ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 13 ಅಕ್ಟೋಬರ್ 2019
ಶಿವಮೊಗ್ಗ – ಯಶವಂತಪುರ ಜನಶತಾಬ್ದಿ ರೈಲ್ವೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಈ ಕುರಿತು ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದೆ.
ಜನಶತಾಬ್ದಿ ರೈಲಿನ ವೇಗಮಿತಿಯನ್ನು ಹೆಚ್ಚಳ ಮಾಡಲಾಗಿದೆ. ಹಾಗಾಗಿ, ಇನ್ಮುಂದೆ ಕೇವಲ ನಾಲ್ಕು ಗಂಟೆ ಇಪ್ಪತ್ತು ನಿಮಿಷದಲ್ಲಿ ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಸಂಚರಿಸಬಹುದಾಗಿದೆ.
ಇನ್ನು, ವಾರದಲ್ಲಿ ಆರು ದಿನವಷ್ಟೆ ಸಂಚರಿಸುತ್ತಿದ್ದ ಜನಶತಾಬ್ದಿ ರೈಲನ್ನು ವಿಸ್ತರಣೆ ಮಾಡಲಾಗಿದೆ. ಇನ್ಮುಂದೆ ವಾರ ಪೂರ್ತಿ ರೈಲು ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಅರ್ಧ ಗಂಟೆ ಮುಂಚೆ ಶಿವಮೊಗ್ಗ ತಲುಪಲಿದೆ
ಜನಶತಾಬ್ದಿ ರೈಲು ಸಂಖ್ಯೆ 12089 ಬೆಂಗಳೂರಿನ ಯಶವಂತಪುರದಿಂದ ಸಂಜೆ 5.30ಕ್ಕೆ ಹೊರಡಲಿದೆ. ರಾತ್ರಿ 9.55ಕ್ಕೆ ಶಿವಮೊಗ್ಗ ತಲುಪಲಿದೆ. ಈ ಹಿಂದೆ ರಾತ್ರಿ 10.25ಕ್ಕೆ ಶಿವಮೊಗ್ಗಕ್ಕೆ ಬರುತ್ತಿತ್ತು.
ಬೆಂಗಳೂರಿನಿಂದ ಬರುವಾಗ ತುಮಕೂರು ನಿಲ್ದಾಣದಲ್ಲಿ 6.33 ರಿಂದ 6.35ರವರೆಗೆ ನಿಲುಗಡೆ, ಕಡೂರಿನಲ್ಲಿ 8.42 ರಿಂದ 8.43ರವರೆಗೆ, ಭದ್ರಾವತಿಯಲ್ಲಿ 9.32 ರಿಂದ 9.33ರವರೆಗೆ ನಿಲುಗಡೆಯಾಗಲಿದೆ.
ಶಿವಮೊಗ್ಗದಿಂದ ಹೊರಡುವ ಟೈಮ್ ಬದಲು
ಇನ್ನು, ಜನಶತಾಬ್ದಿ ರೈಲು ಶಿವಮೊಗ್ಗದಿಂದ ಹೊರಡುವ ಸಮಯವನ್ನು ಬದಲಾವಣೆ ಮಾಡಲಾಗಿದೆ. ಈ ಮೊದಲು ಬೆಳಗ್ಗೆ 5.15ಕ್ಕೆ ಹೊರಡುತ್ತಿತ್ತು. ಇನ್ಮುಂದೆ 5.30ಕ್ಕೆ ಹೊರಡಲಿದೆ. ಬೆಳಗ್ಗೆ 9.50ಕ್ಕೆ ಯಶವಂತಪುರ ರೈಲ್ವೆ ನಿಲ್ದಾಣ ತಲುಪಲಿದೆ. ಈ ಮೊದಲು ಇದೆ ರೈಲು 10.10ಕ್ಕೆ ಯಶವಂತಪುರ ತಲುಪುತ್ತಿತ್ತು.
ಶಿವಮೊಗ್ಗದಿಂದ ಹೊರಡುವಾಗ ಭದ್ರಾವತಿಯಲ್ಲಿ 5.49 ರಿಂದ 5.50ರವರೆಗೆ ನಿಲುಗಡೆ ಮಾಡಲಾಗುತ್ತದೆ. ಕಡೂರಿನಲ್ಲಿ 6.41 ರಿಂದ 6.42ರವರೆಗೆ, ತುಮಕೂರಿನಲ್ಲಿ 8.38 ರಿಂದ 8.40ರವರೆಗೆ ನಿಲುಗಡೆಯಾಗುತ್ತದೆ.
ವೇಳಾಪಟ್ಟಿ ಬದಲಾವಣೆ ಅಕ್ಟೋಬರ್ 14ರಿಂದ ಜಾರಿಗೆ ಬರಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ಮುಂದೆ ವಾರಪೂರ್ತಿ ಸಂಚರಿಸಲಿದೆ
ಜನಶತಾಬ್ದಿ ರೈಲನ್ನು ಇನ್ಮುಂದೆ ವಾರ ಪೂರ್ತಿ ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈವರೆಗೆ ಮಂಗಳವಾರ ಹೊರತುಪಡಿಸಿ, ಉಳಿದೆಲ್ಲ ದಿನವು ಜನಶತಾಬ್ದಿ ರೈಲು ಸಂಚರಿಸುತ್ತಿತ್ತು. ಆದರೆ ಇನ್ಮುಂದೆ ಮಂಗಳವಾರವು ಜನಶತಾಬ್ದಿ ರೈಲು ಸಂಚರಿಸಲಿದೆ. ಅಕ್ಟೋಬರ್ 15ರ ಮಂಗಳವಾರದಂದು ರೈಲು ಬೆಳಗ್ಗೆ ಶಿವಮೊಗ್ಗದಿಂದ ಹೊರಡಲಿದೆ. ಆ ದಿನ ಸಂಜೆ ಯಶವಂತಪುರದಿಂದ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು, ಜನಶತಾಬ್ದಿ ರೈಲು ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿರುವುದಕ್ಕೆ ಸಂಸದ ಬಿ.ವೈ.ರಾಘವೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ಬೆಂಗಳೂರಿನ ಕಚೇರಿಗಳಿಗೆ, ವಾಣಿಜ್ಯ ಉದ್ದೇಶಕ್ಕಾಗಿ ತೆರಳಿ ಅದೇ ದಿನ ವಾಪಸ್ಸು ಬರುವಲ್ಲಿ ಬಹಳ ಸಹಕಾರಿಯಾಗಲಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422