ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 28 JULY 2023
SHIMOGA : ತುಮಕೂರು – ಅರಸೀಕೆರೆ ಭಾಗದ ಹೆಗ್ಗೆರೆ ನಿಲ್ದಾಣದ ಪಾದಚಾರಿಗಳ ಮೇಲ್ಸೇತುವೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಆ.1ರಂದು ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಮಾಡಲಾಗುತ್ತಿದೆ. ಹಾಗಾಗಿ ಶಿವಮೊಗ್ಗ ಸೇರಿದಂತೆ ವಿವಿಧ ರೈಲುಗಳ (Train) ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಯಾವ್ಯಾವ ರೈಲು ಸೇವೆ ವ್ಯತ್ಯಯ?
ರೈಲು ಭಾಗಶಃ ರದ್ದು:
ರೈಲು ಸಂಖ್ಯೆ 06514 ಶಿವಮೊಗ್ಗ ಟೌನ್-ತುಮಕೂರು ವಿಶೇಷ ಡೆಮು ರೈಲು (Train) – ತಿಪಟೂರು ಮತ್ತು ತುಮಕೂರು ನಿಲ್ದಾಣಗಳ ನಡುವೆ ಆಗಸ್ಟ್ 1 ರಂದು ಭಾಗಶಃ ರದ್ದುಗೊಳಿಸಲಾಗುತ್ತಿದೆ.
ಇದನ್ನೂ ಓದಿ – GOOD NEWS | ಶಿವಮೊಗ್ಗ – ಬೆಂಗಳೂರು ವಿಮಾನದ ಟಿಕೆಟ್ ಬುಕಿಂಗ್ ಆರಂಭ, ಎಷ್ಟಿದೆ ದರ? ಬುಕ್ ಮಾಡುವುದು ಹೇಗೆ?
ರೈಲುಗಳು ತಡವಾಗಿ ಪ್ರಾರಂಭ
ಆಗಸ್ಟ್ 1 ರಂದು ತುಮಕೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 06512 ತುಮಕೂರು-ಬಾನಸವಾಡಿ ಡೆಮು ವಿಶೇಷ ರೈಲು 120 ನಿಮಿಷ ತಡವಾಗಿ ಪ್ರಾರಂಭವಾಗಲಿದೆ.
ಇದನ್ನೂ ಓದಿ – ಸದ್ಯದಲ್ಲೇ ಶಿವಮೊಗ್ಗದಿಂದ ಗೋವಾ ಸೇರಿ 3 ರೂಟ್ನಲ್ಲಿ ವಿಮಾನ ಹಾರಾಟ, ಸರ್ಕಾರದ ಘೋಷಣೆ
ಆಗಸ್ಟ್ 1 ರಂದು ತುಮಕೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16567 ತುಮಕೂರು-ಶಿವಮೊಗ್ಗ ಟೌನ್ ಡೈಲಿ ವಿಶೇಷ ಎಕ್ಸ್ಪ್ರೆಸ್ ರೈಲು 15 ನಿಮಿಷ ತಡವಾಗಿ ಪ್ರಾರಂಭವಾಗಲಿದೆ.
ರೈಲು ನಿಯಂತ್ರಣ
ರೈಲು ಸಂಖ್ಯೆ 12089 ಕೆ.ಎಸ್.ಆರ್ ಬೆಂಗಳೂರು-ಶಿವಮೊಗ್ಗ ಟೌನ್ ಜನಶತಾಬ್ದಿ ಎಕ್ಸ್ಪ್ರೆಸ್ ರೈಲನ್ನು ಆಗಸ್ಟ್ 1 ರಂದು ಮಾರ್ಗ ಮಧ್ಯ 30 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422