ಬಸ್ಸಲ್ಲಿ ಸೀಟ್‌ ಸಿಗದಿದ್ದಕ್ಕೆ ಕೆಳಗಿಳಿದು ಮುಖ ಒರೆಸಿಕೊಂಡ ತಕ್ಷಣ ಮಹಿಳೆಗೆ ಕಾದಿತ್ತು ಶಾಕ್‌, ದಾಖಲಾಯ್ತು ಕೇಸ್‌

ಶಿವಮೊಗ್ಗ: ಬಸ್‌ ನಿಲ್ದಾಣದಲ್ಲಿ ಕಳ್ಳರ ಹಾವಳಿ ಮತ್ತೆ ಶುರುವಾಗಿದೆ. ಬಸ್‌ ಹತ್ತಿದ್ದ ಗೃಹಿಣಿಯೊಬ್ಬರ ಕೊರಳಲ್ಲಿದ್ದ ಚಿನ್ನದ ಸರ (Gold Chain) ಕಳ್ಳತನ ಮಾಡಲಾಗಿದೆ. (ಈ ಸುದ್ದಿಯನ್ನು ಇನ್ನು 34 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ವೀಣಾ ಎಂಬುವವರು ತಮ್ಮೂರು ಆನವಟ್ಟಿಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಆಗಮಿಸಿದ್ದರು. ಹಾನಗಲ್‌ ಮಾರ್ಗ ಬಸ್‌ ಹತ್ತಿದ್ದರು. ಆದರೆ ರಶ್‌ ಇದ್ದಿದ್ದರಿಂದ ಸೀಟ್‌ ಸಿಗದ ಕಾರಣಕ್ಕೆ ಕೆಳಗಿಳಿದು ಮುಖ, ಕೊರಳು ಒರೆಸಿಕೊಂಡಿದ್ದರು. ಆಗ ಅವರ ಚಿನ್ನದ ಸರ ಕಳ್ಳತನವಾಗಿರುವುದು ಗೊತ್ತಾಗಿದೆ. 22 ಗ್ರಾಂ ತೂಕದ ₹1.20 ಲಕ್ಷ ಮೌಲ್ಯದ ಚಿನ್ನದ ಸರ ಕಳುವಾಗಿದೆ ಎಂದು ವೀಣಾ ಅವರು ಆರೋಪಿಸಿದ್ದಾರೆ.

ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

KSRTC-Bus-Stand-Shivamogga

ಇದನ್ನೂ ಓದಿ » ಭದ್ರಾವತಿಯ 19 ವರ್ಷದ ಯುವಕನಿಗೆ 20 ವರ್ಷ ಜೈಲು, ಈತ ಮಾಡಿದ ಅಪರಾಧವೇನು?

JNNCE-Admission-Advt-scaled

Gold Chain

KSRTC-Bus-Stand-Shivamogga

Leave a Comment