ಶಿವಮೊಗ್ಗದಲ್ಲಿ ಮತದಾನ ಆರಂಭ, ಬೆಳಗ್ಗೆಯಿಂದಲೇ ಮತದಾರರಲ್ಲಿ ಉತ್ಸಾಹ, ಅಲ್ಲಲ್ಲಿ ತಾಂತ್ರಿಕ ದೋಷ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 7 MAY 2024

ELECTION NEWS : ರಾಜ್ಯದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆ ಮತದಾನ ಆರಂಭವಾಗಿದೆ. ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿಯು ಮತದಾನ ಚುರುಕುಗೊಂಡಿದೆ. ಬೆಳಗ್ಗೆಯಿಂದಲೆ ಮತದಾರರು ತಮ್ಮ ಹಕ್ಕು ಚಲಾಯಿಸಲು ಉತ್ಸಾಹ ತೋರಿಸುತ್ತಿದ್ದಾರೆ.

ಕ್ಷೇತ್ರ ವ್ಯಾಪ್ತಿಯಲ್ಲಿ 2039 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಈಗಾಗಲೇ ಹಲವು ಕಡೆ ಮತದಾರರು ಸರತಿಯಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ 23 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಹಿನ್ನೆಲೆ ಎರಡು ಮತ ಯಂತ್ರಗಳನ್ನು ಇರಿಸಲಾಗಿದೆ.

ಮತದಾನ ಆರಂಭಕ್ಕೂ ಮತ ಯಂತ್ರ ಪರೀಕ್ಷೆಗೆ ಅಣಕು ಮತದಾನ ನಡೆಸಲಾಯಿತು. ಎಲ್ಲ ಪಕ್ಷ, ಅಭ್ಯರ್ಥಿಗಳ ಏಜೆಂಟರು ಮತ ಚಲಾಯಿಸಿ ಪರೀಕ್ಷಿಸಿದರು. ಮತಯಂತ್ರವನ್ನು ಜೀರೋ ಮಾಡಿ, ಮತದಾನ ಪ್ರಕ್ರಿಯೆ ಆರಂಭಿಸಲಾಯಿತು. ಮತದಾನ ಆರಂಭವಾಗುತ್ತಿದ್ದಂತೆ ಅಲ್ಲಲ್ಲಿ ತಾಂತ್ರಿಕ ದೋಷದ ವರದಿಯಾಗಿದೆ. ಆದರೆ ಮತದಾನ ನಿಂತಿಲ್ಲ.

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ 64 ವಿಶೇಷ ಮತಗಟ್ಟೆಗಳು, ಅಲಂಕೃತಗೊಂಡು ಮತದಾರರ ಸ್ವಾಗತಕ್ಕೆ ಸಜ್ಜು

Leave a Comment