ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 7 MAY 2024
RAINFALL REPORT : ದೇಶಾದ್ಯಂತ ಈ ಬಾರಿ ಮುಂಗಾರು ಉತ್ತಮವಾಗಿರಲಿದೆ ಎಂದು ವಿವಿಧ ಹವಾಮಾನ ಅಧ್ಯಯನ ಸಂಸ್ಥೆಗಳು ವರದಿ ಮಾಡಿವೆ. ಇದರಿಂದ ದೇಶದ ರೈತರ ಮೊಗದಲ್ಲಿ ಮಂದಾಹಸ ಮೂಡಿದೆ. ಬಿಸಿಲಿನಿಂದ ಹೈರಾಣಾಗಿರುವ ಜನರು ತುಸು ನೆಮ್ಮದಿಯ ನಿಟ್ಟುಸಿರು ಬಿಟಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯ ಜಿಯೋಜಿಟ್ ಇನ್‌ಸೈಟ್ ವರದಿ ಪ್ರಕಾರ, ಈ ಬಾರಿ ಮುಂಗಾರು ವಾಡಿಕೆಗಿಂತಲೂ ಉತ್ತಮವಾಗಿರಲಿದೆ. ಸಾಮಾನ್ಯಕ್ಕಿಂತಲೂ ಹೆಚ್ಚು ಮಳೆಯಾಗಲಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಶೇ.106ರಷ್ಟು ಮಳೆ ಸುರಿಯುವ ಸಂಭವವಿದೆ ಎಂದು ಅಂದಾಜಿಸಿದೆ.
ಸ್ಕೈಮೇಟ್ ಸಂಸ್ಥೆ ಮತ್ತು ಏಷ್ಯಾ ಪೆಸಿಫಿಕ್ ಎಕಾನಾಮಿಕ್ ಕೋಆಪರೇಷನ್ ಸಂಸ್ಥೆಗಳು, ಮುಂಗಾರು ಉತ್ತಮವಾಗಿರಲಿದೆ ಎಂದು ತಿಳಿಸಿವೆ.
ಎನ್ ನೀನೊ ಚಂಡಮಾರುತ ಸೇರಿದಂತೆ ನಾನಾ ಕಾರಣಕ್ಕೆ ಕಳೆದ ವರ್ಷ ಮುಂಗಾರು ದುರ್ಬಲಗೊಂಡಿತ್ತು. ನಂತರ ಉತ್ತಮ ಮಳೆಯಾಗುವ ಪ್ರದೇಶದಲ್ಲಿ ಕಡಿಮೆ ಮಳೆಯಾಗಿತ್ತು. ರಾಜಸ್ಥಾನ, ಸೌರಾಷ್ಟ್ರ, ಕಚ್ ಸೇರಿದಂತೆ ಹಲವು ಕಡೆ ಭಾರಿ ಮಳೆಯಾಗಿತ್ತು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಮೂರು ದಿನ ಮಳೆ ಸಂಭವ, ಇವತ್ತು ಎಷ್ಟಿರುತ್ತೆ ತಾಪಮಾನ? ಇಲ್ಲಿದೆ ಇಡೀ ದಿನದ ರಿಪೋರ್ಟ್
LATEST NEWS
- ಶಿವಮೊಗ್ಗದಲ್ಲಿ ಬಂಜಾರ ಮುಖಂಡರು ಪೊಲೀಸ್ ವಶಕ್ಕೆ, ಸಭೀಕರಿಲ್ಲದೆ ನಡೆಯಿತು ಸೇವಾಲಾಲ್ ಜಯಂತಿ

- ಶಿವಮೊಗ್ಗದಲ್ಲಿ ಕೆಎಎಸ್ ಅಧಿಕಾರಿ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ, ಆಗಿದ್ದೇನು?

- ಬಿಳಕಿಯಲ್ಲಿ ಅಂಗನವಾಡಿ ಸಹಾಯಕಿ ಮೃತದೇಹ ಪತ್ತೆ

- ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆ, ಸ್ಥಳಕ್ಕೆ ತುಂಗಾ ನಗರ ಪೊಲೀಸರು ದೌಡು

- ಭದ್ರಾವತಿ ವ್ಯಕ್ತಿಗೆ 2 ವರ್ಷ ಜೈಲು, ₹10,000 ದಂಡ, ಕಾರಣ ಹೂವಿನ ಗಿಡ

About The Editor
ನಿತಿನ್ ಆರ್.ಕೈದೊಟ್ಲು






