಹಿಂಭಾಗದ ಕಬ್ಬಿಣದ ಗೇಟ್ ಮತ್ತು ಮರದ ಬಾಗಿಲಿನ ಬೀಗವನ್ನು ಆಯುಧದಿಂದ ಮೀಟಿ ಒಳಗೆ ಪ್ರವೇಶಿಸಿದ್ದಾರೆ. ಬೆಡ್‌ರೂಮ್‌ನ ಲಾಕರ್‌ನಲ್ಲಿದ್ದ ಸುಮಾರು ₹52.35 ಲಕ್ಷ ಮೌಲ್ಯದ 349 ಗ್ರಾಂ ಚಿನ್ನಾಭರಣ, ದೇವರ ಕೋಣೆಯಲ್ಲಿದ್ದ ₹7.35 ಲಕ್ಷ ಮೌಲ್ಯದ ಬೆಳ್ಳಿ ಸಾಮಾನು ದೋಚಿದ್ದಾರೆ ಎಂದು ಆರೋಪಿಸಲಾಗಿದೆ.

Shivamogga-Police-jeep-with-becons-flashing

ಸಿಸಿಟಿವಿಯಲ್ಲಿ ಮೂವರು ಕಳ್ಳರ ಚಹರೆ

ಘಟನೆ ಸಂಬಂಧ ರಾಜೇಂದ್ರ ಪ್ರಸಾದ್‌ ಅವರು ಮನೆಯಲ್ಲಿರುವ ಸಿಸಿಟಿವಿ ಪರಿಶೀಲಿಸಿದಾಗ ದುಷ್ಕೃತ್ಯದಲ್ಲಿ ಮೂವರು ಕಳ್ಳರು ಭಾಗಿ ಆಗಿರುವುದು ಗೊತ್ತಾಗಿದೆ. ಏಪ್ರಿಲ್ 20ರ ಬೆಳಗಿನ ಜಾವ ಮೂವರು ಕಳ್ಳತನ ನಡೆದಿದೆ. ಒಟ್ಟು ₹60.40 ಲಕ್ಷ ಮೌಲ್ಯದ ಆಭರಣಗಳು ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion

Leave a Comment