ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಭಾರಿ ಮಳೆ, ತೆಂಗು, ಅಡಿಕೆ ಮರಗಳು ಧರೆಗೆ, ಎಲ್ಲೆಲ್ಲಿ ಹೇಗಿದೆ ವರ್ಷಧಾರೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
ಶಿವಮೊಗ್ಗ : ಭಾರಿ ಬಿಸಿಲಿನಿಂದ ಕಂಗೆಟ್ಟಿದ್ದ ಮಲೆನಾಡಿಗರಿಗೆ ಇವತ್ತು ಮಳೆ ತಂಪು ನೀಡಿದೆ. ಜಿಲ್ಲೆಯ ವಿವಿಧೆಡೆ ಮಳೆಯಾಗಿದ್ದು (Rainfall), ಅಲ್ಲಲ್ಲಿ ಭಾರಿ ಹಾನಿಯು ಸಂಭವಿಸಿದೆ.
➤ ಸುದ್ದಿಯ ಮುಂದಿನ 9 ಪ್ಯಾರಾಗಳು ಕೆಳಗಿವೆ.

ಇವತ್ತು ಎಲ್ಲೆಲ್ಲಿ ಮಳೆಯಾಗಿದೆ?

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯು ಮಳೆಯಾಗಿದೆ (Rainfall). ಹೊಸನಗರ, ಸಾಗರ, ತೀರ್ಥಹಳ್ಳಿ, ಸೊರಬ ಭಾಗದ ವಿವಿಧೆಡೆ ಭಾರಿ ಮಳೆಯಾಗಿದೆ. ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಕಡಿಮೆ ಪ್ರಮಾಣದ ಮಳೆಯಾಗಿದೆ.

ಹೊಸನಗರದ ಮುಂಬಾರು, ಕೋಡೂರು, ಮೇಲಿನಬೆಸಿಗೆ, ತೀರ್ಥಹಳ್ಳಿಯ ದೇಮ್ಲಾಪುರ, ಶಿವಮೊಗ್ಗದ ಅಬ್ಬಲಗೆರೆ, ಆಯನೂರು, ಹಾಡೋನಹಳ್ಳಿ, ಸೊರಬದ ಹೆಚ್ಚೆ, ಗುಡುವಿ, ತಲ್ಲೂರು ಭಾಗದಲ್ಲಿ ಜೋರು ಮಳೆಯಾಗಿದೆ.

Rainfall at Tumari in Sagara
ಸಾಗರ ತಾಲೂಕು ತುಮರಿಯಲ್ಲಿ ಭಾರಿ ಮಳೆ. ಫೋಟೊ : ಸತ್ಯನಾರಾಯಣ.ಜಿ.ಟಿ

ಹೊಸನಗರ ತಾಲೂಕನಲ್ಲಿ ಮಳೆ ಅಬ್ಬರ

ಹೊಸನಗರ ತಾಲೂಕಿನಲ್ಲಿ ಭಾರಿ ಮಳೆಯಾಗಿದೆ (Rainfall). ತಾಲೂಕಿನ ಕೋಡೂರು ಭಾಗದಲ್ಲಿ ವಿಪರೀತ ಗಾಳಿ ಸಹಿತ ಮಳೆಯಾದ ವರದಿಯಾಗಿದೆ. ಸಮೀಪದ ಮುಂಬಾರು, ಮೇಲಿನಬೆಸಿಗೆಯಲ್ಲೂ ಭಾರಿ ಮಳೆಯಾಗಿದೆ. ಜೋರು ಮಳೆಯಿಂದಾಗಿ ತಾಲೂಕಿನ ವಿವಿಧೆಡೆ ಆಸ್ತಿಪಾಸ್ತಿ ಹಾನಿ ಉಂಟಾಗಿದೆ.

heavy rainfall at hindlemane
ಹೊಸನಗರ ತಾಲೂಕು ಹಿಂಡ್ಲಮನೆಯಲ್ಲಿ ಭಾರಿ ಮಳೆಗೆ ಧರೆಗುರುಳಿದ ತೆಂಗಿನ ಮರ.

ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂಡ್ಲೆಮನೆಯ ರೈತ ಶ್ರೀನಿವಾಸ್‌ ಅವರ ಜಮೀನಿನಲ್ಲಿ ಅಡಿಕೆ ಮತ್ತು ತೆಂಗಿನ ಮರಗಳು ಧರೆಗುರುಳಿವೆ. ಕಾಳು ಮೆಣಸು ಸೇರಿದಂತೆ ವಿವಿಧ ಬೆಳೆ ಹಾನಿಗೀಡಾಗಿವೆ. ಹಲವು ತೋಟ, ಗದ್ದೆಗಳಲ್ಲಿ ಬೆಳೆ ಹಾನಿ ಸಂಭವಿಸಿ, ರೈತರಿಗೆ ದೊಡ್ಡ ನಷ್ಟವಾಗಿದೆ.

rainfall at hindlemane
ಹೊಸನಗರ ತಾಲೂಕು ಹಿಂಡ್ಲಮನೆಯಲ್ಲಿ ಧರೆಗುರುಳಿದ ಅಡಿಕೆ ಮರ.

ಇದನ್ನೂ ಓದಿ » ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಪ್ರತಿದಿನ ಎಷ್ಟು ರೈಲು ಸಂಚರಿಸುತ್ತವೆ? ಟೈಮಿಂಗ್‌ ಏನು?

ಸಾಗರ, ತೀರ್ಥಹಳ್ಳಿಯಲ್ಲು ಜೋರು ಮಳೆ

ಸಾಗರ, ತೀರ್ಥಹಳ್ಳಿ ತಾಲೂಕುಗಳಲ್ಲಿಯು ಇವತ್ತು ಭಾರಿ ಮಳೆಯಾಗಿದೆ. ಜೋರು ಬಿಸಿಲು, ವಿಪರೀತ ಶಕೆಯಿಂದ ಹೈರಾಣಾಗಿದ್ದ ಮಲೆನಾಡಿಗರಿಗೆ ಮಳೆ ತುಸು ತಂಪು ನೀಡಿದೆ. ಆದರೆ ಮಳೆ ಆರಂಭವಾಗುತ್ತಿದ್ದಂತೆ ಹಲವೆಡೆ ವಿದ್ಯುತ್‌ ವ್ಯತ್ಯಯವಾದ ವರದಿಯಾಗಿದೆ.

Tree falls on a building at hosangara
ಹೊಸನಗರ ಪಟ್ಟಣದ ಸರ್ಕಾರಿ ಕಾಲೇಜು, ಅಂಚೆ ಇಲಾಖೆ ಕಟ್ಟಡದ ಮೇಲೆ ಮರ ಬಿದ್ದಿದೆ.

ಇದನ್ನೂ ಓದಿ » ಸಿಗಂದೂರು ಸೇತುವೆ ವೈಭವ ಕಣ್ತುಂಬಿಕೊಂಡ ಕನ್ನಡದ ನಟ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಪ್ರಕಟ

ಶಿವಮೊಗ್ಗ, ಭದ್ರಾವತಿಯಲ್ಲಿ ಮಳೆ ಅಷ್ಟಕ್ಕಷ್ಟೆ

ಶಿವಮೊಗ, ಭದ್ರಾವತಿ ತಾಲೂಕಿನ ವಿವಿಧೆಡೆ ಮಳೆಯಾಗಿದೆ. ಆದರೆ ಮಳೆ ಪ್ರಮಾಣ ಕಡಿಮೆ ಇತ್ತು. ಶಿವಮೊಗ್ಗ ನಗರದಲ್ಲಿ ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಇತ್ತು. ಭಾರಿ ಮಳೆಯಾಗುವ ಸಾದ್ಯತೆ ಇತ್ತು. ಆದರೆ ಅಲ್ಲಲ್ಲಿ ಸೋನೆ ಸುರಿದಿದೆ. ಸೊರಬ ತಾಲೂಕಿನ ಬಹುಭಾಗದಲ್ಲಿ ಮಳೆಯಾಗಿದೆ. ಶಿಕಾರಿಪುರ ತಾಲೂಕಿನಲ್ಲಿಯು ಅಲ್ಲಲ್ಲಿ ಮಳೆಯಾಗಿದ್ದು, ವಾತಾವರಣ ತುಸು ತಂಪಾಗಿದೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಇದನ್ನೂ ಓದಿ » ಭದ್ರಾವತಿಯಲ್ಲಿ ರೌಡಿ ಶೀಟರ್‌ ಕಾಲಿಗೆ ಗುಂಡು ಹಾರಿಸಿದ ಲೇಡಿ ಇನ್ಸ್‌ಪೆಕ್ಟರ್‌

Leave a Comment