ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಮೇ 2020
ಸರಿಯಾಗಿ ೭೦ ದಿನದ ಬಳಿಕ ಶಿವಮೊಗ್ಗದಲ್ಲಿ ರೈಲು ಸಂಚಾರ ಆರಂಭವಾಗುತ್ತಿದೆ. ಕೊರೊನಾ ಹಿನ್ನಲೆಯಲ್ಲಿ ನಿಬಂಧನೆಗೆ ಒಳಪಡಿಸಿ ಜನ ಶತಾಬ್ಧಿ ರೈಲಿನ ಸಂಚಾರ ಮಾತ್ರ ಆರಂಭಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಪರಿಸ್ಥಿತಿ ಸುಧಾರಿಸಿದ ಬಳಿಕ ಹಂತ ಹಂತವಾಗಿ ಉಳಿದ ರೈಲುಗಳ ಸಂಚಾರ ಆರಂಭವಾಗಲಿವೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜೂನ್ ೧ರಂದು ಸಂಜೆ ಯಶವಂತಪುರದಿಂದ(ರೈಲು ಗಾಡಿ ಸಂಖ್ಯೆ 02089) ಹೊರಟು ರಾತ್ರಿ ಶಿವಮೊಗ್ಗ ತಲುಪುವ ಜನ ಶತಾಬ್ಧಿಯು ಶಿವಮೊಗ್ಗದಿಂದ (ರೈಲು ಗಾಡಿ ಸಂಖ್ಯೆ 02090) ಜೂನ್ 2ರಂದು ಮುಂಜಾನೆ 5.30ಕ್ಕೆ ಯಶವಂತಪುರಕ್ಕೆ ಹೊರಡಲಿದೆ.
ಸಿಕ್ಕ ಸಿಕ್ಕಲೆಲ್ಲ ಇಲ್ಲ ನಿಲುಗಡೆ
ರೈಲಿನ ಸಂಚಾರ ಆರಂಭದಲ್ಲಿ ಇದ್ದಂತೆ ಭದ್ರಾವತಿ, ಕಡೂರು, ತುಮಕೂರುಗಳಲ್ಲಿ ಮಾತ್ರ ನಿಲುಗಡೆ ಇರಲಿದೆ. ಸದ್ಯಕ್ಕೆ ಕೇವಲ ಆನ್‌ಲೈನ್ ಬುಕಿಂಗ್ ಮಾತ್ರ ಅವಕಾಶ ನೀಡಲಾಗಿದೆ. ಹೀಗಾಗಿ ರೈಲು ನಿಲ್ದಾಣಗಳಲ್ಲಿ ಟಿಕೆಟ್ ಬುಕಿಂಗ್ ಇರುವುದಿಲ್ಲ.
ರೈಲು ಮುಂಜಾನೆ 5.30ಕ್ಕೆ ಹೊರಟರೂ ಪ್ರಯಾಣಿಕರು ನಿಲ್ದಾಣಕ್ಕೆ 90 ನಿಮಿಷ ಮೊದಲೇ ಆಗಮಿಸಬೇಕು. ಪ್ರತಿಯೊಬ್ಬ ಪ್ರಯಾಣಿಕರ ಥರ್ಮಲ್ ಟೆಸ್ಟ್ ಮಾಡಿ, ಸ್ಯಾನಿಟೈಸರ್‌ನಿಂದ ಕೈಗಳನ್ನು ಸ್ವಚ್ಚಗೊಳಿಸಿ ಒಳಬಿಡಲಾಗುತ್ತದೆ. ಅದಕ್ಕೆ ಸಮಯ ಹಿಡಿಯುವುದರಿಂದ ಪ್ರಯಾಣಿಕರು ಏಕಾಏಕಿ ಒಳನುಗ್ಗಿ ಸಾಮಾಜಿಕ ಅಂತರ ಉಲ್ಲಂಘನೆಯಾಗುವುದು, ಕೈ ಸ್ವಚ್ಚತೆಯಾಗದಿರುವುದನ್ನು ತಪ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅದಕ್ಕಾಗಿ ನಿಲ್ದಾಣದಲ್ಲಿ ಮುಂಜಾನೆ 4 ಗಂಟೆಯಿಂದಲೆ ಪ್ರಯಾಣಿಕರನ್ನು ಒಳಬಿಡುವ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತಿಂಡಿ, ಟೀ, ಕಾಫಿ, ನೀರು ಸಿಗಲ್ಲ
ರೈಲಿನಲ್ಲಿ ಉಪಹಾರ, ಟೀ-ಕಾಫಿಯ ಪ್ಯಾಂಟ್ರಿ ಸೇವೆ ಇರುವುದಿಲ್ಲ. ಕುಡಿಯುವ ನೀರು ಮಾರಾಟ ಸಹ ಇರುವುದಿಲ್ಲ. ಹೀಗಾಗಿ ಪ್ರಯಾಣಿಕರೇ ಅದೆಲ್ಲವನ್ನು ಮಾಡಿಕೊಳ್ಳಬೇಕಾಗುತ್ತದೆ. ಮಾಸ್ಕ್ ಧರಿಸುವುದು ಕೂಡ ಕಡ್ಡಾಯವಾಗಿದೆ. ಪ್ರಯಾಣಿಕರಿಗೆ ಮತ್ತೊಬ್ಬರ ಸಂಪರ್ಕವನ್ನು ಆದಷ್ಟು ತಪ್ಪಿಸುವ ಉದ್ದೇಶದಿಂದ ಇಲಾಖೆ ಈ ಕ್ರಮ ಕೈಗೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]