ಹೆದ್ದಾರಿಯಲ್ಲೇ ಮಂಗಗಳ ಕಾಳಗ, ವಾಹನ ಸಂಚಾರ ಸ್ಥಗಿತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS, 10 DECEMBER 2024

ಸಾಗರ : ಮಂಗಗಳ (Monkeys) ಎರಡು ಗುಂಪುಗಳ ನಡುವಿನ ಕಾಳಗದಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸಾಗರ ತಾಲೂಕು ಜೋಗ ಸಮೀಪ ಸೋಮವಾರ ಘಟನೆ ನಡೆದಿದೆ.

ಕಾಡಿನಲ್ಲಿ ಎರಡು ಮಂಗಗಳ ಗುಂಪುಗಳ ಮಧ್ಯೆ ಆರಂಭವಾದ ಗಲಾಟೆ ಕೊನೆಗೆ ಹೆದ್ದಾರಿಗೆ ವಿಸ್ತರಣೆಯಾಗಿತ್ತು. ಹೆದ್ದಾರಿಗೆ ನುಗ್ಗಿದ ಮಂಗಳು ಪರಸ್ಪರ ಬಡಿದಾಡಿಕೊಂಡು, ಕೂಗಾಟ ಆರಂಭಸಿದವು. ಸುಮಾರು ನೂರು ಮಂಗಗಳು ರಸ್ತೆಯಲ್ಲೇ ಕೈ ಕೈ ಮಿಲಾಯಿಸಿದವು.

Monkeys-groupism-led-to-road-block-near-sagara.

ಒಂದು ಗುಂಪಿನ ಮಂಗಗಳನ್ನು ಮತ್ತೊಂದು ಗುಂಪಿನ ಮಂಗಗಳು ಅಟ್ಟಾಡಿಸಿ ಓಡಿಸಿದವು. ಕೆಲವೇ ಕ್ಷಣದಲ್ಲಿ ಪರಿಸ್ಥಿತಿ ಉಲ್ಟಾ ಆಗುತ್ತಿತ್ತು. ಮಂಗಗಳ ಕಾಳಗದಿಂದಾಗಿ ಜೋಗ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಚಾಲಕರು ಎಷ್ಟೇ ಹಾರನ್‌ ಹೊಡೆದರು ಮಂಗಗಳು ವಾಹನಗಳಿಗೆ ದಾರಿ ಬಿಡಲಿಲ್ಲ. ಇದರಿಂದ ಅರ್ಧ ಗಂಟೆಗು ಹೆಚ್ಚು ಕಾಲ ವಾಹನ ಸವಾರರು ಕಾಯುವಂತಾಯಿತು. ಈ ಸಂದರ್ಭ ಜೋಗ ಜಲಪಾತದ ಗೈಡ್‌ ನಾಗರಾಜ್‌ ಅವರು ವಿಡಿಯೋ ಚಿತ್ರೀಕರಣ ಮಾಡಿದ್ದು ಶಿವಮೊಗ್ಗ ಲೈವ್.ಕಾಂಗೆ ಲಭ್ಯವಾಗಿದೆ. ಈ ವಿಡಿಯೋ ಇಲ್ಲಿದೆ.

ಇದನ್ನೂ ಓದಿ » ತೀರ್ಥಹಳ್ಳಿಯ ಅಳಿಯ ಎಸ್‌.ಎಂ.ಕೃಷ್ಣ ಇನ್ನಿಲ್ಲ, ಕುಡುಮಲ್ಲಿಗೆಯಲ್ಲಿ ನೀರವ ಮೌನ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment