ಹಸುವನ್ನು ರಕ್ಷಿಸಲು ಬಾವಿಗೆ ಇಳಿದ ವ್ಯಕ್ತಿ ಉಸಿರುಗಟ್ಟಿ ಸಾವು, ಎಲ್ಲಿ? ಹೇಗಾಯ್ತು ಘಟನೆ?

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ಕೋಣಂದೂರು : ಹಸುವನ್ನು ರಕ್ಷಿಸಲು ಬಾವಿಗಿಳಿದಿದ್ದ ವ್ಯಕ್ತಿ ಉಸಿರುಗಟ್ಟಿ (Suffocation) ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ತಾಲೂಕು ಕೋಣಂದೂರು ಸಮೀಪದ ಕಾರ್ಕೊಡ್ಲುವಿನಲ್ಲಿ ಘಟನೆ ಸಂಭವಿಸಿದೆ. ಕೇರಳದ ಸತೀಶ್ (45) ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಕಾರ್ಕೊಡ್ಲುವಿನಲ್ಲಿ ರಾಘು ಎಂಬುವರು ಈಚೆಗೆ ರಿಂಗ್ ಬಾವಿ ನಿರ್ಮಿಸಿದ್ದರು. ಮಂಗಳವಾರ ಹಸುವೊಂದು ಆಕಸ್ಮಿಕವಾಗಿ ಆ ಬಾವಿಗೆ ಬಿದ್ದಿತ್ತು. ಅದನ್ನು ರಕ್ಷಿಸಲು ಸತೀಶ್ ಬಾವಿಗೆ ಇಳಿದಿದ್ದರು. ಈ ಸಂದರ್ಭ ಉಸಿರುಗಟ್ಟಿ (Suffocation) ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.

KONANDUR-THIRTHAHALLI-NEWS

ಸತೀಶ್‌ ಮತ್ತು ಹಸುವಿನ ಮೃತದೇಹವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಬುಧವಾರ ಬಾವಿಯಿಂದ ಮೇಲಕ್ಕೆ ತೆಗೆದರು. ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸತೀಶ್‌ ಅವರ ಮೃತದೇಹವನ್ನು ಕೇರಳಕ್ಕೆ ಕಳುಹಿಸಿಕೊಡಲಾಗಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗ ಪಾಲಿಕೆ ವಲಯ ಕಚೇರಿಗೆ ವಾರ್ಡ್‌ಗಳ ವಿಂಗಡಣೆ ಅವೈಜ್ಞಾನಿಕ, ಜೆಡಿಎಸ್‌ ಆಕ್ರೋಶ, ಮನವಿಯಲ್ಲಿ ಏನೇನಿದೆ?

ಹೆಚ್ಚಿನ Shimoga News, Shivamogga News ಮತ್ತು NEWS ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಮಾರ್ಚ್ 20, 2025

Leave a Comment